Homeಬೆಂಗಳೂರುಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪಿ ಬಂಧನ

ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪಿ ಬಂಧನ

ಬೆಂಗಳೂರು,ಜು.24- ಪ್ರಧಾನಿ ನರೇಂದ್ರಮೋದಿ ಅವರನ್ನು ಗುರಿಯಾಗಿಟ್ಟುಕೊಂಡು ನಿಂದನೀಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್‌ ಮಾಡಿದ ಆರೋಪದ ಮೇಲೆ 21 ವರ್ಷದ ಬೀದಿ ಬದಿ ವ್ಯಾಪಾರಿಯನ್ನು ಬಂಧಿಸಲಾಗಿದೆ.ಆರೋಪಿಯನ್ನು ಬೆಂಗಳೂರಿನ ಪೂರ್ವದ ಲಿಂಗರಾಜಪುರಂ ನಿವಾಸಿ ಹಡ್ಸನ್‌ ಎಂದು ಗುರುತಿಸಲಾಗಿದೆ. ಈತ ಬಿಎ ಪದವಿಪೂರ್ವ ವಿದ್ಯಾರ್ಥಿಯಾಗಿದ್ದಾನೆ.

ವಿವಾದಾತಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದ ದೂರಿನ ನಂತರ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಹಡ್ಸನ್‌ ಮಂಗಳವಾರ ಸಂಜೆ ರೀಲ್‌ ಮಾಡಿ ಅದನ್ನು ತನ್ನ ಇನ್ಸ್ಟಾಗ್ರಾಮ್‌ ಖಾತೆಗೆ ಅಪ್‌ಲೋಡ್‌ ಮಾಡಿದ್ದ. ಈ ಬಗ್ಗೆ ಸರ್ವಜ್ಞನಗರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅಭಿಲಾಶ್‌ ರೆಡ್ಡಿ ಅವರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು.

ಹಡ್ಸನ್‌ ಅಲಿಯಾಸ್‌‍ ರೆಮೋ ಕಲ್ಯಾಣನಗರದ ಎಚ್‌ಆರ್‌ಬಿಆರ್‌ ಲೇಔಟ್‌ನ ಸಿಎಂಆರ್‌ ಮುಖ್ಯರಸ್ತೆಯ ಫುಟ್‌ಪಾತ್‌ನಲ್ಲಿ ಪಾಂಡಿಯಸ್‌‍ ಬಿರಿಯಾನಿ ಸ್ಟಾಲ್‌ ನಡೆಸುವ ಹಡ್ಸನ್‌ ತನ್ನ ಸ್ನೇಹಿತನ ಫೋನ್‌ ಬಳಸಿ ರೀಲ್‌್ಸ ಮಾಡಿದ್ದಾನೆ. ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ಜನರ ತಲೆಗೆ ಹೊಲಿಗೆ ಹಾಕಿ ಬೀದಿಗಳಲ್ಲಿ ಹೊಡೆಯುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ನೀವು ಏನು ಮಾಡುತ್ತಿದ್ದೀರಿ? ನೀವು ಎಲ್ಲಿದ್ದೀರಿ? ವಿದ್ಯಾರ್ಥಿಗಳನ್ನು ಬೀದಿಗಳಲ್ಲಿ ಅಮಾನುಷವಾಗಿ ಹೊಡೆಯುವುದನ್ನು ನಾನು ನೋಡುತ್ತಿದ್ದೇನೆ ಎಂದು ಪ್ರಶ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ದೂರಿನ ಮೇರೆಗೆ ಹಡ್ಸನ್‌ನನ್ನು ಬಂಧಿಸಲಾಗಿದ್ದು, ರೀಲ್‌ ಅನ್ನು ತಯಾರಿಸಿ ಅದನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಅಪ್‌ಲೋಡ್‌ ಮಾಡಿದ್ದಾಗಿ ಹಡ್ಸನ್‌ ಒಪ್ಪಿಕೊಂಡಿದ್ದು, ಅವನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಸೆಕ್ಷನ್‌ 196 (ಧರ್ಮ, ಜನಾಂಗ, ಜನ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ದುಷ್ಪರಿಣಾಮ ಬೀರುವ ಕೃತ್ಯಗಳು) ಮತ್ತು 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ)ನಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES
spot_img

Latest News