Homeರಾಷ್ಟ್ರೀಯಕಾಂಗ್ರೆಸ್‌‍ ಆಯೋಜಿಸಿದ್ದ ಭಾರತ ಶೃಂಗಸಭೆ ವಿರುದ್ಧ ಬಿಜೆಪಿ ವಾಗ್ದಾಳಿ

ಕಾಂಗ್ರೆಸ್‌‍ ಆಯೋಜಿಸಿದ್ದ ಭಾರತ ಶೃಂಗಸಭೆ ವಿರುದ್ಧ ಬಿಜೆಪಿ ವಾಗ್ದಾಳಿ

ಹೈದರಾಬಾದ್‌,ನ.15 -ಹೈದರಾಬಾದ್‌ನಲ್ಲಿ ನಡೆದ ಭಾರತ ಶೃಂಗಸಭೆ-2026ರಲ್ಲಿ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗಳನ್ನು ಖಂಡಿಸಿ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕ ಸಿ.ಆರ್‌. ಕೇಶವನ್‌, ಕಾಂಗ್ರೆಸ್‌‍ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಭಾರತ ಬದ್ನಾಮ್‌ ಶೃಂಗಸಭೆ ಎಂದು ಕರೆದಿದ್ದು, ವಿದೇಶಿ ಪ್ರತಿನಿಧಿಗಳ ಸಮುಖದಲ್ಲಿ ರಾಹುಲ್‌ ಗಾಂಧಿ ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸ್ಥೆಗಳನ್ನು ಅಪಕೀರ್ತಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎಕ್‌್ಸನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್‌‍ ನಾಯಕರು ಅಂತರರಾಷ್ಟ್ರೀಯ ವೇದಿಕೆಯನ್ನು ಬಳಸಿಕೊಂಡು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿದೇಶಿ ಪ್ರತಿನಿಧಿಗಳ ಹಿನ್ನೆಲೆ ಹಾಗೂ ಜಾರ್ಜ್‌ ಸೊರೊಸ್‌‍ನಿಂದ ಹಣ ಪಡೆದ ಸಂಸ್ಥೆಗಳೊಂದಿಗೆ ಅವರಿಗಿರುವ ಸಂಬಂಧದ ಬಗ್ಗೆ ಕಾಂಗ್ರೆಸ್‌‍ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿದೇಶಿ ಹಸ್ತಕ್ಷೇಪದ ಆರೋಪ
ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಕಾಂಗ್ರೆಸ್‌‍ ಅವಕಾಶ ನೀಡುತ್ತಿದೆ ಎಂದು ಕೇಶವನ್‌ ಆರೋಪಿಸಿದ್ದಾರೆ. ರಾಹುಲ್‌ ಗಾಂಧಿ ಮತ್ತು ಅವರ ರಾಜಕೀಯ ಪರಿಸರ ವ್ಯವಸ್ಥೆ ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಭಾರತೀಯ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಕೇಂದ್ರ ಸಚಿವ ಬಂಡಿ ಸಂಜಯ್‌ ಕುಮಾರ್‌ ಕೂಡ ಕಾರ್ಯಕ್ರಮವನ್ನು ಭಾರತ ವಿರೋಧಿ ಶೃಂಗಸಭೆ ಎಂದು ಕರೆದಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ವಿರುದ್ಧ ದಾಳಿ ನಡೆಸಲು ಪ್ರಶ್ನಾರ್ಹ ವ್ಯಕ್ತಿಗಳಿಗೆ ಅಂತರರಾಷ್ಟ್ರೀಯ ವೇದಿಕೆ ಒದಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಹಾಗೂ ಸುಮಾರು 70 ದೇಶಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಱಭಾರತ ಶೃಂಗಸಭೆ 2026ರ ಸಮಾರೋಪ ಸಮಾರಂಭದಲ್ಲಿ ರಾಹುಲ್‌ ಗಾಂಧಿ ಮಾತನಾಡಿದ್ದರು.

ತಮ ಭಾಷಣದಲ್ಲಿ, 2014ರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಂಡಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು. ರಾಜಕೀಯ ವ್ಯವಸ್ಥೆಯೊಳಗೆ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬಂದಿದ್ದು, ಇದರಿಂದ ದೇಶದ ಚುನಾವಣಾ ವ್ಯವಸ್ಥೆಯ ಸ್ವರೂಪವೇ ಬದಲಾಗಿದೆ ಎಂದು ಅವರು ಪ್ರತಿಪಾದಿಸಿದರು.

2014ರಲ್ಲಿ ನಾವು ಸಂಪೂರ್ಣವಾಗಿ ಹೊಸ ರೀತಿಯ ಚುನಾವಣೆಯನ್ನು ಕಂಡೆವು. ರಾಜಕೀಯ ವ್ಯವಸ್ಥೆಯೊಳಗೆ ಕೋಟ್ಯಂತರ ಡಾಲರ್‌ಗಳನ್ನು ಸುರಿಯಲಾಯಿತುೞೞ ಎಂದು ರಾಹುಲ್‌ ಗಾಂಧಿ ಹೇಳಿರುವುದಾಗಿ ವರದಿಯಾಗಿದೆ.

ಈ ಹೇಳಿಕೆಗಳನ್ನೇ ಆಧಾರವಾಗಿಸಿಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್‌‍ ಹಾಗೂ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ಪ್ರಜಾಪ್ರಭುತ್ವದ ಬಗ್ಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಟೀಕೆ ಮಾಡುವುದು ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News