Homeಬೆಂಗಳೂರುಡಾ.ರಾಜ್‌ಕುಮಾರ್‌ ರಸ್ತೆಗೆ ವೈಟ್‌ಟಾಪಿಂಗ್‌ ಕಾಮಗಾರಿ : ಭಾರೀ ವಾಹನಗಳಿಗೆ ನಿರ್ಬಂಧ

ಡಾ.ರಾಜ್‌ಕುಮಾರ್‌ ರಸ್ತೆಗೆ ವೈಟ್‌ಟಾಪಿಂಗ್‌ ಕಾಮಗಾರಿ : ಭಾರೀ ವಾಹನಗಳಿಗೆ ನಿರ್ಬಂಧ

ಬೆಂಗಳೂರು,ನ.15- ಯಶವಂತಪುರದ ಸೋಪ್‌ ಫ್ಯಾಕ್ಟರಿ ಸರ್ಕಲ್‌ನಿಂದ ರಾಜಾಜಿನಗರ ಪ್ರವೇಶ ದ್ವಾರದವರೆಗೆ ಸಂಪರ್ಕ ಕಲ್ಪಿಸುವ ಡಾ.ರಾಜ್‌ಕುಮಾರ್‌ ರಸ್ತೆಯ ನವರಂಗ್‌ ಥಿಯೇಟರ್‌ ವೃತ್ತದಿಂದ ರಾಜಾಜಿನಗರ ಪೊಲೀಸ್‌‍ ಸ್ಟೇಷನ್‌ ಸಮೀಪದ ರಾಜರಾಜೇಶ್ವರಿ ಕಲ್ಯಾಣಮಂಟಪ ವೃತ್ತದವರೆೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವತಿಯಿಂದ ಮತ್ತೆ ವೈಟ್‌ಟಾಂಪಿಂಗ್‌ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದ್ದು ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ರಾಜಾಜಿನಗರ ವಿಧಾನ ಕ್ಷೇತ್ರ ವ್ಯಾಪ್ತಿಗೊಳಪಡುವ 1.8 ಕಿಮೀ ದೂರದ ರಸ್ತೆಗೆ ವೈಟ್‌ ಟಾಂಪಿಂಗ್‌ ಕಾಮಗಾರಿ ನಡೆಯಲಿದ್ದು 5 ಹಂತಗಳಲ್ಲಿ ಕಾಮಗಾರಿಗಳನ್ನು ಹಮಿಕೊಳ್ಳಲಾಗುವುದು. ಆರಂಭಿಕ ಹಂತವಾಗಿ ನವರಂಗ್‌ ಸರ್ಕಲ್‌ ನಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪದವರೆಗೆ ಕಾಮಗಾರಿ ಆರಂಭವಾಗಿದ್ದು ಇಲ್ಲಿ ರಸ್ತೆಯ ಪಶ್ಚಿಮ ಭಾಗದ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ರಾಜಾಜಿನಗರ ಎಂಟ್ರೆನ್‌್ಸ ಕಡೆಯಿಂದ ರಾಜರಾಜೇಶ್ವರಿ ಕಲ್ಯಾಣ ಮಂಟಪದವರೆಗೆ ದ್ವಿಚಕ್ರ ವಾಹನಗಳು,ಆಟೋ ರಿಕ್ಷಾ,ಕಾರುಗಳಿಗೆ ಸಂಚಾರಕ್ಕೆ ಮುಕ್ತ ಪ್ರವೇಶ ಇರುತ್ತದೆ.ಆದರೆ,ಈ ಕಡೆಯಿಂದ ಕೆಎಸ್‌‍ ಆರ್‌ಟಿಸಿ, ಬಿಎಂಟಿಸಿ,ಲಾರಿಗಳು ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನವರಂಗ್‌ ಸರ್ಕಲ್‌ನಿಂದ ರಾಜಾಜಿನಗರ ಎಂಟ್ರೆನ್‌್ಸವರೆಗೆ ಪೂರ್ವ ಭಾಗದ ರಸ್ತೆಯನ್ನು ಏಕ ಮುಖ ರಸ್ತೆಯನ್ನಾಗಿ ಮಾಡಲಾಗಿದ್ದು,ಎದುರಿನಿಂದ ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದ್ದು,ಕಾನೂನು ಮೀರಿದರೆ ಸಂಚಾರಿ ಪೊಲೀಸರು ಕ್ರಮ ಜರುಗಿಸಲಿದ್ದಾರೆ.

ಎರಡನೇ ಹಂತದಲ್ಲಿ ರಾಜರಾಜೇಶ್ವರಿ ಕಲ್ಯಾಣ ಮಂಟಪದಿಂದ ಟಿವಿಎಸ್‌‍ ಶೋ ರೂಂವರೆಗೆ,ಮೂರನೇ ಹಂತದಲ್ಲಿ ಟಿವಿಎಸ್‌‍ ಶೋ ರೂಂನಿಂದ ನವರಂಗ್‌ ಬಾರ್‌ ಸರ್ಕಲ್‌ ವರೆಗೆ,ನಾಲ್ಕನೇ ಹಂತದಲ್ಲಿ ನವರಂಗ್‌ ಸರ್ಕಲ್‌ ನಿಂದ ಓಲ್‌್ಡ ಆರ್‌ ಟಿಒ ಸರ್ಕಲ್‌ ವರೆಗೆ,ಅಂತಿಮವಾಗಿ ಓಲ್‌್ಡ ಆರ್‌ ಟಿಒ ಸರ್ಕಲ್‌ ನಿಂದ ರಾಜಾಜಿನಗರ ಎಂಟ್ರೆನ್ಸ್ ವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯಲಿದೆ.

ಡಾ.ರಾಜ್‌ ಕುಮಾರ್‌ ರಸ್ತೆಯಲ್ಲಿ ರಾಜಾಜಿನಗರ ಕ್ಷೇತ್ರ ವ್ಯಾಪ್ತಿಯ ಪಶ್ಚಿಮ ಭಾಗದ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಆಗಸ್ಟ್‌ ತಿಂಗಳ ಮೊದಲ ವಾರದಲ್ಲೇ ಆರಂಭವಾಗಬೇಕಿತ್ತು, ಎರಡು ತಿಂಗಳು ವಿಳಂಭವಾಗಿ ಆರಂಭವಾಗಿದೆ. ವೈಟ್‌ ಟಾಪಿಂಗ್‌ ಕಾಮಗಾರಿ ಮುಗಿಯುವವರೆಗೆ ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ಬರುವ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಂಚಾರ ಪೊಲೀಸರಿಗೆ ತಿಳಿಸಲಾಗಿದೆ ಎಂದು ಶಾಸಕ ಎಸ್‌‍.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಹೀಗಾಗಿ ಬೆಂಗಳೂರು ಕಡೆಯಿಂದ ಹೊರಜಿಲ್ಲೆಗಳಿಗೆ ಹೋಗುವ ರಾಜ್ಯ ರಸ್ತೆ ಸಾರಿಗೆ ಬಸ್‌‍ಗಳು ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮೂಲಕ ಸೋಪ್‌ ಫ್ಯಾಕ್ಟರಿ ಸರ್ಕಲ್‌ಗೆ ಸಂಪರ್ಕ ಪಡೆಯಬೇಕಿದೆ. ಸದರಿ ಡಾ.ರಾಜ್‌ ಕುಮಾರ್‌ ರಸ್ತೆಯ ಪೂರ್ವ ಭಾಗದ ವೈಟ್‌ ಟಾಂಪಿಂಗ್‌ ಕಾಮಗಾರಿ ಮುಗಿದು ಈಗ ಸಂಚಾರ ಮುಕ್ತವಾಗಿದೆ. ಆದರೆ ಈ ಕಾಮಗಾರಿ ನಡೆದ ಸುಮಾರು ಎರಡು ವರ್ಷ ಕಾಲ ನಾಗರಿಕರು ನರಕಯಾತನೆ ಅನುಭವಿಸಿದ್ದಾರೆ. ಈ ಬಾರಿಯಾದರೂ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕ ಸೇವೆಗೆ ಮುಕ್ತವಾಗಲಿ ಎಂಬುದು ಸ್ಥಳೀಯ ನಾಗರಿಕರ ಬೇಡಿಕೆಯಾಗಿದೆ.

RELATED ARTICLES

Latest News