ಬೆಂಗಳೂರು, ಫೆ.26- ನವಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಫೈನಲೀ ವಿರೋಶಿ ಜೋಡಿ ಮದುವೆಯಾಗಿ ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ. ಬಹಳ ವರ್ಷಗಳಿಂದ ಲವ್‌ನಲ್ಲಿ ಬಿದ್ದಿದ್ದ ರಶಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಂದು ದಾಂಪತ್ಯ ಜೀವ ನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮುಖದಲ್ಲಿ ಉದಯಪುರದಲ್ಲಿ ಮದುವೆಯಾಗಿದ್ದಾರೆ. ಟಾಲಿವುಡ್ ಈ ಕ್ಯೂಟ್ ಕಪಲ್‌ಗೆ ಎಲ್ಲರೂ ಹಾರೈಸಿದ್ದಾರೆ.
ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರು ಕೂಡ ಈ ಜೋಡಿಗೆ ಶುಭಕೋರಿದ್ದಾರೆ. ಪತ್ರ ಬರೆಯುವ ಮೂಲಕ ಪ್ರಧಾನಿ ಮೋದಿ ಅವರು ಶುಭಕೋರಿದ್ದಾರೆ. ಇಂದು ಬೆಳಗ್ಗೆ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ವಿಜಯ್ ದೇವರಕೊಂಡ ಮಾಂಗಲ್ಯಧಾರಣೆ ಮಾಡಿದ್ದಾರೆ. ಜೊತೆಗೆ ಇಂದು ಸಂಜೆ 4.30ರ ಸಮಯಕ್ಕೆ ಕೊಡವ ಸಂಪ್ರದಾಯದಂತೆ ಮತ್ತೆ ಮದುವೆಯಾಗಲಿದ್ದಾರೆ.
ರಶಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆಪ್ತರು ಸೇರಿ 100 ಜನರಿಗಷ್ಟೇ ಆಹ್ವಾನ ನೀಡಲಾಗಿತ್ತು. ರಶಿಕಾ ಮಂದಣ್ಣ ನಮ ಕರ್ನಾಟಕದ ಅಪ್ಪಟ ಕನ್ನಡ ಹುಡುಗಿ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬಂದ ಇವರು, ಟಾಪ್ ಹೀರೋಯಿನ್ ಆಗಿ ಬೆಳೆದರು. ದಿನ ಕಳೆದಂತೆ ತೆಲುಗಿನಲ್ಲೂ ಅವಕಾಶಗಳು ಅರಸಿ ಬಂದವು. ಗೀತಾ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಅಲ್ಲಿಂದ ಇಬ್ಬರಲ್ಲೂ ಸಲುಗೆಯೂ ಬೆಳೆದಿತ್ತು. ಮುಂದೆ ಅವರಿಬ್ಬರ ನಡುವೆ ಪ್ರೀತಿಯೂ ಆಗಿತ್ತು.
ಆದರೆ ಆ ಪ್ರೀತಿಯನ್ನು ಇಬ್ಬರೂ ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಹಾಗಂತ ಅದು ಗುಟ್ಟಾಗಿಯೂ ಉಳಿದಿರಲ್ಲ. ಇಬ್ಬರೂ ಎಲ್ಲಿಯೇ ಹೋದರೂ, ಬೇರೆ ಬೇರೆ ಫೋಟೋ ಹಾಕಿದರೂ ಕೂಡ ಪಾಪರಾಜಿಗಳು ಅದನ್ನು ಕಂಡು ಹಿಡಿದು ಬಿಡುತ್ತಿದ್ದರು.
ಮದುವೆಗೆ ಎಲ್ಲಾ ತಯಾರಿಗಳು ನಡೆದರೂ ಕೂಡ ಇಬ್ಬರು ಸತ್ಯ ಹೇಳಿರಲಿಲ್ಲ. ಕಡೆಗೂ ನಾಲ್ಕೈದು ದಿನ ಇರುವಾಗ ಸೋಷಿಯಲ್ ಮೀಡಿಯಾದಲ್ಲಿಯೇ ಎಲ್ಲವನ್ನೂ ಹೇಳಿದರು. ಒಟ್ಟಿನಲ್ಲಿ ಇಂದು ಅಧಿಕೃತವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವದಂಪತಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
