Homeಅಂತಾರಾಷ್ಟ್ರೀಯಶ್ವೇತಭವನ ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡಿನ ದಾಳಿ; ಶಂಕಿತ ಹತ

ಶ್ವೇತಭವನ ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡಿನ ದಾಳಿ; ಶಂಕಿತ ಹತ

ವಾಷಿಂಗ್ಟನ್‌, ಮೇ.24- ಅಮೆರಿಕದ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರದ ಬಳಿ ಶಸ್ತ್ರಾಸ್ತ್ರದೊಂದಿಗೆ ಬಂದ ವ್ಯಕ್ತಿಯೊಬ್ಬ ಅಧಿಕಾರಿಗಳತ್ತ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಕೂಡಲು ಎಚ್ಚತ್ತ ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ದಾಳಿಕೋರ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಸೀಕ್ರೆಟ್‌ ಸರ್ವಿಸ್‌‍ ನೀಡಿದ ಮಾಹಿತಿ ಪ್ರಕಾರ,ಶನಿವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಶಂಕಿತ ವ್ಯಕ್ತಿ ತಪಾಸಣಾ ಕೇಂದ್ರದ ಬಳಿ ಬಂದು ತನ್ನ ಬ್ಯಾಗಿನಿಂದ ಶಸ್ತ್ರಾಸ್ತ್ರ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳತ್ತ ಗುಂಡು ಹಾರಿಸಲು ಆರಂಭಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದು, ಶಂಕಿತ ವ್ಯಕ್ತಿಗೆ ಗುಂಡೇಟು ತಗುಲಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ನಾಗರೀಕನೊಬ್ಬನಿಗೆ ಗಾಯಗಳಾಗಿವೆ. ಆದರೆ ಅವರಿಗೆ ಶಂಕಿತನ ಗುಂಡಿನಿಂದ ಗಾಯವಾಗಿದೆಯೋ ಅಥವಾ ಅಧಿಕಾರಿಗಳ ಪ್ರತಿದಾಳಿಯ ವೇಳೆ ಗಾಯವಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸೀಕ್ರೆಟ್‌ ಸರ್ವಿಸ್‌‍ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಅಲ್ಲದೆ, ಘಟನೆಯ ವೇಳೆ ಶ್ವೇತಭವನದಲ್ಲಿದ್ದ ಅಮೆರಿಕ ಅಧ್ಯಕ್ಷ ಟಂಪ್‌ ಅವರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದು ತನಿಖೆ ಆರಂಭಿಸಿವೆ.

RELATED ARTICLES
spot_img

Latest News