Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-02-2026)

Today's Horoscope

ನಿತ್ಯ ನೀತಿ : ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳುವುದನ್ನು ಮತ್ತು ಬೇರೆಯವರಿಂದ ನಿರೀಕ್ಷೆ ಮಾಡುವುದನ್ನು ಬಿಟ್ಟರೆ, ಮನುಷ್ಯನ ಜೀವನದಲ್ಲಿ ಅರ್ಧ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ.

ಪಂಚಾಂಗ : ಬುಧವಾರ, 11-02-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ನವಮಿ / ನಕ್ಷತ್ರ: ಅನುರಾಧಾ / ಯೋಗ: ವ್ಯಾಘಾತ / ಕರಣ: ವಣಿಜ
ಸೂರ್ಯೋದಯ – 06.45
ಸೂರ್ಯಾಸ್ತ – 6.25
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :

ಮೇಷ: ಮಿತ್ರರಲ್ಲಿ ಕಂಡುಬರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಯತ್ನಿಸುವಿರಿ.
ವೃಷಭ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆ ವಹಿಸಿ.
ಮಿಥುನ: ವಾಹನ ಚಾಲಕರು ಅತ್ಯಂತ ಎಚ್ಚರಿಕೆ ಯಿಂದ ಇರಬೇಕಾದ ದಿನ.

ಕಟಕ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲ.
ಸಿಂಹ: ನೀವು ಯೋಚಿಸಿ ದಂತೆಯೇ ಸನ್ನಿವೇಶಗಳು ಎದುರಾಗಿ ಅಚ್ಚರಿ ಮೂಡಿಸಲಿವೆ.
ಕನ್ಯಾ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.

ತುಲಾ: ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ನೀವು ಶಕ್ತಿರಾಗಿರುವಿರಿ.
ವೃಶ್ಚಿಕ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆ ವೇಳೆಗೆ ಕೈ ಸೇರುವುದು.
ಧನುಸ್ಸು: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.

ಮಕರ: ಮಗಳ ಮದುವೆಯ ಕಾರ್ಯಕಲಾಪಗಳು ಸುಗಮವಾಗಿ ಸಾಗುವುದರಿಂದ ನೆಮದಿ ಇರಲಿದೆ.
ಕುಂಭ: ತುರ್ತು ವಿಷಯಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಮೀನ: ಅತಿಯಾದ ಮಾತಿನಿಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಕಾದಿತು.

RELATED ARTICLES

Latest News