ನವದೆಹಲಿ,ಏ.9- ಭಾರತ ಸೇರಿದಂತೆ ಏಷ್ಯಾದ ದೇಶಗಳಿಗೆ ರಷ್ಯಾ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ವನ್ನು ಕಡಿಮೆ ಬೆಲೆಗೆ ಪೂರೈಸಲು ಮುಂದಾಗಿದೆ. ಖರೀದಿದಾರರಿಗೆ ಶೇ.40ವರೆಗೆ ರಿಯಾಯಿತಿ ನೀಡಿ ರಷ್ಯಾ ದ್ರವೀಕೃತ ನೈಸರ್ಗಿಕ ಅನಿಲ ಮಾರುಕಟ್ಟೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ವರದಿಯಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುತ್ತಿರುವ ಅಡಚಣೆಗಳಿಂದ ಭಾರತದ ಇಂಧನ ಪೂರೈಕೆಗೆ ತೊಂದರೆಯಾಗುತ್ತಿದೆ. ರಷ್ಯಾದ ಈ ರಿಯಾಯಿತಿ ಭಾರತೀಯ ಕಂಪನಿಗಳಿಗೆ ಕಡಿಮೆ ಬೆಲೆಯಲ್ಲಿ ಎಲ್‌ಎನ್‌ಜಿ ಖರೀದಿಸುವ ಅವಕಾಶವನ್ನು ಕಲ್ಪಿಸಿದೆ.
ರಷ್ಯಾ ಭಾರತಕ್ಕೆ ತೈಲವನ್ನು ಪೂರೈಸಿದೆ. ಏಷ್ಯಾದ ತೈಲ ಖರೀದಿದಾರರಿಗೆ ದ್ರವೀಕೃತ ನೈಸರ್ಗಿಕ ಅನಿಲ ಮೇಲೆ 40%ರಷ್ಯಾ ಈಗಾಗಲೇ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಿದೆ.
ಈಗ ದ್ರವೀಕೃತ ನೈಸರ್ಗಿಕ ಅನಿಲದ ಮೇಲೂ ಗಮನ ಹರಿಸುತ್ತಿದೆ. ಕಳೆದ ವಾರವಷ್ಟೇ ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಾಂಟುರೊವ್ ನವದೆಹಲಿಗೆ ಭೇಟಿ ನೀಡಿ, ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಸ್ತಾಪ ಮಾಡಿದ್ದರು.
ರಷ್ಯಾದ ಕಂಪನಿಗಳು ಭಾರತಕ್ಕೆ ಹೆಚ್ಚು ಅನಿಲ ಸರಬರಾಜು ಮಾಡಲು ಸಿದ್ಧವಿದೆ ಎಂದು ಅವರು ಹೇಳಿದ್ದರು. ಈಗ ರಷ್ಯಾ ಏಷ್ಯಾದ ಖರೀದಿದಾರರಿಗೆ ದ್ರವೀಕೃತ ನೈಸರ್ಗಿಕ ಅನಿಲ ಮೇಲೆ ಶೇ.40ರಷ್ಟು ರಿಯಾಯಿತಿ ನೀಡುತ್ತಿದೆ.
ಇದು ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಗೆ ಆಕರ್ಷಣೀಯ ಕೊಡುಗೆಯಾಗಿದೆ. ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ರಷ್ಯಾದ ಈ ನಡೆ ಏಷ್ಯಾದ ದೇಶಗಳಿಗೆ ದೊಡ್ಡ ನೆರವಾಗುವ ಸಾಧ್ಯತೆ ಇದೆ. ವರೆಗೆ ಗಮನಾರ್ಹ ರಿಯಾಯಿತಿಯನ್ನೂ ನೀಡುತ್ತಿದೆ.
ಈ ಸುದ್ದಿ ಭಾರತದ ದ್ರವೀಕೃತ ನೈಸರ್ಗಿಕ ಅನಿಲ ವಲಯದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಪೆಟ್ರೋನೆಟ್ ಎಲ್‌ಎನ್‌ಜಿ ಷೇರುಗಳು ಇಂದು ಸ್ವಲ್ಪ ಏರಿಕೆ ಕಂಡಿವೆ. ಕಳೆದ ವಾರ ಷೇರುಗಳು ಶೇ.6ರಷ್ಟು ಕುಸಿದಿದ್ದವು. ಆದರೆ ರಷ್ಯಾದ ರಿಯಾಯಿತಿ ಸುದ್ದಿ ಬಂದ ನಂತರ ಷೇರುಗಳು ಸ್ವಲ್ಪ ಚೇತರಿಕೆ ಕಾಣುತ್ತಿವೆ. ಭಾರತ ತನ್ನ ಇಂಧನ ಅಗತ್ಯಗಳಲ್ಲಿ ಗಣನೀಯ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುತ್ತಿರುವ ಅಡಚಣೆಗಳಿಂದ ತೈಲ ಮತ್ತು ಅನಿಲ ಪೂರೈಕೆಗೆ ತೊಂದರೆಯಾಗುತ್ತಿದೆ. ಈ ಸಮಯದಲ್ಲಿ ರಷ್ಯಾ ಕಡಿಮೆ ಬೆಲೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಪೂರೈಸುವುದು ಭಾರತಕ್ಕೆ ದೊಡ್ಡ ಸಹಾಯವಾಗುತ್ತದೆ.
ರಷ್ಯಾ ಏಷ್ಯಾದ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಬಯಸುತ್ತಿದೆ. ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಯುರೋಪ್ ಮತ್ತು ಇತರ ದೇಶಗಳು ರಷ್ಯಾದ ಇಂಧನವನ್ನು ಕಡಿಮೆ ಮಾಡುತ್ತಿರುವುದರಿಂದ, ರಷ್ಯಾ ತನ್ನ ಎಕ್‌್ಸಪೋರ್ಟ್ ಅನ್ನು ಏಷ್ಯಾದ ಕಡೆಗೆ ತಿರುಗಿಸುತ್ತಿದೆ. ಶೇ.40ರಷ್ಟು ರಿಯಾಯಿತಿ ನೀಡುವ ಮೂಲಕ ರಷ್ಯಾ ಭಾರತ ಸೇರಿದಂತೆ ಏಷ್ಯಾದ ದೇಶಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಆದರೆ ತಜ್ಞರು ಎಚ್ಚರಿಸುತ್ತಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುತ್ತಿರುವ ಅಪಾಯಗಳು ಇನ್ನೂ ಇದ್ದೇ ಇವೆ. ರಷ್ಯಾದ ಈ ರಿಯಾಯಿತಿ ತಾತ್ಕಾಲಿಕವಾಗಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೂ ಪ್ರಸ್ತುತ ಸಮಯದಲ್ಲಿ ಭಾರತಕ್ಕೆ ಇದು ಉತ್ತಮ ಅವಕಾಶವಾಗಿದೆ.
