ನಿತ್ಯ ನೀತಿ : ತಪ್ಪಿಗೆ ಕ್ಷಮೆ ಇದೆ. ಆದರೆ ಮೋಸಕ್ಕಲ್ಲ… ಎಲ್ಲರೂ ತಪ್ಪುಗಳನ್ನು ಗೊತ್ತಿಲ್ಲದೆ ಮಾಡುತ್ತಾರೆ. ಆದರೆ ಮೋಸ ಗೊತ್ತಿದ್ದೇ ಮಾಡುತ್ತಾರೆ.
ಪಂಚಾಂಗ : ಗುರುವಾರ, 05-02-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾ / ಯೋಗ: ಸುಕರ್ಮಾ / ಕರಣ: ಬವ
ಸೂರ್ಯೋದಯ – 06.46
ಸೂರ್ಯಾಸ್ತ – 6.22
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30
ರಾಶಿಭವಿಷ್ಯ :
ಮೇಷ: ಆತೀಯರಿಂದ ಸಹಾಯ ಸಿಗಲಿದೆ. ಕುಟುಂಬದ ಕಡೆ ಗಮನ ಹರಿಸಿ.
ವೃಷಭ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.
ಮಿಥುನ: ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ.
ಕಟಕ: ಆಸ್ತಿ, ಅಪಾರ್ಟ್‌ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ಸಿಂಹ: ಅಂದುಕೊಂಡ ಕೆಲಸಗಳು ಅಡೆತಡೆಗಳಿಲ್ಲದೆ ನೆರವೇರಲಿವೆ.
ಕನ್ಯಾ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.
ತುಲಾ: ವ್ಯಾಪಾರ- ವ್ಯವಹಾರ ದಲ್ಲಿ ಹಿನ್ನಡೆ ಯಾಗಿ ಮಾನಸಿಕವಾಗಿ ಅಸ್ಥಿರತೆ ಕಾಡಲಿದೆ.
ವೃಶ್ಚಿಕ: ನಿಮ ಆಸೆಗಳು ಈಡೇರುವುದರಿಂದ ಮನಸ್ಸಿಗೆ ನೆಮದಿ ಸಿಗಲಿದೆ.
ಧನುಸ್ಸು: ವೃತ್ತಿಪರರಿಗೆ ದಿನವೂ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ.
ಮಕರ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನು ಕೂಲವಾಗಲಿದೆ. ಮಿತ್ರರಿಂದ ಸಹಾಯ ಸಿಗಲಿದೆ.
ಕುಂಭ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸುವುದು ಬಹಳ ಕಷ್ಟದಾಯಕ. ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ.
ಮೀನ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
