ಚೆನ್ನೈ,ಏ.19-ನೋಯ್ಡಾದಲ್ಲಿ ನಡೆದ ಪೂರ್ವ ನಿಯೋಜಿತ ಹಿಂಸಾತ್ಮಕ ಕಾರ್ಮಿಕರ ಪ್ರತಿಭಟನೆಯ ಹಿಂದಿನ ಮಾಸ್ಟರ್‌ಮೈಂಡ್‌ನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಆದಿತ್ಯ ಆನಂದ್ ಬಂಧಿತ ಆರೋಪಿ.
ನೋಯ್ಡಾದ ಗೌತಮ್ ಬುದ್ಧ ನಗರ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ ಜಂಟಿಯಾಗಿ ಆರೋಪಿಯನ್ನು ತಮಿಳುನಾಡಿನ ತಿರುಚಿರಾಪಳ್ಳಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನ ಬಳಿ 1 ಲಕ್ಷ ರೂ. ಹಣ ಕೂಡ ವಶಕ್ಕೆ ಪಡೆಯಲಾಗಿದೆ. ಗೌತಮ್ ಬುದ್ಧ ನಗರ ಪ್ರದೇಶದಲ್ಲಿ ನಡೆದ ಕಾರ್ಮಿಕ ಚಳವಳಿಯ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಹಿಂದಿನ ಮಾಸ್ಟರ್‌ಮೈಂಡ್ ಆನಂದ್ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನ ಬಂಧನಕ್ಕಾಗಿ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಸಹ ಹೊರಡಿಸಿತ್ತು.ಆನಂದ್ ಜಿಲ್ಲೆಯಲ್ಲಿ ಕಾರ್ಮಿಕ ಧರಣಿ ಮತ್ತು ಪ್ರದರ್ಶನಗಳ ಸಮಯದಲ್ಲಿ ಪ್ರಚೋದನಕಾರಿ ಚಟುವಟಿಕೆಗಳನ್ನು ಆಯೋಜಿಸಿ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಆತನನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಹಲವು ರಾಜ್ಯಗಳಲ್ಲಿ ಶೋಧ ನಡೆಸಲಾಗಿತ್ತು ಅಂತಿಮವಾಗಿ ತಮಿಳುನಾಡಿನಲ್ಲಿ ಆತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಹಿಂದ ಬಾಹ್ಯ ಶಕ್ತಿಯ ಕೈವಾಡದ ಮಾತುಗಳು ಕೂಡ ಕೇಳಿ ಬಂದಿದ್ದು ಇದರ ಬಗ್ಗೆ ತನಿಖೆ ಮುಂದುವರೆದಿದೆ.
