ಬೆಂಗಳೂರು,ಏ.19- ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಖೈದಿ ನಂಬರ್ ನೀಡಲಾಗಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಅವರ ಜೀವನ ಶೈಲಿಯೇ ಬದಲಾಗಿದೆ. ಈ ವೇಳೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ ಯುಟಿಪಿ ನಂಬರ್ (ವಿಚಾರಣಾಧೀನ ಖೈದಿ) ನೀಡಿದ್ದರು. ಆದರೆ, ಶನಿವಾರ ಬೆಳಗ್ಗೆ ಕೆಲವು ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿ ಅವರಿಗೆ ಸಜಾ ಬಂಧಿ ಖೈದಿ ನಂಬರ್ 16110 ನೀಡಲಾಗಿದೆ. ಜೊತೆಗೆ ಎಲ್ಲಾ ಅಪರಾಧಿಗಳಿಗೆ ಸಜಾ ಬಂಧಿ ಖೈದಿ ನಂಬರ್ ಅಧಿಕೃತವಾಗಿ ನೀಡಲಾಗಿದೆ.
ಜೈಲಲ್ಲಿ ಕಣ್ಣೀರು ಹಾಕಿದ ವಿನಯ್: ವಿನಯ್ ಕುಲಕರ್ಣಿ ಜೈಲಿನಲ್ಲಿ ಇರಲಾಗದೇ ಶುಕ್ರವಾರ ರಾತ್ರಿಯಿಡೀ ಚಿಂತೆಗೆ ಒಳಗಾಗಿದ್ದರು. ಜೊತೆಗೆ ಶುಕ್ರವಾರ ರಾತ್ರಿ ಚಪಾತಿ, ಊಟ ನೀಡಲಾಗಿತ್ತು. ಸರಿಯಾಗಿ ಆಹಾರ ಸೇವಿಸದೇ ಮಲಗಿದ್ದರು. ತಡರಾತ್ರಿ ಸುಮಾರು 3 ಗಂಟೆಯವರೆಗೆ ಬೇಸರದಲ್ಲಿ ಕಣ್ಣೀರು ಹಾಕಿದ್ದ ವಿನಯ್ ಕುಲಕರ್ಣಿ ಹಾಗೂ ಇತರ ಅಪರಾಧಿಗಳು, ನಂತರ ನಿದ್ದೆಗೆ ಜಾರಿದ್ದರು.
ಶನಿವಾರ ಮುಂಜಾನೆ ಖೈದಿಗಳ ಜೊತೆಗೆ ಕೊಂಚ ಸಮಯ ಚರ್ಚೆ ನಡೆಸಿದ ವಿನಯ್ ಕುಲಕರ್ಣಿ, ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಉಪಾಹಾರ ಸೇವಿಸಿ, ಮಧ್ಯಾಹ್ನ ಸ್ವಲ್ಪ ಊಟ ಸೇವಿಸಿದ್ದಾರೆ. ರಾತ್ರಿಯೂ ಸಾಮಾನ್ಯ ಖೈದಿಗಳಂತೆ ಜೈಲೂಟ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ, ಇತರ ಅಪರಾಧಿಗಳೂ ಸಹ ತಮ ಕುಟುಂಬ ನೆನೆದು ಕಣ್ಣೀರು ಹಾಕುತ್ತಿದ್ದಾರೆ ಎನ್ನಲಾಗಿದೆ.
ತಡೆಯಾಜ್ಞೆ ತರದಿದ್ದರೆ ಶಾಶ್ವತ ರದ್ದು :
ಜೀವಾವಧಿ ಶಿಕ್ಷೆಗೆ ಗುರಿಯಾದ ಕಾರಣಕ್ಕೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದಾಗಿದೆ. ಶಾಸಕ ಸ್ಥಾನ ಉಳಿಸಿಕೊಳ್ಳಲು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಒಂದು ತಿಂಗಳೊಳಗೆ ತಡೆಯಾಜ್ಞೆ ತರಬೇಕು. ಇಲ್ಲವಾದರೆ, ಶಾಸಕ ಸ್ಥಾನವನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಪಾಲಾಗಿರುವ ವಿನಯ್ ಕುಲಕರ್ಣಿ, ನಟ ದರ್ಶನ್ ಬ್ಯಾರಕ್ ಮಾರ್ಗವಾಗಿಯೇ ಸ್ವಲ್ಪ ದೂರದಲ್ಲಿರೋ ವಾಸ್ತವ್ಯದ ಬ್ಯಾರಕ್‌ನಲ್ಲಿದ್ದಾರೆ ಎಂಬ ಮಾಹಿತಿ ಜೈಲು ಮೂಲಗಳಿಂದ ಲಭ್ಯವಾಗಿದೆ.
ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿ ಕೈದಿಗಳಿಗೆ ಒಂದೇ ಬ್ಯಾರಕ್‌ನಲ್ಲಿ ವಾಸ್ತವ್ಯ ಮಾಡಲಾಗಿದೆ. ಇನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ನಿನ್ನೆ ರಾತ್ರಿ ಬ್ಯಾರಕ್‌ನಲ್ಲಿ ಕಣ್ಣೀರು ಹಾಕಿದ್ದಾರಂತೆ, ಊಟ ಮಾಡದೆ ನಿದ್ದೆಯೂ ಸರಿಯಾಗಿ ಮಾಡದೆ ಬೇಸರದಲ್ಲಿದ್ದಾರಂತೆ.
ವಿನಯ್ ಕುಲಕರ್ಣಿ ಅಲ್ಲದೇ ಉಳಿದ ಅಪರಾಧಿಗಳು ಸಹ ಕುಟುಂಬ ನೆನೆದು ಕಣ್ಣೀರು ಹಾಕಿದ್ದಾರಂತೆ. ಇನ್ನು ವಿನಯ್ ಕುಲಕರ್ಣಿ ಅವರು ರಾಜಕೀಯ ಭವಿಷ್ಯದ ಜೊತೆ ಕುಟುಂಬದ ವಿಚಾರವಾಗಿ ಚಿಂತೆಗೀಡಾಗಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.
ವಿನಯ್ ಕುಲಕರ್ಣಿ ಹಾಗೂ ಈ ಪ್ರಕರಣದ ಇತರ 17 ಅಪರಾಧಿಗಳನ್ನು ಪ್ರಸ್ತುತ ಡಿ ಬ್ಯಾರಕ್‌ನ ಕ್ವಾರಂಟೈನ್ ಸೆಲ್‌ಗೆ ಕಳುಹಿಸಲಾಗಿದೆ.
ಅಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಇತರ ಮೂವರು ಅಪರಾಧಿಗಳನ್ನು ಒಂದು ಬ್ಯಾರಕ್‌ನಲ್ಲಿ ಇರಿಸಿದರೆ, ಇತರ ಅಪರಾಧಿಗಳನ್ನು ಪಕ್ಕದ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಮುಂದಿನ 10 ದಿನಗಳ ಕಾಲ ಎಲ್ಲರೂ ಇಲ್ಲೇ ಇರಲಿದ್ದಾರೆ. ನಂತರ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ. ಇನ್ನು ಇದೇ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೊಳಗಾಗಿರುವ ಸರ್ಕಲ್ ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಜಾ ಬಂಧಿ ಸಂಖ್ಯೆ :
1) ವಿಕ್ರಂ ಬಳ್ಳಾರಿ – 16097
2) ಕೀರ್ತಿ ಕುಮಾರ್ ಬೆಳ್ಳಟ್ಟಿ – 16098
3) ಸಂದೀಪ್ ಸವದತ್ತಿ – 16099
4) ವಿನಾಯಕ ಕಟಗಿ – 16100
5) ಮಹಾಬಲೇಶ್ವರ ಹೊಂಗಳೇ – 16101
6) ಸಂತೋಷ ಸವದತ್ತಿ – 16102
7) ದಿನೇಶ್ -16103
8) ಅಶ್ವಥ್ – 16104
9) ಸುನಿಲ್ – 16105
10) ನಜೀರ್ ಅಹ್ಮದ್ – 16106
11) ಶನವಾಜ್ – 16107
12) ನೂತನ್ – 16108
13) ಹರ್ಷೀತ್ – 16109
14) ವಿನಯ್ ಕುಲಕರ್ಣಿ -16110
15) ಚಂದ್ರಶೇಖರ್ ಇಂಡಿ -16111
16) ವಿಕಾಸ್ ಕಲಬುರ್ಗಿ – 16112
17) ಚನ್ನಕೇಶವ ಟಿಂಗರಿಕರ್ – 16113
