ಲಂಡನ್,ನ.15- ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಹಾಗೂ ಮಾಜಿ ಕ್ರಿಕೆಟ್ ಆಡಳಿತಗಾರ ಲಲಿತ್ ಮೋದಿ ಅವರು ತಾವು ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಘೋಷಿಸಿದ್ದಾರೆ. ಸೆಪ್ಟೆಂಬರ್ 15ರಂದು ಬ್ರಿಟಿಷ್ ಪ್ರಜೆಯಾದುದಾಗಿ ತಿಳಿಸಿರುವ ಅವರು, ಇದೊಂದು ಹೆಮೆಯ ಹಾಗೂ ವೈಯಕ್ತಿಕವಾಗಿ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.
ಶನಿವಾರ ಆಕ್್ಸಫರ್ಡ್ ಯೂನಿಯನ್ನಲ್ಲಿ ಮಾತನಾಡಿದ ಲಲಿತ್ ಮೋದಿ, ಬ್ರಿಟಿಷ್ ಪೌರತ್ವ ಪಡೆಯುವವರೆಗಿನ ತಮ ಪ್ರಯಾಣ ಹಾಗೂ ಯುನೈಟೆಡ್ ಕಿಂಗ್ಡಮ್ನೊಂದಿಗಿನ ತಮ ದೀರ್ಘಕಾಲದ ನಂಟಿನ ಕುರಿತು ಮಾತನಾಡಿದರು.
ಬಳಿಕ ಎಕ್್ಸ ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದು, ಕುಟುಂಬ ಮತ್ತು ಸ್ನೇಹಿತರ ಸಮುಖದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಬ್ರಿಟಿಷ್ ಪೌರತ್ವ ಪಡೆದಿರುವುದನ್ನು ಸಂಭ್ರಮಿಸಿರುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಯುಕೆ ತಮ ಮನೆಯಂತಾಗಿದೆ ಎಂದು ಹೇಳಿರುವ ಅವರು, ಅಲ್ಲಿನ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳ ಬಗ್ಗೆ ಗೌರವ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷ್ ಪ್ರಜೆಯಾಗುವುದು ವಿಶೇಷ ಗೌರವ ಮತ್ತು ಜವಾಬ್ದಾರಿ. ಇದನ್ನು ಹೆಮೆ, ಕೃತಜ್ಞತೆ ಹಾಗೂ ಈ ದೇಶದ ಭಾಗವಾಗಿರುವ ಭಾವನೆಯೊಂದಿಗೆ ಸ್ವೀಕರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.ವಿವಿಧ ಸಂಸ್ಕೃತಿಗಳು ಮತ್ತು ಅನುಭವಗಳಿಂದ ಕೂಡಿದ ತಮ ಜೀವನದ ಬಗ್ಗೆ ಉಲ್ಲೇಖಿಸಿರುವ ಅವರು, ತಾವು ಈಗ ಹೆಮೆಯಿಂದ ತಮ ಮನೆ ಎಂದು ಕರೆಯುವ ಯುಕೆಗೆ ಸಕಾರಾತಕ ಕೊಡುಗೆ ನೀಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಮ ಕುಟುಂಬ, ಸ್ನೇಹಿತರು ಹಾಗೂ ಆಕ್್ಸಫರ್ಡ್ ಯೂನಿಯನ್ಗೆ ಧನ್ಯವಾದ ಸಲ್ಲಿಸಿದ್ದಾರೆ.ಕಿಂಗ್ ಚಾರ್ಲ್ಸ್ -III ಅವರ ಜನದಿನದಂದೇ ಈ ಘೋಷಣೆ ಮಾಡಿರುವುದು ಈ ಸಂದರ್ಭವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ತಮ ಪೋಸ್ಟ್ ಅನ್ನು ಗಾಡ್ ಸೇವ್ ದಿ ಕಿಂಗ್ ಎಂಬ ಮಾತುಗಳೊಂದಿಗೆ ಮುಕ್ತಾಯಗೊಳಿಸಿದ್ದಾರೆ.
2010ರಲ್ಲಿ ಭಾರತ ತೊರೆದಿದ್ದ ಮೋದಿ :
ಐಪಿಎಲ್ಗೆ ಸಂಬಂಧಿಸಿದ ಆರ್ಥಿಕ ಅಕ್ರಮಗಳ ಆರೋಪಗಳು ಮತ್ತು ತನಿಖೆಗಳ ನಡುವೆಯೇ ಲಲಿತ್ ಮೋದಿ 2010ರಲ್ಲಿ ಭಾರತ ತೊರೆದಿದ್ದರು. ಬಳಿಕ ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ವಾಸಿಸುತ್ತಿದ್ದಾರೆ.ಐಪಿಎಲ್ನ ಮೊದಲ ಅಧ್ಯಕ್ಷ ಹಾಗೂ ಆಯುಕ್ತರಾಗಿದ್ದ ಲಲಿತ್ ಮೋದಿ, 2008ರಲ್ಲಿ ಟಿ20 ಆಧಾರಿತ ಐಪಿಎಲ್ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ನಂತರ ಹಣಕಾಸು ಅಕ್ರಮಗಳು ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು.
ಭಾರತ ತೊರೆದ ಬಳಿಕವೂ ಅವರ ವಿರುದ್ಧದ ಕಾನೂನು ಮತ್ತು ತನಿಖಾ ಪ್ರಕ್ರಿಯೆಗಳು ಹಲವು ವರ್ಷಗಳ ಕಾಲ ಸುದ್ದಿಯಲ್ಲಿದ್ದವು. ಇದೀಗ ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಸ್ವತಃ ಘೋಷಿಸಿರುವ ಲಲಿತ್ ಮೋದಿ, ಯುಕೆ ಅನ್ನು ತಮ ಹೊಸ ಮನೆಯಾಗಿ ಪರಿಗಣಿಸುವುದಾಗಿ ಹೇಳಿರುವುದು ಮತ್ತೊಮೆ ಗಮನ ಸೆಳೆದಿದೆ.
