Homeರಾಷ್ಟ್ರೀಯಇಂಧನ ಮಿತ ಬಳಕೆಗೆ ಪ್ರಧಾನಿ ನೀಡಿದ ಕರೆಗೆ ದೇಶಾದ್ಯಂತ ಸ್ಪಂದನೆ

ಇಂಧನ ಮಿತ ಬಳಕೆಗೆ ಪ್ರಧಾನಿ ನೀಡಿದ ಕರೆಗೆ ದೇಶಾದ್ಯಂತ ಸ್ಪಂದನೆ

Modi's fuel-saving push sparks nationwide political response

ನವದೆಹಲಿ,ಮೇ16- ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಜಾಗತಿಕ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂಧನ ಬಳಕೆಯನ್ನು ಮಿತವಾಗಿ ಬಳಕೆ ಮಾಡಬೇಕೆಂಬ ಪ್ರಧಾನಿ ನರೇಂದ್ರಮೋದಿ ಕರೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರಧಾನಿಯವರು ಕಳೆದ ಭಾನುವಾರ ಕರೆಕೊಟ್ಟ ನಂತರ ಬಿಜೆಪಿ ಹಾಗೂ ಬಿಜೆಪಿಯೇತರ ಆಡಳಿತ ವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು ಜೊತೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳು, ಜನಸಾಮಾನ್ಯರು, ಕಾರ್ಪೋರೇಟ್‌ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು ಸೇರಿದಂತೆ ಮತ್ತಿತರರು ತಮ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ವಿದೇಶಿ ಅವಲಂಬನೆ ತಗ್ಗಿಸಲು ಮತ್ತು ಆರ್ಥಿಕತೆಯನ್ನು ಬಲಪಡಿಸಲು ಮೋದಿಯವರ ಕರೆಗೆ ಅನೇಕರು ಸ್ಪಂದಿಸಿ ತೈಲ ಉಳಿತಾಯಕ್ಕೆ ಆದ್ಯತೆ ಕೊಟ್ಟಿದ್ದಾರೆ. ಸ್ವತಃ ಪ್ರಧಾನಿಯವರೇ ತಮ ಬೆಂಗಾವಲು ವಾಹನಗಳನ್ನು ಗಣನೀಯವಾಗಿ ಇಳಿಕೆ ಮಾಡಿ ಸದ್ಯ ಎರಡು ವಾಹನಗಳನ್ನು ಬಳಸುತ್ತಿದ್ದಾರೆ. ಇದೇ ಕೇಂದ್ರ ಗೃಹಸಚಿವ ಅಮಿತ್‌ ಷಾ ಕೂಡ ಪ್ರಧಾನಿಗಳ ದಾರಿಯನ್ನೇ ಹಿಡಿದಿದ್ದು, ಬೆಂಗಾವಲು ಪಡೆಯ ವಾಹನಗಳನ್ನು ಇಳಿಕೆ ಮಾಡಿದ್ದಾರೆ.

ಕೇಂದ್ರದ ಬಹುತೇಕ ಸಚಿವರು ತಮ ಬೆಂಗಾವಲು ವಾಹನಗಳನ್ನು ಕಡಿತ ಮಾಡಿದ್ದು, ಎರಡು ವಾಹನಗಳು ಮತ್ತು ಅಗತ್ಯವಿರುವ ಕಡೆ ಸಮೂಹ ಸಾರಿಗೆಯನ್ನು ಬಳಸುತ್ತಿದ್ದಾರೆ. ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಲ್ಹೋಟ್‌, ಸಿಐಎಸ್‌‍ಎಫ್‌ ಭದ್ರತೆಯನ್ನು ಬದಿಗಿರಿಸಿ ಬೆಂಗಾವಲು ಪಡೆಯ ವಾಹನಗಳನ್ನು ಶುಕ್ರವಾರದಿಂದಲೇ ಕಡಿತ ಮಾಡಿದ್ದಾರೆ.

ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್‌‍, ಗೋವಾದ ಪ್ರಮೋದ್‌ ಸಾವಂತ್‌, ಉತ್ತರಖಂಡದ ಪುಷ್ಕರ್‌ ಧಾಮಿ ಸೇರಿದಂತೆ ಸಚಿವರು, ಶಾಸಕರು ಮತ್ತಿತರರು ಇಂಧನ ಉಳಿತಾಯಕ್ಕೆ ಬೆಂಗಾವಲು ಪಡೆಯ ವಾಹನಗಳನ್ನು ಕಡಿಮೆ ಮಾಡಿದ್ದಾರೆ.

ಜಮು ಮತ್ತು ಕಾಶೀರದ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಂಪನಿಗಳು ತಮ ಅಧಿಕೃತ ವಾಹನಗಳನ್ನು ಬಿಟ್ಟು ಹೈಬ್ರೀಡ್‌ ಕೆಲಸದ ವಿಧಾನಗಳನ್ನು ಅಳವಡಿಸಿಕೊಂಡು ಪ್ರಧಾನಿ ಕರೆಗೆ ಸ್ಪಂದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಕರ್ನಾಟಕದಲ್ಲೂ ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟು ಕೇಂದ್ರ ಸಚಿವರು, ವಿಧಾನಮಂಡಲದ ಉಭಯಸದನಗಳ ಪ್ರತಿಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವರು ವಾಹನಗಳನ್ನು ಕಡಿಮೆ ಮಾಡಿ ಸಮೂಹ ಸಾರಿಗೆಗೆ ಒತ್ತು ಕೊಟ್ಟಿದ್ದಾರೆ.

ಪ್ರಧಾನಿಯವರ ಕರೆಗೆ ಸುಪ್ರೀಂಕೋರ್ಟ್‌ ಕೂಡ ಸ್ಪಂದಿಸಿದ್ದು, ಇನ್ನು ಮುಂದೆ ವಾರದಲ್ಲಿ ಮೂರು ದಿನ ನ್ಯಾಯಾಲಯಗಳಲ್ಲಿ ಹಾಗೂ ಉಳಿದ ಮೂರು ದಿನದಲ್ಲಿ ವರ್ಚ್ಯುವಲ್‌ ಮೂಲಕ ಕಲಾಪ ನಡೆಸಲು ತೀರ್ಮಾನಿಸಿದೆ.

ಇತ್ತೀಚೆಗೆ ನ್ಯಾಯಾಧೀಶರೊಬ್ಬರು ತಮ ವಾಹನಗಳನ್ನು ಬಿಟ್ಟು ಸೈಕಲ್‌ ಏರಿ ನ್ಯಾಯಾಲಯಕ್ಕೆ ಆಗಮಿಸಿ ದೇಶದ ಗಮನ ಸೆಳೆದಿದ್ದರು. ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸಿಎಂ ಫಡ್ನವೀಸ್‌‍ ಕೂಡ ದ್ವಿಚಕ್ರ ವಾಹನದಲ್ಲಿ ಸಚಿವಾಲಯಕ್ಕೆ ಆಗಮಿಸಿದ್ದರು.

ಮೆಟ್ರೋ ನಗರಗಳಲ್ಲಿ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವುದು, ಕಾರು ಪೂಲಿಂಗ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವಂತೆ ಪ್ರಧಾನಿ ಸಲಹೆ ನೀಡಿದ್ದರು. ಇಂಧನ ಉಳಿತಾಯಕ್ಕಾಗಿ ಕೋವಿಡ್‌-19 ಮಾದರಿಯಲ್ಲಿ ವರ್ಕ್‌ ಫ್ರಮ್‌ ಹೋಮ್‌ ಮತ್ತು ಆನ್‌ಲೈನ್‌ ಸಭೆಗಳನ್ನು ಸಾಧ್ಯವಾದಷ್ಟು ಮರುಪರಿಚಯಿಸುವಂತೆ ಕೋರಿದ್ದರು.

ಇಂಧನದ ಜೊತೆಗೆ ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸದಿರಲು ಮತ್ತು ವಿದೇಶಿ ಪ್ರವಾಸಗಳನ್ನು ಮುಂದೂಡಲು ಕರೆ ನೀಡಿದ್ದರು. ಸ್ವತಃ ಪ್ರಧಾನಿ ಮೋದಿಯವರು ತಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.

RELATED ARTICLES

Latest News