Homeಬೆಂಗಳೂರುಬೆಂಗಳೂರು : ಪಿಜಿಯೊಂದರಲ್ಲಿ 8 ಮೊಬೈಲ್‌ಗಳ ಕಳ್ಳತನ

ಬೆಂಗಳೂರು : ಪಿಜಿಯೊಂದರಲ್ಲಿ 8 ಮೊಬೈಲ್‌ಗಳ ಕಳ್ಳತನ

Bangalore: Eight mobile phones stolen from a PG

ಬೆಂಗಳೂರು,ಜೂ.1-ಪಿಜಿಯೊಂದಕ್ಕೆ ನುಗ್ಗಿದ ಚೋರರು ಕೊಠಡಿಗಳಲ್ಲಿ ಚಾರ್ಜಿಂಗ್‌ಗೆ ಹಾಕಿದ್ದ ಎಂಟು ದುಬಾರಿ ಬೆಲೆಯ ಮೊಬೈಲ್‌ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬಂಡೆಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಪಾಳ್ಯದ ಕೂಡ್ಲು ಮುಖ್ಯರಸ್ತೆಯಲ್ಲಿ ಬಾಯ್ಸ್ ಪಿಜಿ ಇದ್ದು, ಇಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ನೆಲೆಸಿದ್ದಾರೆ. ಕ್ಯಾಬ್‌ ಚಾಲಕ ದರ್ಶನ್‌ ಎಂಬುವವರು ಕೆಲಸ ಮುಗಿಸಿಕೊಂಡು ಪಿಜಿಗೆ ಬಂದು ತಮ ಕೊಠಡಿಯಲ್ಲಿ ಎರಡು ಮೊಬೈಲ್‌ಗಳನ್ನು ಚಾರ್ಜಿಂಗ್‌ಗೆ ಹಾಕಿ ಬಾಗಿಲು ಹಾಕಿಕೊಳ್ಳದೆ ನಿದ್ರೆಗೆ ಜಾರಿದ್ದಾರೆ.

ಮಾರನೇ ದಿನ ಮುಂಜಾನೆ 6 ಗಂಟೆಗೆ ದರ್ಶನ್‌ ಎದ್ದು ಮೊಬೈಲ್‌ ಹುಡುಕಾಡಿದ್ದಾರೆ. ಆದರೆ ಮೊಬೈಲ್‌ಗಳು ಸಿಗಲಿಲ್ಲ. ಪಕ್ಕದ ಕೊಠಡಿಗಳಿಗೆ ಹೋಗಿ ವಿಚಾರಿಸಿದಾಗ ಅಲ್ಲಿಯೂ ಸಹ ಮೊಬೈಲ್‌ಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ಕಳ್ಳರು ಒಟ್ಟು ಎಂಟು ಮೊಬೈಲ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಇವರುಗಳು ರೂಮ್‌ನ ಬಾಗಿಲು ಹಾಕಿಕೊಳ್ಳದೇ ಮಲಗಿದ್ದರಿಂದ ಚಾಲಾಕಿ ಕಳ್ಳ ಒಳಗೆ ನುಗ್ಗಿ ಕೈಗೆ ಸಿಕ್ಕಿದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿರುವುದು ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.ಈ ಬಗ್ಗೆ ಬಂಡೇಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಬೈಲ್‌ ಚೋರನ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES
spot_img

Latest News