ಚಿಕ್ಕಬಳ್ಳಾಪುರ,ಜೂ.27- ಶಾಸಕ ಪ್ರದೀಪ್ ಈಶ್ವರ್ 2028ರ ಚುನಾವಣೆಯಲ್ಲಿ ಗೆದ್ದರೆ ನಾನು ಅವರ ಮನೆ ಕಾಯುತ್ತೇನೆ ಸೋತರೆ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆ ಕಾಯಲಿ ಎಂದು ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಅವರು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ ಬಗ್ಗೆ ಮಾತನಾಡಲಿ ನಾವು ಯಾವುದೇ ಕಾರಣಕ್ಕೂ ಆತನ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ, ಬಾಯಿಗೆ ಬಂದಂತೆ ಮಾತನಾಡುವುದು ತರವಲ್ಲ, ಒಬ್ಬ ಶಾಸಕನಾದವರಿಗೆ ಮಾತಿನ ಮೇಲೆ ಹಿಡಿತ ಇಟ್ಟು ಮಾತನಾಡುವುದು ಒಳಿತು ಎಂದು ಎಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವೈಯಕ್ತಿಕವಾಗಿ ಇಲ್ಲವೇ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಬಗ್ಗೆ ಮಾತನಾಡಿದ್ದರೆ ಪ್ರದೀಪ್ ಈಶ್ವರ್ ವಿರೋಧಿಸಿ ಮಾತನಾಡಲಿ. ಅದಕ್ಕೆ ಯಾವುದೇ ತಕರಾರು ಇಲ್ಲ. ಆದರೆ ಯಾವುದೋ ಪೇಜ್‌ನಲ್ಲಿ ಏನೋ ಹಾಕಿದ್ದಾರೆ ಎಂದು ವಿನಾಕಾರಣ ಕುಮಾರಸ್ವಾಮಿ ಅವರನ್ನ ಟೀಕಿಸಿ ಪ್ರದೀಪ್ ಈಶ್ವರ್ ಮಾತನಾಡಿದ್ದಾನೆ ಇದು ಶೋಭೆ ತರುವುದಿಲ್ಲ, ಹೆಚ್‌ಡಿಕೆ ಅವರು ವೈಯಕ್ತಿಕವಾಗಿ ಮಾತನಾಡಿದ್ದರೆ ನಾನು ಅವರ ಪರವಾಗಿ ಕ್ಷಮೆಯಾಚಿಸುತ್ತೇನೆ ಆದರೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದೆ ಏಕಾಏಕಿ ಬಾಯಿಗೆ ಬಂದಂತೆ ಮಾತನಾಡಿದರೆ ಕೈಕಟ್ಟಿ ಸುಮನೆ ಕುರುವುದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಶಿಡ್ಲಘಟ್ಟ ಶಾಸಕ ರವಿಕುಮಾರ್ ಅವರ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಇದ್ದರು.
