Tuesday, April 14, 2026
Homeಅಂತಾರಾಷ್ಟ್ರೀಯಅಮೆರಿಕದ ಕೊನೆ ಎಚ್ಚರಿಕೆಗೂ ಜಗ್ಗದ ಇರಾನ್‌, ಖಡಕ್‌ ತಿರುಗೇಟು

ಅಮೆರಿಕದ ಕೊನೆ ಎಚ್ಚರಿಕೆಗೂ ಜಗ್ಗದ ಇರಾನ್‌, ಖಡಕ್‌ ತಿರುಗೇಟು

Iran issues strict warning to Trump, says will respond 'in kind' to any US attacks

ಟೆಹ್ರಾನ್‌, ಏ.6- ಟ್ರಂಪ್‌ ಕೊನೆ ಎಚ್ಚರಿಕೆಗೂ ಇರಾನ್‌ ಬಗ್ಗಿಲ್ಲ. ಯುದ್ಧದಿಂದಾಗಿರುವ ನಷ್ಟ ಪರಿಹಾರವಿಲ್ಲದೇ ಹಾರ್ಮುಜ್‌ ಜಲಸಂಧಿ ತೆರೆಯುವ ಮಾತಿಲ್ಲ ಎಂದು ಅಮೆರಿಕಗೆ ಖಡಕ್‌ ತಿರುಗೇಟು ನೀಡಿದೆ.ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಮತ್ತೆ 48 ಗಂಟೆಗಳ ಹೊಸ ಡೆಡ್‌ಲೈನ್‌ ನೀಡಿದ್ದು, ಅದು ನಾಳೆಗೆ ಮುಗಿಯಲಿದೆ. ಈ ನಡುವೆ ಹುಚ್ಚರೇ, ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಕಟು ಪದಗಳಲ್ಲಿ ಇರಾನ್‌ ನಾಯಕರನ್ನು ಟ್ರಂಪ್‌ ಎಚ್ಚರಿಸಿದ್ದಾರೆ.

ಟೆಹ್ರಾನ್‌ ಹಾರ್ಮುಜ್‌ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ಅದರ ವಿದ್ಯುತ್‌ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡಬಹುದು ಮತ್ತು ಅದು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ದಕ್ಷಿಣ ಇಸ್ರೇಲ್‌ನ ಡಿಮೋನಾ ಪ್ರದೇಶದ ಬಳಿಯ ಪೆಟ್ರೋಕೆಮಿಕಲ್‌ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್‌ ದಾಳಿ ನಡೆಸಿದೆ. ಡಿಮೋನಾ ಇಸ್ರೇಲ್‌ನ ಪ್ರಮುಖ ಪರಮಾಣು ಸೌಲಭ್ಯದ ಸ್ಥಳವಾಗಿದೆ. ಇದರ ಜೊತೆಗೆ ಕುವೈತ್‌ನ ಬುಬಿಯಾನ್‌ ದ್ವೀಪದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಡ್ರೋನ್‌ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಇರಾನ್‌ ಹೇಳಿದೆ.

ಯುನೈಟೆಡ್‌ ಅರಬ್‌ ಎಮಿರೇಟ್‌್ಸನಲ್ಲಿ ಪೆಟ್ರೋಕೆಮಿಕಲ್‌ ಸ್ಥಾವರದ ಮೇಲೆ ದಾಳಿ ನಡೆದ ನಂತರ ಬೆಂಕಿ ಕಾಣಿಸಿಕೊಂಡಿದೆ. ಬೊರೂಜ್‌ ಸ್ಥಾವರದಲ್ಲಿ ತಡೆಹಿಡಿಯುವ ಸಮಯದಲ್ಲಿ ಅವಶೇಷಗಳು ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಅಧಿಕಾರಿಗಳು ತಿಳಿಸಿದ್ದಾರೆ. ಅಬುಧಾಬಿ ಮಾಧ್ಯಮ ಕಚೇರಿಯ ಪ್ರಕಾರ, ಹಾನಿಯನ್ನು ನಿರ್ಣಯಿಸುವವರೆಗೆ ಸ್ಥಾವರದಲ್ಲಿನ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್‌‍, ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ.

ನೈಋತ್ಯ ಇರಾನ್‌ನ ವಿಮಾನ ನಿಲ್ದಾಣದ ಮೇಲೆ ಅಮೆರಿಕ-ಇಸ್ರೇಲ್‌ ದಾಳಿಗಳು ನಡೆದಿವೆ. ಇಸ್ರೇಲ್‌ ಗಡಿಯಿಂದ ದೂರದಲ್ಲಿರುವ ದಕ್ಷಿಣ ಲೆಬನಾನ್‌ನ ಕ್ಫರ್‌ ಹಟ್ಟಾ ಮೇಲೆ ಭಾನುವಾರ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಆರು ಜನರ ಕುಟುಂಬ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.

ಅಮೆರಿಕದ ದಾಳಿಗಳ ಬಗ್ಗೆ ಇರಾನ್‌ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ನಾಗರಿಕ ಮೂಲಸೌಕರ್ಯಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಇರಾನ್‌ ಆರೋಪಿಸಿದೆ. ಅವರ ಹೇಳಿಕೆಗಳು ನಾಗರಿಕರನ್ನು ಭಯಭೀತಗೊಳಿಸಲು ನೇರ ಮತ್ತು ಸಾರ್ವಜನಿಕ ಪ್ರಚೋದನೆ ಮತ್ತು ಯುದ್ಧ ಅಪರಾಧ ಮಾಡುವ ಉದ್ದೇಶದ ಪುರಾವೆಯಾಗಿದೆ ಎಂದು ಆರೋಪಿಸಿದೆ.

RELATED ARTICLES

Latest News