ನವದೆಹಲಿ,ಜು.26- ಕೂಗಾಡಿದ್ರಿ.. ಕಿರುಚಾಡಿದ್ರಿ… ಆದರೆ ಕಾಕ್ರೋಚ್‌ಗಳೇ ನಿಮಗೆ ಏನು ಸಿಕ್ಕಿತು? ಇದು ಕೇವಲ ಡ್ರಾಮ. ಗೆದ್ದಿದ್ದು ಮಾತ್ರ ಬಿಜೆಪಿ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾತುಗಳನ್ನು ಕೋಟ್ಯಂತರ ಜನರು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ. ಕೇಂದ್ರ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಬೇರೆ ಮಾತು. ಅಂಧ ಭಕ್ತರು ಎಂದು ಟೀಕಿಸುವ ನೀವು ಯಾರ ಭಕ್ತರು? ಯಾವ ಪಕ್ಷ ಇದನ್ನು ನಡೆಸಿತು ಎಂಬುದು ಜಗಜಾಹೀರವಾಗಿದೆ.
ನೀಟ್ ಲೀಕ್ ನೀಟ್ ಲೀಕ್ ಘೋಷಣೆಗಳನ್ನು ಕೂಗುವುದರಲ್ಲೇ ಕಾಲ ಕಳೆದ್ರಿ. ದೇಶದ ಗಮನವನ್ನು ಕೂಡ ಬೇರೆಡೆ ಸೆಳೆಯಲು ಪ್ರಯತ್ನಿಸಿದಿರಿ ಆದರೆ ಮೂರ್ಖರೇ ನೀವು ಸಾಧಿಸಿದ್ದು ಮಾತ್ರ ಶೂನ್ಯ!.
ಇದು ವಿದ್ಯಾರ್ಥಿಗಳ ಪ್ರತಿಭಟನೆ ಎಂದು ಬಿಂಬಿಸಿ ರಾಜಕೀಯ ಬೇಳೆ ಬೇಯಿಸಿಕೊಂಡು ಕುದುರೆ ಏರಿ ಹೊರಟವರು ಈಗ ಅದರಿಂದ ಬಿದ್ದು ಮುಖಮೂತಿ ಗಾಯ ಮಾಡಿಕೊಂಡಿದ್ದಾರೆ. ಇನ್ನು ಪ್ರಮುಖವಾಗಿ ಪರಿಸರ ಹೋರಾಟಗಾರ ವಾಂಗ್ಚುಕ್ ಸುಮಾರು 30 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ 10 ಕೆಜಿ ದೇಹ ತೂಕ ಇಳಿಸಿಕೊಂಡಿದ್ದಾರೆ. ಆದರೆ ಅವರು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಿರಲಿಲ್ಲ.
ಯಾವಾಗ ವಿದ್ಯಾರ್ಥಿಗಳೆಂದು ಹೇಳಿಕೊಂಡವರು ಹಿಂಸಾಚಾರದಲ್ಲಿ ತೊಡಗಿ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾದಾಗ ಇದರ ಹಿಂದೆ ನಡೆಯುತ್ತಿರುವ ವಾಸ್ತವ ಸತ್ಯವನ್ನು ಯಾರು ಕೂಡ ಅರಿಯಲಿಲ್ಲ. ಮಾಧ್ಯಮದವರು ಕೂಡ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ. ಈ ಎಲ್ಲಾ ಘಟನೆಗಳು ನಡೆಯುತ್ತಿದ್ದಾಗ ಏಕಾಏಕಿ ಉಲ್ಟಾ ಹೊಡೆದ ಸೋನಂ ವಾಂಗ್ಚುಕ್ ಜಿರಳೆಗಳು ಹೇಳಿದಂತೆಯೇ ಉಲ್ಟಾ ಹೊಡೆದು ರಾಜೀನಾಮೆ ಬೇಕು ಎಂದರು.
ಹೋರಾಟದ ನಡುವೆಯೇ ದೆಹಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚವನ್‌ಪ್ರಾಶ್ ತಿನ್ನಿಸಿದ ನಂತರ ಅವರು ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಅವರು ಹೋರಾಟದ ಬಗ್ಗೆ ಆಡಿರುವ ಮಾತು ನಿಮಗೆ ಜ್ಞಾನೋದಯವಾಗಿರಬಹುದು. ಈಗ ಪ್ರಮುಖವಾಗಿ ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಮಂಡನೆಯಾಗಲಿದೆ. ಇದನ್ನು ಯಾರೂ ಕೂಡ ತಡೆಯಲು ಆಗುವುದಿಲ್ಲ. ಈ ಹಿಂದೆ ಏನು ಕಾಂಗ್ರೆಸ್‌ನವರು ಸೋಲಿಸಿದ್ದೀವಿ ಎಂದು ಹಿರಿಹಿರಿ ಹಿಗ್ಗಿದವರು ಈಗ ಅವರ ಮುಂದೆ ಏನೂ ನಾಟಕ ನಡೆಯುವುದಿಲ್ಲ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈಗಾಗಲೇ ಲೋಕಸಭೆಯಲ್ಲಿ ಮೂರನೇ ಒಂದು ಭಾಗದ ಸಂಸದರ ಬಲ ಹೊಂದಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಅದರಲ್ಲಿ ಯಶಸ್ಸು ಕೂಡ ಸಾಧಿಸಿದ್ದಾರೆ.
ಇದರ ಹಿಂದೆ ಸಾಕಷ್ಟು ಅಳೆದುತೂಗಿ ಚಾಣಾಕ್ಷನ ನೀತಿ ಮೆರೆದವರು ಸಾಕಷ್ಟು ಮಂದಿ ಇದ್ದಾರೆ. ಸೋಲಾಗಿದೆ ಎಂದು ಹೇಳುತ್ತಿರುವವರು ಇನ್ನು ಸೋಲಲೇಬೇಕು. ಸಾಧನೆ ಮಾಡುವವರು ಈ ಸೋಲನ್ನೇಮೆಟ್ಟಿ ನಿಲ್ಲಬೇಕು. ಅದನ್ನು ಬಿಜೆಪಿ ಮಾಡುತ್ತಿದೆ.
ಈಗ ಲೋಕಸಭೆಯಲ್ಲಿ 355 ಸಂಸದರ ಬಲ ಹೊಂದಿದ್ದು, ಇನ್ನು ಅವರಿಗೆ ಬೇಕಿರುವುದು ಕೇವಲ 5 ನಿಮಿಷದಲ್ಲಿ ಅದನ್ನು ಪಡೆಯಬಹುದು. ಈಗಾಗಲೇ ಆಮ್ ಆದಿ, ಶಿವಸೇನೆ , ಟಿಎಂಸಿ ಸೇರಿದಂತೆ ಹಲವಾರು ಪಕ್ಷಗಳು ಎನ್‌ಡಿಎಯತ್ತ ವಾಲಿದ್ದಾರೆ. ಕಾಕ್ರೋಚ್ ಪಾರ್ಟಿ ಜೊತೆ ಬೇಳೆ ಬೇಯಿಸಿಕೊಂಡವರು ಈಗ ಅದರ ಬೆಲೆ ತೆರಬೇಕಿದೆ. ಇನ್ನು ಈ ಮಸೂದೆಗಳು ಮಂಡನೆಯಾದರೆ ಲೋಕಸಭೆ, ವಿಧಾನಸಭೆಯಲ್ಲೂ ಜನಸಂಖ್ಯಾ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆಯಾಗುತ್ತದೆ. ಮೂರ್ಖರೇ ಇನ್ನು ನೀವು 40 ವರ್ಷ ವಿಪಕ್ಷದಲ್ಲೇ ಕೂರಬೇಕಾಗುತ್ತದೆ. ದಡ್ಡರಾಗಿ ಇಂತಹ ಹುಂಬತನ ತೋರಿ ಹೋರಾಟದ ನೆಪದಲ್ಲಿ ಈ ವಿಷಯವನ್ನೇ ಮರೆತ ನಿಮಗೆ ಏನೆನ್ನಬೇಕೋ? ಅಭಿಜಿತ್ ದೀಪ್ಕೆ ಎಲ್ಲಿಂದ ಬಂದು ಕಾಕ್ರೋಚ್ ಪಾರ್ಟಿ ಕಟ್ಟಿದರು. ಅವರ ಹಿಂದೆ ಇದ್ದವರು ಯಾರು? ಯಾವ ಹಿನ್ನೆಲೆ ಹೊಂದಿದ್ದಾರೆ? ಅವರಿಗೆ ಯಾರು ಆರ್ಥಿಕವಾಗಿ ಬೆಂಬಲ ನೀಡಿದ್ದಾರೆ? ಎಂಬುದು ಬಹಿರಂಗವಾಗುತ್ತಿದೆ.
ಇನ್ನು ಈ ಹೋರಾಟದಲ್ಲಿ ನೈಜ ವಿದ್ಯಾರ್ಥಿಗಳು ಸ್ವಾರ್ಥಿಗಳ ಜೊತೆ ಸೇರಿಕೊಂಡು ಏನಾಗಿದೆ ಎಂಬುದು ತಿಳಿಯದೆ ಸಂಭ್ರಮಿಸುತ್ತಿದ್ದಾರೆ. ಹಾದಿಬೀದಿಗಳಲ್ಲಿ ನೀವು ಹೋರಾಟ ಮಾಡುತ್ತಿದ್ದರೆ ಬಿಲ್ ಪಾಸ್‌ಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಎನ್‌ಡಿಎ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರಮೋದಿ ಅವರು ವಿದ್ಯಾರ್ಥಿಗಳ ಪರವಿದ್ದೇವೆ ಎಂದು ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅವರ ಮೌನವು ಕೂಡ ಹೊಸ ಅಸ್ತ್ರ ಎಂಬುದು ಎಷ್ಟೋ ಮಂದಿಗೆ ಈಗ ಅರ್ಥವಾಗಿದೆ.
