ಬೆಂಗಳೂರು,ಸೆ.12- ಸ್ವಸ್ತಿಕ್ ಯುವಕರ ಸಂಘದ ವತಿಯಿಂದ ಸೆ.14ರಿಂದ 22 ರವರೆಗೆ ಹಮಿಕೊಂಡಿರುವ 41ನೇ ವರ್ಷದ ಮಿಲ್‌್ಕ ಕಾಲೋನಿ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತೀವರ್ಷ ರಾಜಾಜಿನಗರದ 2ನೇ ಹಂತದ 5ನೇ ಮುಖ್ಯರಸ್ತೆಯ ಮಿಲ್‌್ಕಕಾಲೋನಿ ಸ್ವಸ್ತಿಕ್ ಯುವಕರ ಸಂಘದ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ 16 ಲಕ್ಷ ರೂ. ಮೌಲ್ಯದ ಆಂಧ್ರಪ್ರದೇಶದ ಲೇಪಾಕ್ಷಿ ದೇವಾಲಯದ ಮಾದರಿ ನಿರ್ಮಾಣ ಮಾಡಲಾಗಿದೆ.
ಮುಂಬೈ ಮತ್ತು ಸೊಲ್ಲಾಪುರದ ಕಲಾವಿದರಿಂದ ತಯಾರಾದ ಸುಮಾರು 14 ಲಕ್ಷ ರೂ. ಮೌಲ್ಯದ ಕಾರ್ಯಸಿದ್ಧಿ ಡೈಮಂಡ್ ಗಣೇಶ ಪ್ರತಿಷ್ಠಾಪನೆ ಮಾಡಲಾಗುವುದು. 14 ರಂದು ಗಣಹೋಮ, ಸಹಸ್ರಮೋದಕ ಹೋಮದೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಚಲನಚಿತ್ರ ನಿರ್ಮಾಪಕ ಡಿ.ಸುರೇಶಗೌಡ್ರು, ಮಾಜಿ ಬಿಬಿಎಂಪಿ ಸದಸ್ಯ ಎಚ್.ಮಂಜುನಾಥ್, ಬಿಜೆಪಿ ಮುಖಂಡ ಎನ್.ನಾಗರಾಜ್, ಅನಿಲ್ ಅನಂತ, ಟಿ.ಸುರೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಟರಾದ ಉಪೇಂದ್ರ, ವಿನಯ್‌ರಾಜ್‌ಕುಮಾರ್, ವಿಜಯರಾಘವೇಂದ್ರ, ಮಿಲನ ಡಾರ್ಲಿಂಗ್ ಕೃಷ್ಣ, ವಜ್ರೇಶ್ವರಿ ಕಂಬೈನ್‌್ಸನ ಚೆನ್ನಣ್ಣ(ಚೆನ್ನ) ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. 15 ರಂದು ಸುಬ್ರಹಣ್ಯ ಹೋಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 16 ರಂದು ನಾರಾಯಣ ಹೋಮ, ಸಂಜೆ 7 ಗಂಟೆಗೆ H2O ತಂಡದಿಂದ ಮ್ಯೂಸಿಕಲ್ ನೈಟ್, 17 ರಂದು ನವಗ್ರಹ ಹೋಮ, ಸಂಜೆ 7 ಗಂಟೆಗೆ ಗುರುರಾಜ ಹೊಸಕೋಟೆ ತಂಡದವರಿಂದ ಸಂಗೀತ ಸಂಜೆ, 18 ರಂದು ಮಹಾಲಕ್ಷ್ಮಿ ಹೋಮ, ಸಂಜೆ 7 ಗಂಟೆಗೆ ವೃದ್ಧಿ ದಿ ಬ್ಯಾಂಡ್ ತಂಡದವರಿಂದ ಮ್ಯೂಸಿಕಲ್ ಈವೆಂಟ್ ನಡೆಯಲಿದೆ.
19 ರಂದು ಮೃತ್ಯುಂಜಯ ಹೋಮ, ಸಂಜೆ 7 ಗಂಟೆಗೆ ಗುರುಕಿರಣ್ ತಂಡದವರಿಂದ ಸಂಗೀತ ಕಾರ್ಯಕ್ರಮ, 20 ರಂದು ಸುದರ್ಶನ ಹೋಮ, ಶ್ರೀ ಹರ್ಷ ತಂಡದಿಂದ ಸಂಗೀತ ಸಂಜೆ, 21 ರಂದು ಸತ್ಯ ನಾರಾಯಣ ಪೂಜೆ, ಲಕ್ಷ್ಮಿನಾರಾಯಣ ಹೋಮ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 22 ರಂದು ಶಾಂತಿ ಹೋಮದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
