Homeಇದೀಗ ಬಂದ ಸುದ್ದಿ11 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

11 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

ದಂಬೋಲ, ಜೂ.21- ಶ್ರೀಲಂಕಾ ಎ ವಿರುದ್ಧ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ 11 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಭಾರತ ಎ ತಂಡಕ್ಕೆ ಆಯ್ಕೆಯಾದ 15ರ ಪೋರನ ಮೇಲೆ ಆಯ್ಕೆ ಮಂಡಳಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಅದನ್ನು ಫೈನಲ್‌ ಪಂದ್ಯದಲ್ಲಿ ಸಾಬೀತುಪಡಿಸುವ ಮೂಲಕ 2027ರ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾನೆ.

2005-06ರ ಆವೃತ್ತಿಯ ಲೀಸ್ಟ್‌ ಎ ಪಂದ್ಯದಲ್ಲಿ ಶ್ರೀಲಂಕಾದ ಕೌಶಲ್ಯ ವೀರರತ್ನೆ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ನಿರ್ಮಿಸಿದ್ದ ದಾಖಲೆಯನ್ನು ವೈಭವ್‌ ಮುರಿದಿದ್ದಾರೆ. 2025- 26ರ ವಿಜಯ್‌ ಹಝಾರೆ ಟ್ರೋಫಿಯಲ್ಲಿ ಭಾರತದ ಸರ್ಫರಾಝ್‌ಖಾನ್‌ 15 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದರೂ ಈಗ ಈ ದಾಖಲೆಯು ವೈಭವ್‌ ಹೆಗಲೇರಿದೆ.

324.14 ಸ್ಟ್ರೈಕ್‌ ರೇಟ್‌ನಲ್ಲಿ 10 ಬೌಂಡರಿ, 8 ಸ್ಫೋಟಕ ಸಿಕ್ಸರ್‌ ಗಳ ನೆರವಿನಿಂದ 29 ಎಸೆತಗಳಲ್ಲಿ 94 ರನ್‌ ಸಿಡಿಸಿ ಶಹಾನ್‌ ಅರಚ್ಚಿ ಬೌಲಿಂಗ್‌ನಲ್ಲಿ ವಿ. ವ್ಯಾಸಕಾಂತ್‌ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ವೈಭವ್‌ ಔಟಾಗಿ ಶತಕ ವಂಚಿತರಾದರು.

RELATED ARTICLES

Latest News