Thursday, April 30, 2026
Homeಜಿಲ್ಲಾ ಸುದ್ದಿಗಳುಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

A fight between two friends over a girl ends in the murder of one of them

ಬಾಗಲಕೋಟೆ,ಮಾ.10- ಪ್ರೀತಿಸುತ್ತಿದ್ದ ಹುಡುಗಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದ್ದು, ರಾಹುಲ್‌ ಸಪ್ತಸಾಗರ್‌(19) ಚಾಕು ಇರಿತದಿಂದ ಮೃತಪಟ್ಟಿದ್ದು, ಆರೋಪಿ ಶ್ರೇಯಸ್‌‍ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ರಾಹುಲ್‌ ತೇರದಾಳ ಪಟ್ಟಣದ ಅರಳಿಕಟ್ಟಿ ಗಲ್ಲಿಯ ನಿವಾಸಿಯಾಗಿದ್ದು, ಡಿಪ್ಲೊಮಾ 2ನೇ ವರ್ಷ ಓದುತ್ತಿದ್ದ. ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರಕ್ಕೆ ಕಿತ್ತಾಟ ನಡೆದಿತ್ತು ಎನ್ನಲಾಗುತ್ತಿದೆ.

ಕಳೆದ ರಾತ್ರಿ ಇಬ್ಬರು ಜಗಳವಾಡಿಕೊಂಡು ಈ ವೇಳೆ ಅಲ್ಲಿದ್ದ ಕೆಲ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ.ಈ ವೇಳೆ ಶ್ರೇಯಸ್‌‍ ಏಕಾಏಕಿ ರಾಹುಲ್‌ಗೆ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ತೀವ್ರವಾಗಿ ಗಾಯಗೊಂಡ ರಾಹುಲ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಇದನ್ನು ಕಂಡು ಎಲ್ಲರು ಅಲ್ಲಿಂದ ಓಡಿಹೋಗಿದ್ದಾರೆ.ಸುದ್ದಿ ತಿಳಿದು ತೇರದಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶಿಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES

Latest News