Homeಇದೀಗ ಬಂದ ಸುದ್ದಿವ್ಯಕ್ತಿಗತ ಘೋಷಣೆ ಕೂಗಿದರೆ ಶಿಸ್ತು ಕ್ರಮ: ಕಾಂಗ್ರೆಸ್ ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ಕಠಿಣ ಎಚ್ಚರಿಕೆ

ವ್ಯಕ್ತಿಗತ ಘೋಷಣೆ ಕೂಗಿದರೆ ಶಿಸ್ತು ಕ್ರಮ: ಕಾಂಗ್ರೆಸ್ ಕಾರ್ಯಕರ್ತರಿಗೆ ಮಲ್ಲಿಕಾರ್ಜುನ ಖರ್ಗೆ ಕಠಿಣ ಎಚ್ಚರಿಕೆ

ಬೆಂಗಳೂರು, ಜೂ. 21- ಕಾಂಗೆಸ್‌‍ನಲ್ಲಿ ಶಿಸ್ತು ಬಹಳ ಮುಖ್ಯ. ಕಾರ್ಯಕ್ರಮದ ನಡುವೆ ಯಾರಾದರು ವ್ಯಕ್ತಿಗತ ವರ್ಚಸ್ಸಿಗಾಗಿ ಘೋಷಣೆ ಕೂಗಿದರೆ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರ ಪದಗ್ರಹಣ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ, ಡಿ.ಕೆ.ಶಿವಕುಮಾರ್‌ ಈ ಹಿಂದೆ ಆರೂವರೆ ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಈಗ ಮುಖ್ಯಮಂತ್ರಿಯಾದ ಮೇಲೆ ಎನ್ನುತ್ತಿದ್ದಂತೆ ಸಭಾಂಗಣದಲ್ಲಿ ಇದ್ದ ಕಾರ್ಯಕರ್ತರು, ಮುಖಂಡರ ಪೈಕಿ ಡಿಕೆ…ಡಿಕೆ… ಎಂದು ಘೋಷಣೆ ಕೂಗಿದರು.

ವೇದಿಕೆಯಲ್ಲೇ ಇದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ತಕ್ಷಣವೇ ಎದ್ದು ನಿಂತು ಘೋಷಣೆ ಕೂಗದಂತೆ ಕೈ ಸನ್ನೆ ಮಾಡಿದರು. ಘೋಷಣೆಗಳಿಂದ ಮುಜುಗರಕ್ಕೊಳಗಾದ ಮಲ್ಲಿಕಾರ್ಜುನ ಖರ್ಗೆ ಅವರು ನಿಮದೆಲ್ಲಾ ಮುಗಿಯಿತೇ? ಮುಂದೆ ಇರುವ ಒಂದು ಗುಂಪಿನಲ್ಲಿ ಮಾತ್ರ ಈ ರೀತಿ ಘೋಷಣೆ ಕೇಳಿ ಬರುತ್ತಿದೆ. ಇಲ್ಲಿ ನಿಂತು ಕೆಲವರು ಘೋಷಣೆ ಕೂಗಿದರೆ, ದೇಶವೇ ನಮ ಕೈಗೆ ಬಂದಾಂತಾಗುತ್ತದೆಯೇ? ಯೂಸ್‌‍ ಲೆಸ್‌‍ ಫೆಲೋಸ್‌‍ ಎಂದು ಖಾರವಾಗಿ ಹೇಳಿದರು.

ಇದು ಒಬ್ಬ ವ್ಯಕ್ತಿಯ ಸಭೆಯಲ್ಲ, ಎಲ್ಲರೂ ಸೇರಿ ಪಕ್ಷವನ್ನು ಬಲಗೊಳಿಸಬೇಕು. ಒಬ್ಬರ ಹೆಸರನ್ನು ಮಾತ್ರ ಕೂಗಿದರೆ ಉಳಿದವರು ಕಸ ಗುಡಿಸಲು ಬಂದಿದ್ದಾರೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‌‍ನಲ್ಲಿ ಶಿಸ್ತು ಬಹಳ ಮುಖ್ಯ. 58 ವರ್ಷಗಳ ತಮ ರಾಜಕೀಯ ಜೀವನದಲ್ಲಿ ಬಹಳ ಏರುಪೇರುಗಳನ್ನು ನೋಡಿದ್ದೇನೆ. ಅನೇಕರು ಕಾಂಗ್ರೆಸ್‌‍ನಿಂದ ನಾಯಕರಾಗಿದ್ದಾರೆ. ಕಾಂಗ್ರೆಸ್‌‍ಗೆ ಅವರ ಕೊಡುಗೆ ಕಡಿಮೆ ಇದ್ದರೂ, ಪಕ್ಷ ಅವರಿಗೆ ಶಕ್ತಿ ನೀಡಿದೆ ಎಂದು ಹೇಳಿದರು.

ಈ ರೀತಿಯ ಘೋಷಣೆ ಕೂಗುವವರ ವಿರುದ್ಧ ದೃಶ್ಯಾವಳಿಗಳನ್ನು ಆಧರಿಸಿ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದು ಅತ್ಯಂತ ಮಹತ್ವದ ಸಭೆ. ಶಿಸ್ತು ಪಾಲನೆ ಮಾಡಿ ಎಂದು ಹೇಳಿದರು.
ಇದೇ ವೇಳೆ ಬಿ.ಕೆ.ಹರಿಪ್ರಸಾದ್‌ ಮತ್ತು ಡಿ.ಕೆ.ಶಿವಕುಮಾರ್‌ ಅವರ ಜೋಡಿಯಿಂದ ಪಕ್ಷ ಸಂಘಟನೆ ಬಲಗೊಳ್ಳಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಬಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ತಮ ಮಾತುಗಳಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಯುವಕ ಎಂದು ಸಂಬೋಧಿಸಿದ ಖರ್ಗೆ ಅವರು ತಕ್ಷಣವೇ ತಿದ್ದಿಕೊಂಡು ಯುವಕ ಏನೂ ಅಲ್ಲ, ಮೊಮಗಳು ಬಂದಿದ್ದಾಳೆ. ಆದರೆ ನೋಡಲು ಯುವಕರಂತೆ ಕಾಣುತ್ತಾರೆ. ಹಾಗೆಯೇ ನಡೆಯುತ್ತಾರೆ. ಯುವ ಸಮುದಾಯ ಡಿ.ಕೆ.ಶಿವಕುಮಾರ್‌ ಜೊತೆಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

RELATED ARTICLES
spot_img

Latest News