ರಾಯಚೂರು,ಮಾ.10-ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲುಗಳು ಕುಸಿದು ದಂಪತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ದ್ಯಾವಪ್ಪ ಸೂಗುರು(38) ಮತ್ತು ಶಿವಮ (32) ಮೃತ ದುರ್ದೈವಿಗಳು.
ಏಕಾ ಏಕಿ ಸಿಮೆಂಟ್‌ಮತ್ತು ಕಬ್ಭಿಣದ ಸರಳು ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾವೇ ಹಣ ಹೊಂದಿಸಿಕೊಂಡು ತಾವೇ ಮನೆ ಕಟ್ಟುಲು ದಂಪತಿ ಮುಂದಾಗಿ ಆರ್ಧ ಭಾಗ ಮುಗಿಸಿದ್ದರು.
ಕೆಲಸ ಮಾಡುತ್ತಿದ್ದಾಗ ಮೆಟ್ಟಿಲು ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪಿಲ್ಲರ್ ಇಲ್ಲದೆ ಅವೈಜ್ಞಾನಿಕವಾಗಿ ಮೆಟ್ಟಿಲು ನಿರ್ಮಿಸಿದ್ದ ಕಾರಣ ಕುಸಿದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಕಟ್ಟುವ ಕನಸು ಕಂಡು ಅದು ಸಾಕಾರಗೊಳ್ಳ ನಡುವೆಯೇ ದಂಪತಿ ಜೀವ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಕಂಬನಿ ಮಡಿದಿದ್ದಾರೆ.
