ನಿತ್ಯ ನೀತಿ : ಸಂಪತ್ತು ಉಳ್ಳವನು ಶ್ರೀಮಂತನಲ್ಲ ಸಂತಸ ಉಳ್ಳವನೇ ನಿಜವಾದ ಶ್ರೀಮಂತ.
ಪಂಚಾಂಗ : ಶನಿವಾರ, 09-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ:ವೈಶಾಖ / ಪಕ್ಷ:ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಶ್ರವಣ / ಕರಣ: ಬಾಲವ
ಸೂರ್ಯೋದಯ – ಬೆ.5.57
ಸೂರ್ಯಾಸ್ತ – 06.37
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ. ಯಶಸ್ಸು ಸಾಧಿಸುವಿರಿ.
ವೃಷಭ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮವಾದ ದಿನ.
ಮಿಥುನ: ವೃತ್ತಿಪರರು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಗಮನ ಹರಿಸಬೇಕು.
ಕಟಕ: ಕಚೇರಿಯಲ್ಲಿ ಉನ್ನತ ಅಧಿಕಾರಿಯೊಂದಿಗೆ ವಾದ- ವಿವಾದ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಸಿಂಹ: ಹಿಡಿದ ಕೆಲಸ ಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.
ಕನ್ಯಾ: ಕೌಟುಂಬಿಕ ಮತ್ತು ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ.
ತುಲಾ: ಮೇಲಧಿಕಾರಿ ಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ಜಗಳ ವಾಡುವ ಸಂದರ್ಭ ಎದುರಾಗಬಹುದು.
ಧನುಸ್ಸು: ಸುತ್ತಮುತ್ತಲಿನ ಜನರೊಂದಿಗೆ ಹೆಚ್ಚು ಮಾತನಾಡದಿರುವುದು ಬಹಳ ಒಳ್ಳೆಯದು.
ಮಕರ: ಆರ್ಥಿಕವಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಮುಂಜಾಗ್ರತೆ ವಹಿಸಿ.
ಕುಂಭ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವ ವರು ಅಽಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಮೀನ: ನೀವು ಮಾಡುವ ಉತ್ತಮ ಕೆಲಸಗಳಿಗೆ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ.
