Homeರಾಜ್ಯಸಿಎಂ ಸೇರಿ ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸಬಲ್ಲೆ : ಅಚ್ಚರಿ ಹೇಳಿಕೆ ಕೊಟ್ಟ ಪರಮೇಶ್ವರ್‌

ಸಿಎಂ ಸೇರಿ ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸಬಲ್ಲೆ : ಅಚ್ಚರಿ ಹೇಳಿಕೆ ಕೊಟ್ಟ ಪರಮೇಶ್ವರ್‌

ಬೆಂಗಳೂರು, ಮೇ 23- ಮುಖ್ಯಮಂತ್ರಿ ಸೇರಿದಂತೆ ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ನನಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವನಾಗಿ ಇದುವರೆಗೆ 8 ವರ್ಷಗಳ ಕಾಲ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ. ಗೃಹಸಚಿವನಾಗಿರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹಖಾತೆಯ ಜೊತೆಗೆ ಯಾವುದೇ ಹೆಚ್ಚುವರಿ ಜವಾಬ್ದಾರಿ ವಹಿಸಿದರೂ ನಿರ್ವಹಿಸುತ್ತೇನೆ. ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸುತ್ತೀರಾ? ಎಂಬ ಪ್ರಶ್ನೆಗೆ ಅವರು, ಏನೇ ಕೊಟ್ಟರೂ ನಿಭಾಯಿಸುತ್ತೇನೆ. ಆ ಸಾಮರ್ಥ್ಯ ನನಗಿದೆ ಎಂದರು. ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಖಾತೆ ಬದಲಾವಣೆಗೆ ಕೇಳಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹಖಾತೆ ಬದಲಾಯಿಸುವಂತೆ ನಾನು ಯಾರನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕರು ಸಚಿವ ಸ್ಥಾನ ನೀಡುವಂತೆ ಕೋರುವುದರಲ್ಲಿ ಯಾವುದೇ ತಪ್ಪಿಲ್ಲ. ಎರಡು-ಮೂರು ಬಾರಿ ಶಾಸಕರಾಗಿದ್ದಾರೆ. ಅವರಿಗೂ ಸಚಿವರಾಗಬೇಕೆಂಬ ಅಪೇಕ್ಷೆ ಇದೆ. ಹೀಗಾಗಿ ಹೈಕಮಾಂಡ್‌ ಮೇಲೆ ಅವರು ಒತ್ತಡ ತರುತ್ತಿರಬಹುದು. ಆದರೆ ಶೇ.15ಕ್ಕಿಂತ ಹೆಚ್ಚು ಸಚಿವ ಸ್ಥಾನ ನೀಡಲಾಗುವುದಿಲ್ಲ. ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈ ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಕಾಕ್ರೋಜ್‌ ಜನತಾ ಪಕ್ಷಕ್ಕೆ ಸಮಾವೇಶ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾವ ಉದ್ದೇಶಕ್ಕೆ ಸಮಾವೇಶ ಮಾಡುತ್ತಿದ್ದಾರೆ?, ಯಾರ್ಯಾರು ಭಾಗಿಯಾಗುತ್ತಾರೆ ಎಂಬುದನ್ನೆಲ್ಲಾ ಪೊಲೀಸರು ಪರಿಶೀಲಿಸಿ ಅನುಮತಿ ಕೊಡಬೇಕೇ, ಬಿಡಬೇಕೇ ಎನ್ನುವುದನ್ನು ನಿರ್ಧರಿಸುತ್ತಾರೆ. ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಪೊಲೀಸರಿಗೆ ಬಿಟ್ಟ ವಿಚಾರ ಎಂದರು.

ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ. ಪೊಲೀಸಿನವರು ಅವರ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅವರ ಜವಾಬ್ದಾರಿ. ನಮ ಪಕ್ಷ ನಮ ನಾಯಕರು ಬೆಂಬಲ ನೀಡುವುದು ಬೇರೆ. ಪೊಲೀಸರು ಅವರ ಕೆಲಸವನ್ನು ಮಾಡುತ್ತಾರೆ. ಪೊಲೀಸರ ನಿರ್ಧಾರವನ್ನು ಓವರ್‌ ರೂಲ್‌ ಮಾಡಿ ಸರ್ಕಾರ ಅನುಮತಿ ಕೊಡುವುದಾದರೆ ಅದು ಬೇರೆ ವಿಚಾರವಾಗಲಿದೆ ಎಂದು ಹೇಳಿದರು.

ವಿವಿಧ ಹಬ್ಬಗಳ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ವಕ್‌್ಫಬೋರ್ಡ್‌ನಿಂದ ಬಕ್ರೀದ್‌ ಆಚರಣೆ ಸಂದರ್ಭದಲ್ಲಿ ರಕ್ಷಣೆ ಕೋರಿ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಆ ಪತ್ರಕ್ಕೆ ಯಾವ ರೀತಿ ಸ್ಪಂದಿಸಬೇಕೋ ಅದರಂತೆ ಪೊಲೀಸರು ಸ್ಪಂದಿಸುತ್ತಾರೆ. ಮೊಕದ್ದಮೆಗಳನ್ನು ವಾಪಸ್‌‍ ಪಡೆದಿರುವ ಬಗ್ಗೆ ಹಿಂದೂ ಸಂಘಟನೆಗಳು ವಿರೋಧ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌‍ ಪಕ್ಷ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತದೆ. ತುಳಿತಕ್ಕೆ ಒಳಗಾದವರು, ಶೋಷಿತರ ಬಗ್ಗೆ 1947 ರಿಂದಲೂ ಕಾಂಗ್ರೆಸ್‌‍ ಪಕ್ಷ ಕಾರ್ಯಕ್ರಮಗಳನ್ನು ಹಮಿಕೊಂಡು ಬಂದಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು. ಕಾರಾಗೃಹದಲ್ಲಿ ನಟ ದರ್ಶನ್‌ ಆತಹತ್ಯೆಗೆ ಯತ್ನಿಸಿಲ್ಲ ಎಂದು ಹಿರಿಯ ಅಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

RELATED ARTICLES

Latest News