Homeರಾಷ್ಟ್ರೀಯಇಂಜೆಕ್ಷನ್‌ ರೂಪದಲ್ಲಿ ಸೌಂದರ್ಯ ವರ್ಧಕಗಳ ಬಳಕೆ ಕಾನೂನು ಬಾಹಿರ

ಇಂಜೆಕ್ಷನ್‌ ರೂಪದಲ್ಲಿ ಸೌಂದರ್ಯ ವರ್ಧಕಗಳ ಬಳಕೆ ಕಾನೂನು ಬಾಹಿರ

India Cracks Down On Injectable Cosmetic Procedures In Beauty Clinics

ನವದೆಹಲಿ, ಮೇ 21- ಸೌಂದರ್ಯ ವರ್ಧಕಗಳನ್ನು ಇಂಜೆಕ್ಷನ್‌ ರೂಪದಲ್ಲಿ ಬಳಸುವುದು ಅಥವಾ ಬಳಸಲು ಅವಕಾಶ ನೀಡುವುದು ಕಾನೂನುಬಾಹಿರ ಎಂದು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್‌‍ಸಿಒ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧೀನದಲ್ಲಿರುವ ಸಿಡಿಎಸ್‌‍ಸಿಒ ಈ ಕುರಿತು ಸಾರ್ವಜನಿಕ ಎಚ್ಚರಿಕೆಯನ್ನು ಪ್ರಕಟಿಸಿದೆ. ಡ್ರಗ್‌್ಸ ಅಂಡ್‌ ಕಾಸೆಟಿಕ್ಸ್ ಕಾಯ್ದೆ-1940 ಹಾಗೂ ಕಾಸೆಟಿಕ್‌್ಸ ನಿಯಮಗಳು-2020 ಅನ್ವಯ ಸೌಂದರ್ಯ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿವೆ ಎಂದು ತಿಳಿಸಿದೆ.

ಎಚ್ಚರಿಕೆಯ ಪ್ರಕಾರ, ಸೌಂದರ್ಯ ವರ್ಧಕಗಳು ಮಾನವ ದೇಹವನ್ನು ಸ್ವಚ್ಛಗೊಳಿಸಲು, ಸೌಂದರ್ಯ ಹೆಚ್ಚಿಸಲು, ಆಕರ್ಷಕತೆ ವೃದ್ಧಿಸಲು ಅಥವಾ ದೇಹದ ರೂಪದಲ್ಲಿ ಬದಲಾವಣೆ ತರಲು ಮಾತ್ರ ಬಳಕೆಯಾಗಬೇಕು. ಇವುಗಳನ್ನು ದೇಹಕ್ಕೆ ಇಂಜೆಕ್ಷನ್‌ ರೂಪದಲ್ಲಿ ಬಳಸಲು ಯಾವುದೇ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದೇ ವೇಳೆ, ವೈದ್ಯಕೀಯ ಚಿಕಿತ್ಸೆಗಾಗಿ ಅಥವಾ ವೃತ್ತಿಪರರು ಬಳಸುವ ಚಿಕಿತ್ಸಾ ವಿಧಾನಗಳಲ್ಲಿ ಕಾಸೆಟಿಕ್ಸ್ ಬಳಸುವಂತಿಲ್ಲ. ಕಾಸೆಟಿಕ್ಸ್ ಅನ್ನು ದೇಹದ ಮೇಲೆ ಹಚ್ಚುವುದು, ಎರಚುವುದು, ಪುಡಿ ರೂಪದಲ್ಲಿ ಬಳಕೆ ಮಾಡುವುದು ಅಥವಾ ಸ್ಪ್ರೇ ಮಾಡುವ ಮಟ್ಟಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಸೂಚಿಸಲಾಗಿದೆ.

ಸೌಂದರ್ಯ ಉತ್ಪನ್ನಗಳ ಲೇಬಲ್‌ಗಳಲ್ಲಿ ತಪ್ಪು ಮಾಹಿತಿ ನೀಡುವುದು, ಅತಿರಂಜಿತ ಅಥವಾ ದಾರಿ ತಪ್ಪಿಸುವ ಜಾಹೀರಾತು ಮಾಡುವುದು ಕೂಡ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಸಿಡಿಎಸ್‌‍ಸಿಒ ಎಚ್ಚರಿಸಿದೆ.

ನಿಷೇಧಿತ ಪದಾರ್ಥಗಳ ಬಳಕೆ, ತಪ್ಪು ಪ್ರಚಾರ, ಇಂಜೆಕ್ಷನ್‌ ಮೂಲಕ ಸೌಂದರ್ಯ ಚಿಕಿತ್ಸೆ ನೀಡುವುದು ಸೇರಿದಂತೆ ಯಾವುದೇ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಸಿಡಿಎಸ್‌‍ಸಿಒ ಹಾಗೂ ರಾಜ್ಯ ಪರವಾನಗಿ ಪ್ರಾಧಿಕಾರಗಳಿಗೆ ದೂರು ನೀಡಬಹುದು ಎಂದು ಸಂಸ್ಥೆ ಮನವಿ ಮಾಡಿದೆ.

RELATED ARTICLES

Latest News