Homeಇದೀಗ ಬಂದ ಸುದ್ದಿಫೀಫಾ ವಿಶ್ವಕಪ್‌ ಫುಟ್‌ಬಾಲ್‌‍: ಸ್ವೀಡನ್‌ ವಿರುದ್ಧ ನೆದರ್ಲ್ಯಾಂಡ್ಸ್‌ಗೆ ಭರ್ಜರಿ ಜಯ, ನಾಕೌಟ್‌ ಹಂತಕ್ಕೆ ಜರ್ಮನಿ

ಫೀಫಾ ವಿಶ್ವಕಪ್‌ ಫುಟ್‌ಬಾಲ್‌‍: ಸ್ವೀಡನ್‌ ವಿರುದ್ಧ ನೆದರ್ಲ್ಯಾಂಡ್ಸ್‌ಗೆ ಭರ್ಜರಿ ಜಯ, ನಾಕೌಟ್‌ ಹಂತಕ್ಕೆ ಜರ್ಮನಿ

ಹ್ಯೂಸ್ಟನ್‌, ಜೂ.20- ಬ್ರಿಯಾನ್‌ ಬ್ರಾಬಿ ಮತ್ತು ಕೋಡಿ ಗಾಕ್‌ಪೋ ತಲಾ ಎರಡು ಗೋಲುಗಳನ್ನು ಬಾರಿಸಿದ ನೆರವಿನಿಂದ ನೆದರ್ಲೆಂಡ್‌್ಸ ತಂಡವು ಸ್ವೀಡನ್‌ ವಿರುದ್ಧ 5-1 ಗೋಲುಗಳ ಭರ್ಜರಿ ಜಯ ಸಾಧಿಸಿತು. ಫೀಫಾ ವಿಶ್ವಕಪ್‌ ಫುಟ್‌ಬಾಲ್‌‍ಮ ಎಫ್‌ ಗುಂಪಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಉತ್ತಮ ಪ್ರದರ್ಶನ ನೀಡಿ ಅಬ್ಬರಿಸಿದೆ. ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ 2-2 ಗೋಲುಗಳ ಸಮಬಲ ಸಾಧಿಸಿ ನಿರಾಸೆ ಅನುಭವಿಸಿದ್ದ ನೆದರ್ಲೆಂಡ್ಸ್‌‍, ಈ ಗೆಲುವಿನ ಮೂಲಕ ನಾಲ್ಕು ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಕ್ಕೇರಿತು.

ಸ್ವೀಡನ್‌ ಮೂರು ಅಂಕಗಳೊಂದಿಗೆ ಮುಂದುವರಿದಿದೆ. ಜಪಾನ್‌ ಮತ್ತು ಟ್ಯುನೀಷಿಯಾ ತಂಡಗಳು ನಂತರ ಮುಖಾಮುಖಿಯಾಗಲಿದ್ದು ನಾಕೌಟ್‌ ಪ್ರವೇಶಿಸಿವ ತಂಡ ನಿರ್ಧಾರವಾಗಲಿದೆ.
ನೆದರ್ಲೆಂಡ್‌್ಸಪರ ಬ್ರಾಬಿ ಮೊದಲಾರ್ಧದಲ್ಲೇ ಎರಡು ಗೋಲುಗಳನ್ನು ಗಳಿಸಿ ತಂಡಕ್ಕೆ ಬಲಿಷ್ಠ ಮುನ್ನಡೆ ಒದಗಿಸಿದರು. ಒಂದ್ಯ ಆರಂಭವಾಗಿ ಐದನೇ ನಿಮಿಷದಲ್ಲಿ ಚಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಕೋಡಿ ಗಾಕ್‌ಪೋ ನಂತರ ನೀಡಿದ ಪಾಸ್‌‍ನಿಂದ ಲೀಲಾಜಾಲವಾಗಿ ಗೋಲಾಗಿ ಪರಿವರ್ತಿಸಿದ ಬ್ರಾಬಿ ನಂತರ ಮತ್ತೆ 17ನೇ ನಿಮಿಷದಲ್ಲಿ ಡೆಂಜೆಲ್‌ ಡುಂಫ್ರೀಸ್‌‍ ಪಾಸ್‌‍ ಮೂಲಕ ನೀಡಿದ ಚಂಡನ್ನು ಬಲೆಗೆ ಸೇರಿಸಿ ಮತ್ತೊಂದು ಆಕರ್ಷಕ ಗೋಲು ದಾಖಲಿಸುವ ಮೂಲಕ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಈ ನಡುವೆ ಸ್ವೀಡನ್‌ ರಕ್ಷಣಾ ಆಟಗಾರರು ಪದೇ ಪದೇ ತಪ್ಪು ಮಾಡಿ ನೆದರ್ಲೆಂಡ್‌್ಸಗೆ ಸುಲಭವಾಗಿ ಗೋಲು ಮಾಡಲು ಅವಕಾಶ ನೀಡಿದರು. ದ್ವಿತೀಯಾರ್ಧ ಆರಂಭವಾದ ತಕ್ಷಣವೇ ಗಾಕ್‌ಪೋ ಮಿಂಚಿದರು. 47ನೇ ನಿಮಿಷದಲ್ಲಿ ಡುಂಫ್ರೀಸ್‌‍ ಅವರ ಕ್ರಾಸ್‌‍ನಿಂದ ಗೋಲುಗಳಿಸಿದ ನಂತರ54ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ನೆದರ್ಲ್ಯಾಂಡ್ಸ್ ಮುನ್ನಡೆಯನ್ನು 4-0ಕ್ಕೆ ಹೆಚ್ಚಿಸಿದರು.

ಪಂದ್ಯದ ಮೇಲೆ ಹಿಡಿತ ಸಾಧಿಸಿ ನೆದರ್ಲೆಂಡ್‌್ಸ ಆಟಗಾರರು ಎದುರಾಳಿಗಳಿಗೆ ಚಂಡು ನೀಡದೆ ಧಣಿಸಿದರು. ಈ ವೇಳೆ ಗಾಕ್‌ಪೋ ಮಿಚಿನ ವೇಗದಲ್ಲಿ ಓಡಿ ಗೋಲು ಹೊಡೆದು ಎದುರಾಳಿಗಳಿಗೆ ಸೋಲು ಖಚಿತಗೊಳಿಸಿದರು. ನಂತರ ಆಕ್ರಮಣಕಾರಿ ಆಟವಾಡಿದ ಸ್ವೀಡನ್‌ 59ನೇ ನಿಮಿಷದಲ್ಲಿ ಆಂಥನಿ ಎಲಾಂಗಾ ಸ್ವೀಡನ್‌ ಪರ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಆದರೆ ಅದಕ್ಕಿಂತ ಮೊದಲು ಸ್ವೀಡನ್‌ಗೆ ಹಲವು ಅವಕಾಶಗಳು ಸಿಕ್ಕಿದ್ದರೂ, ನೆದರ್ಲೆಂಡ್‌್ಸಗೋಲ್‌ಕೀಪರ್‌ ಬಾರ್ಟ್‌ ವರ್ಬ್ರುಗೆನ್‌ ಅದ್ಭುತ ಪ್ರದರ್ಶನ ನೀಡಿ ಮೊದಲಾರ್ಧದಲ್ಲೇ ನಾಲ್ಕು ಪ್ರಮುಖ ಸೇವ್‌ಗಳನ್ನು ಮಾಡಿದರು.

44ನೇ ನಿಮಿಷದಲ್ಲಿ ಗುಸ್ತಾಫ್‌ ಲ್ಯಾಗರ್‌ಬಿಯೆಲ್ಕೆ ಹೆಡರ್‌ ಮೂಲಕ ಗೋಲು ಗಳಿಸಿದ್ದರೂ, ಆಫ್‌ಸೈಡ್‌‍ ಕಾರಣದಿಂದ ಅದನ್ನು ನಿರಾಕರಿಸಲಾಯಿತು. ಪಂದ್ಯದ 89ನೇ ನಿಮಿಷದಲ್ಲಿ ಕ್ರೈಸೆನ್ಸಿಯೊ ಸಮರ್‌ವಿಲ್ಲೆ ಮತ್ತೊಂದು ಗೋಲು ಬಾರಿಸಿ ನೆದರ್ಲೆಂಡ್‌್ಸ ಜಯಕ್ಕೆ ಮೆರಗು ತಂದರು. ಗೋಲು ಗಳಿಸಿದ ಬಳಿಕ ಅವರು ಅವರ ಪ್ರಸಿದ್ಧ ನೈಟ್‌ ನೈಟ್‌‍ ಸಂಭ್ರಮಾಚರಣೆಯ ಶೈಲಿಯನ್ನು ಸಂಭ್ರಮಿಸಿದರು.
ಈ ಪಂದ್ಯವನ್ನು ವೀಕ್ಷಿಸಲು ನೆದರ್ಲೆಂಡ್‌್ಸನ ರಾಜ ವಿಲ್ಲೆಮ್‌‍-ಅಲೆಕ್ಸಾಂಡರ್‌ – ಹಾಗೂ ರಾಣಿ ಮ್ಯಾಕ್ಸಿಮಾ ವಿಶೇಷ ಅತಿಥಿಗಳಾಗಿ ಹಾಜರಿದ್ದರು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗುರುವಾರ ಸ್ವೀಡನ್‌ ತಂಡ ಜಪಾನ್‌ ವಿರುದ್ಧ ಸೆಣಸಲಿದ್ದು, ನೆದರ್ಲೆಂಡ್‌್ಸ ತಂಡ ಟ್ಯುನೀಷಿಯಾವನ್ನು ಎದುರಿಸಲಿದೆ.

ನಾಕೌಟ್‌ ಹಂತಕ್ಕೆ ಜರ್ಮನಿ

ಟೊರೊಂಟೊ, ಜೂ.21- ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಡೆನಿಸ್‌‍ ಉಂಡಾವ್‌ ಅವರ ಎರಡು ಗೋಲುಗಳ ನೆರವಿನಿಂದ ಜರ್ಮನಿ ತಂಡವು ಐವರಿ ಕೋಸ್ಟ್‌ ವಿರುದ್ಧ 2-1 ಗೋಲುಗಳ ರೋಚಕ ಜಯ ಸಾಧಿಸಿ ಫೀಫಾ ಫುಟ್‌ಬಾಲ್‌‍ ವಿಶ್ವಕಪ್‌ನ ನಾಕೌಟ್‌ ಹಂತಕ್ಕೆ ಪ್ರವೇಶಿಸಿತು. ಪಂದ್ಯ ಸಾಕಷ್ಟು ತಿರುವ ಪಡೆದು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಐವರಿ ಕೋಸ್ಟ್‌ ತಂಡದ ನಾಯಕ ಫ್ರಾಂಕ್‌ ಕೆಸ್ಸಿಪಂದ್ಯದ 30ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ನೀಡಿದರು. ಯಾನ್‌ ಡಿಯೊಮಾಂಡೆ ಅವರ ಕ್ರಾಸ್‌‍ ಅನ್ನು ಅಮಾದ್‌ ಡಿಯಾಲೊ ಗೋಲಿನತ್ತ ಹೊಡೆದಾಗ, ಜರ್ಮನಿಯ ನಾಥನಿಯೆಲ್‌ ಬ್ರೌನ್‌ ಅದನ್ನು ತಡೆದರು. ಆದರೆ ಚೆಂಡು ಮತ್ತೆ ಕೆಸ್ಸಿಅವರ ಬಳಿ ಬಂದಿದ್ದು, ಅವರು ಖಾಲಿ ಇದ್ದ ಎಡ ಮೂಲೆಗೆ ಚೆಂಡನ್ನು ತಳ್ಳುವ ಮೂಲಕ ಗೋಲು ಗಳಿಸಿದರು.

ಉಂಡಾವ್‌ ಅವರ ಮೊದಲ ಗೋಲು 68ನೇ ನಿಮಿಷದಲ್ಲಿ ದಾಖಲಾಯಿತು. ನಾಡಿಯೆಮ್‌ ಅಮಿರಿ ನೀಡಿದ ಉದ್ದದ ಪಾಸ್‌‍ ಅನ್ನು ಕೈ ಹಾವರ್ಟ್‌್ಸ ಚತುರವಾಗಿ ಬಿಟ್ಟುಕೊಟ್ಟ ಬಳಿಕ ಉಂಡಾವ್‌ ಚೆಂಡನ್ನು ನೇರವಾಗಿ ಗೋಲಿನೊಳಗೆ ಹೊಡೆದು ಸಮಬಲ ಸಾಧಿಸಿದರು. ಅಮಿರಿ ಮತ್ತು ಉಂಡಾವ್‌ ಇಬ್ಬರೂ ಕೇವಲ ಎಂಟು ನಿಮಿಷಗಳ ಮೊದಲು ಬದಲಿ ಆಟಗಾರರಾಗಿ ಮೈದಾನಕ್ಕಿಳಿದಿದ್ದರು.

ನಿಗದಿತ ಸಮಯದ ನಂತರ 1-1ರ ಸಮಭಲದ ನಂತರ ನಾಲ್ಕು ನಿಮಿಷಗಳ ಹೆಚ್ಚುವರಿ ಸಮಯ ಬಾಕಿ ಇರುವಾಗ ಫೆಲಿಕ್‌್ಸನೆಮ್ಚಾ ನೀಡಿದ ಪಾಸ್‌‍ ಅನ್ನು ಸ್ವೀಕರಿಸಿದ ಮುಂಚೂಣಿ ಆಟಗಾರ ಉಂಡಾವ್‌ ಐವರಿ ಕೋಸ್ಟ್‌ ಗೋಲ್‌ಕೀರ್ಪ ಯಾಹಿಯಾ ಫೊಫಾನಾರನ್ನು ಮಣಿಸಿ ಚೆಂಡನ್ನು ಗೋಲಿನೊಳಗೆ ಸೇರಿಸಿದರು. ಈ ಗೋಲಿನೊಂದಿಗೆ ಜರ್ಮನಿ ತಂಡಕ್ಕೆ ಅಮೋಘ ಪುನರಾಗಮನದ ಜಯ ದೊರೆಯಿತು.
ನಾಲ್ಕು ಬಾರಿಯ ವಿಶ್ವಚಾಂಪಿಯನ್‌ ಜರ್ಮನಿ, 2018 ಮತ್ತು 2022ರ ವಿಶ್ವಕಪ್‌ಗಳಲ್ಲಿ ಗುಂಪು ಹಂತದಲ್ಲೇ ಹೊರಬಿದ್ದ ನಿರಾಸೆಯ ಬಳಿಕ ಈ ಬಾರಿ ನಾಕೌಟ್‌ ಹಂತ ತಲುಪುವಲ್ಲಿ ಯಶಸ್ವಿಯಾಗಿದೆ.
ಜರ್ಮನಿ ಕೊನೆಯ ಬಾರಿ 2014ರಲ್ಲಿ ಗುಂಪು ಹಂತ ದಾಟಿ ವಿಶ್ವಕಪ್‌ ಪ್ರಶಸ್ತಿಯನ್ನೂ ಗೆದ್ದಿತ್ತು. ಮೊದಲಾರ್ಧದಲ್ಲಿ ಜರ್ಮನಿ ಗಳಿಸಿದ ಎರಡು ಗೋಲುಗಳನ್ನು ರೆಫರಿ ನಿರಾಕರಿಸಿದರು. 21ನೇ ನಿಮಿಷದಲ್ಲಿ ಗೋಲ್‌ಕೀರ್ಪ ಫೊಫಾನಾ ಚೆಂಡನ್ನು ತಮದೇ ಗೋಲಿನೊಳಗೆ ತಳ್ಳಿದ್ದರೂ, ಅದಕ್ಕೂ ಮುನ್ನ ಜರ್ಮನಿಯ ಅಲೆಕ್ಸಾಂಡರ್‌ ಪಾವ್ಲೋವಿಚ್‌ ಅವರು ಫೊಫಾನಾ ಅವರೊಂದಿಗೆ ಅಕ್ರಮ ಸಂಪರ್ಕ ಸಾಧಿಸಿದ್ದರೆಂದು ತೀರ್ಪು ನೀಡಲಾಯಿತು.

38ನೇ ನಿಮಿಷದಲ್ಲಿ ಜಮಾಲ್‌ ಮುಸಿಯಾಲಾ ಮಾಡಿದ ಫೌಲ್‌ ಕಾರಣದಿಂದ ಕೈ ಹಾವರ್ಟ್‌್ಸ ಗಳಿಸಿದ್ದ ಗೋಲನ್ನೂ ರದ್ದುಪಡಿಸಲಾಯಿತು. ಇನ್ನೊಂದೆಡೆ, ಫ್ರಾನ್‌್ಸನ ನೈಸ್‌‍ ಕ್ಲಬ್‌ ಪರ ಆಡುತ್ತಿದ್ದಾಗ ಬೆಟ್ಟಿಂಗ್‌ಗೆ ಸಂಬಂಧಿಸಿದ ಆರೋಪಗಳ ತನಿಖೆ ಎದುರಿಸುತ್ತಿರುವ ಐವರಿ ಕೋಸ್ಟ್‌ ತಂಡದ ಸ್ಟ್ರೈಕರ್‌ ಎಲ್ಯೆ ವಹಿ ಅವರು ಕಾನೂನು ಹೋರಾಟದ ಬಳಿಕ ಕೆನಡಾಗೆ ಆಗಮಿಸಿದ್ದರೂ, ಈ ಪಂದ್ಯದಲ್ಲಿ ಆಡಲಿಲ್ಲ.
ಒಟ್ಟಾರೆ ಈ ಪಂದ್ಯ ಕುತೂಲಹಲ ಭರಿತವಾಗಿತ್ತು.ಎರಡು ತಂಡಗಳು ತಮ ಪೂರ್ಣ ಸಾಮಾರ್ಥ್ಯವನ್ನು ಪ್ರದರ್ಶಿಸುವ ಮೂಲಕ ರೋಚಕತೆ ಮೂಡಿಸಿದರು.

RELATED ARTICLES
spot_img

Latest News