Homeರಾಜ್ಯಆರ್‌ಸಿಬಿ ಗೆಲುವು : ಅಹಿತಕರ ಘಟನೆಗಳಾಗದಂತೆ ಎಚ್ಚರಿಕೆ ವಹಿಸಲು ಡಿಕೆಶಿ ಸೂಚನೆ

ಆರ್‌ಸಿಬಿ ಗೆಲುವು : ಅಹಿತಕರ ಘಟನೆಗಳಾಗದಂತೆ ಎಚ್ಚರಿಕೆ ವಹಿಸಲು ಡಿಕೆಶಿ ಸೂಚನೆ

RCB win: DK Shivakumar advises to be careful to avoid any untoward incidents

ಬೆಂಗಳೂರು, ಜೂ. 1- ಆರ್‌ಸಿಬಿ ಗೆಲುವಿನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಎಚ್ಚರಿಕೆ ವಹಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದಂತಹ ಕಹಿ ಘಟನೆಗಳು ಮರುಕಳಿಸಬಾರದು, ಆರ್‌ಸಿಬಿಯ ಯುವ ತಂಡ ಉತ್ತವಾಗಿ ಆಟ ಆಡಿ, ಗೆಲುವಿನ ಪಯಣವನ್ನು ಮುಂದುವರೆಸಿದೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಐಪಿಎಲ್‌ ಕ್ರಿಕೆಟ್‌ನಲ್ಲಿ ಹೊಸತನ ಆರಂಭವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್‌ ಗೆಲುವಿಗೆ ಸಾಕ್ಷೀಕರಿಸಬೇಕಿತ್ತು. ಇದು ಸಾಧ್ಯವಾಗದೇ ಇರುವುದರಿಂದ ಯುವಕರಿಗೆ ನಿರಾಶೆಯಾಗಿದೆ. ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ.

ಬೆಂಗಳೂರಿನಲ್ಲಿ ಅಂತಿಮ ಪಂದ್ಯ ನಡೆಯಲು ನಾವು ಅನುಮತಿ ನೀಡಿದ್ದೆವು. ಆದರೆ ಗುಜರಾತ್‌ನವರು ತಮ ಪ್ರಭಾವ ಬಳಸಿ ನಮಿಂದ ಕಿತ್ತುಕೊಂಡು ಹೋಗಿದ್ದಾರೆ. ಮುಂದೆ ಈ ರೀತಿಯಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತೇವೆ. ನಮ ಕ್ರೀಡಾಂಗಣಕ್ಕೆ ಮತ್ತು ಯುವಕರಿಗೆ ಐಪಿಎಲ್‌ ಅಂತಿಮ ಪಂದ್ಯದ ವಿಚಾರವಾಗಿ ಅನ್ಯಾಯವಾಗಿದೆ ಎಂದು ಹೇಳಿದರು.

ದೆಹಲಿ ಪ್ರಯಾಣ:
ಸಚಿವ ಸಂಪುಟ ರಚನೆ ಸೇರಿದಂತೆ ಇತರ ವಿಚಾರಗಳ ಕುರಿತು ಚರ್ಚಿಸಲು ದೆಹಲಿಗೆ ಭೇಟಿ ನೀಡುತ್ತಿರುವುದಾಗಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ಸಂಪುಟದ ಸಚಿವರ ಪಟ್ಟಿ ಇದೇ ದಿನ ಅಂತಿಮಗೊಳ್ಳಲಿದೆಯೇ? ಎಂಬ ಕುರಿತಂತೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್‌ ನಿರಾಕರಿಸಿದರು.

RELATED ARTICLES
spot_img

Latest News