Sunday, April 19, 2026
Homeರಾಜ್ಯವಿನಯ್‌ ಕುಲಕರ್ಣಿಗೆ ಕಂಕಟವಾದ ಬಸವರಾಜ್‌ ಮುತ್ತಗಿ ಮಾಫಿ ಸಾಕ್ಷಿ

ವಿನಯ್‌ ಕುಲಕರ್ಣಿಗೆ ಕಂಕಟವಾದ ಬಸವರಾಜ್‌ ಮುತ್ತಗಿ ಮಾಫಿ ಸಾಕ್ಷಿ

Yogesh Gouda Murder Case

ಬೆಂಗಳೂರು,ಏ.19- ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌‍ ಶಾಸಕ ವಿನಯ್‌ ಕುಲಕರ್ಣಿ, ನ್ಯಾಯಾಲಯದ ತೀರ್ಪಿನಲ್ಲಿ ಕೊಲೆ ಸಂಚು ಬಯಲಾಗಿದ್ದು, ಎ1 ಆಗಿರುವ ಬಸವರಾಜ್‌ ಮುತ್ತಗಿ ಮಾಫಿ ಜೊತೆಗೆ ಸಂಪರ್ಕದ ಬಗ್ಗೆ ಸ್ಫೋಟಕ ಮಾಹಿತಿಗಳು ಬಯಲಾಗಿದೆ.

ಎ1 ಬಸವರಾಜ್‌ ಮುತ್ತಗಿ ಮಾಫಿ ಜೊತೆ ಸಂಪರ್ಕದಲ್ಲಿ ಇರಲು ವಿನಯ್‌ ಕುಲಕರ್ಣಿ ತನ್ನ ಪತ್ನಿ ಹೆಸರಲ್ಲಿ ಸಿಮ್‌ ಖರೀದಿಸಿದ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಪತ್ನಿ ಹೆಸರಿನಲ್ಲಿ ಸಿಮ್‌ ಖರೀದಿ ಮಾಡಿರುವ ವಿನಯ್‌ ಕುಲಕರ್ಣಿ, 94 ಬಾರಿ ಮುತ್ತಗಿ ಜೊತೆಗೆ ಮಾತಾಡಿದ್ದಾರೆ ಎಂದು ತಿಳಿದು ಬಂದಿದೆ.

ಯೋಗೀಶ್‌ ಗೌಡ ಕೊಲೆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರೆದಿದ್ದು, ಕೇವಲ ಆರು ತಿಂಗಳಲ್ಲಿ ಬಸವರಾಜ್‌ ಮುತ್ತಗಿ ಜೊತೆಗೆ 57 ಬಾರಿ ಮಾತುಕತೆ ನಡೆದಿದೆ. ಸಿಬಿಐ ಅಧಿಕಾರಿಗಳ ತನಿಖೆ ವೇಳೆ ಸಿಡಿಆರ್‌, ಟವರ್‌ ಲೊಕೇಷನ್‌ ಪರೀಕ್ಷೆ ಮಾಡಿದ್ದು, ಇಬ್ಬರೂ ಒಂದೇ ಪ್ರದೇಶದಲ್ಲಿ ಆರು ಬಾರಿ ಇರುವುದು ಪತ್ತೆಯಾಗಿದೆ.

ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಗೆಲುವು ಹಾಗೂ ರಾಜಕೀಯವಾಗಿ ಬೆಳೆದಿದ್ದೇ ಯೋಗೀಶ್‌ ಗೌಡ ಕೊಲೆಗೆ ಅಸಲಿ ಕಾರಣ ಎನ್ನುವ ವಿಚಾರ ಕೂಡ ತನಿಖೆಯಲ್ಲಿ ಬಯಲಾಗಿದೆ. ಬಸವರಾಜ್‌ ಮುತ್ತಗಿ ಮತ್ತು ಆತನ ಭಾವ ಚಂದ್ರಶೇಖರ ಇಂಡಿಗೆ ವಿನಯ್‌ ಕುಲಕರ್ಣಿ ಸುಪಾರಿ ನೀಡಿದ್ದರು ಎನ್ನಲಾಗುತ್ತಿದೆ.

ಕುಲಕರ್ಣಿಗೆ ಕಂಟಕವಾಗಿದ್ದು ಮಾಫಿ ಸಾಕ್ಷಿ :
ಯೋಗೀಶ್‌ ಗೌಡ ಕೊಲೆ ಕೇಸ್‌‍ನಲ್ಲಿ ಬಸವರಾಜ್‌ ಮುತ್ತಗಿ ಮಾಫಿ ಸಾಕ್ಷಿ ಆಗಿದ್ದೇ ವಿನಯ್‌ ಕುಲಕರ್ಣಿಗೆ ಕಂಟಕವಾಗಿದ್ದು, ಯೋಗೀಶ್‌ ಗೌಡ ಹತ್ಯೆ ವೇಳೆ ಎ7 ರಿಂದ ಎ17 ಆರೋಪಿಗಳು ಆಯುಧ ಬಳಸಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಪೊಲೀಸರು ಎ1 ರಿಂದ ಎ6 ಆರೋಪಿಗಳನ್ನು ಬಂಧಿಸಿ ಆಯುಧಗಳು ವಶಕ್ಕೆ ಎಂದು ಉಲ್ಲೇಖ ಮಾಡಿದ್ದರು.
ಅಲ್ಲದೇ ಬಸವರಾಜ್‌ ಮುತ್ತಗಿ ಮತ್ತು ಯೋಗೀಶ್‌ ಗೌಡ ನಡುವಿನ ಭೂ ವ್ಯಾಜ್ಯವೇ ಕೊಲೆಗೆ ಕಾರಣ ಅಂತ ಚಾರ್ಜ್‌ ಶೀಟ್‌ ದಾಖಲಾಗಿತ್ತು. ಸಿಬಿಐ ಅಧಿಕಾರಿಗಳ ತನಿಖೆ ಬಳಿಕ ಕೊಲೆಯ ಅಸಲಿ ಕಾರಣ ಬಯಲಾಗಿದೆ.

RELATED ARTICLES

Latest News