Homeಬೆಂಗಳೂರುಬ್ಯಾಂಕಾಕ್‌ನಿಂದ ವಿಮಾನದಲ್ಲಿ ತಂದಿದ್ದ 18 ಕೋಟಿ ಮೌಲ್ಯದ ಹೈಡ್ರೋ ಪೋನಿಕ್‌ ಗಾಂಜಾ ವಶ

ಬ್ಯಾಂಕಾಕ್‌ನಿಂದ ವಿಮಾನದಲ್ಲಿ ತಂದಿದ್ದ 18 ಕೋಟಿ ಮೌಲ್ಯದ ಹೈಡ್ರೋ ಪೋನಿಕ್‌ ಗಾಂಜಾ ವಶ

ಬೆಂಗಳೂರು,ಸೆ.22- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸೌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 18 ಕೋಟಿ ಮೌಲ್ಯದ 51.3 ಕೆಜಿ ಹೈಡ್ರೋ ಪೋನಿಕ್‌ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬ್ಯಾಂಕಾಕ್‌ನಿಂದ ವಿಮಾನದಲ್ಲಿ ಬಂದ ಪ್ರಯಾಣಿಕರೊಬ್ಬರ ಲಗೇಜ್‌ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದ ಒಂದು ಪ್ರಕರಣದಲ್ಲಿ 5.35 ಕೋಟಿ ಮೌಲ್ಯದ 15.3 ಕೆಜಿ ಹೈಡ್ರೋ ಪೋನಿಕ್‌ ಗಾಂಜಾ ಪತ್ತೆಯಾಗಿದೆ.

ಮತ್ತೊಂದು ಪ್ರಕರಣದಲ್ಲಿ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ನಗರಕ್ಕೆ ಬಂದಿರುವ ಇಬ್ಬರು ಪ್ರಯಾಣಿಕರ ಲಗೇಜ್‌ ಬ್ಯಾಗ್‌ಗಳಲ್ಲಿ 12.57 ಕೋಟಿ ಮೌಲ್ಯದ 36 ಕೆಜಿ ಹೈಡ್ರೋ ಪೋನಿಕ್‌ ಗಾಂಜಾ ಪತ್ತೆಯಾಗಿದೆ. ಕಸ್ಟಮ್ಸೌ ಅಧಿಕಾರಿಗಳು ಎರಡು ಪ್ರಕರಣಗಳಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ.

93.78 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ :
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸೌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದಾಖಲೆಗಳಿಲ್ಲದೇ ಅಬುದಾಬಿಯಿಂದ ವಿಮಾನದಲ್ಲಿ ಅಡಗಿಸಿಟ್ಟುಕೊಂಡು ಲಗೇಜ್‌ನಲ್ಲಿ ತಂದಿದ್ದ 93.78 ಲಕ್ಷ ರೂ. ಮೌಲ್ಯದ 642 ಗ್ರಾಂ ಅಕ್ರಮ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

RELATED ARTICLES
spot_img

Latest News