ನಿತ್ಯ ನೀತಿ : ನಂಬಿದವರೆಲ್ಲರೂ ನಮ್ಮವರು ಆಗಲ್ಲ , ನಮ್ಮವರನ್ನೆಲ್ಲ ನಂಬುವುದಕ್ಕೂ ಆಗಲ್ಲ.
ಪಂಚಾಂಗ : 22-05-2026, ಶುಕ್ರವಾರ
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ / ಮಾಸ: ಅಧಿಕ / ಜ್ಯೇಷ್ಠ ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಅಶ್ಲೇಷಾ / ಯೋಗ: ವೃದ್ಧಿ / ಕರಣ: ಗರಜ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.40
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ. ಯಶಸ್ಸು ಸಾ ಸುವಿರಿ.
ವೃಷಭ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮವಾದ ದಿನ.
ಮಿಥುನ: ವೃತ್ತಿಪರರು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಗಮನ ಹರಿಸಬೇಕು.
ಕಟಕ: ಕಚೇರಿಯಲ್ಲಿ ಉನ್ನತ ಅ ಕಾರಿಯೊಂದಿಗೆ ವಾದ- ವಿವಾದ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಸಿಂಹ: ಹಿಡಿದ ಕೆಲಸ ಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.
ಕನ್ಯಾ: ಕೌಟುಂಬಿಕ ಮತ್ತು ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ.
ತುಲಾ: ಮೇಲ ಕಾರಿ ಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ಜಗಳ ವಾಡುವ ಸಂದರ್ಭ ಎದುರಾಗಬಹುದು.
ಧನುಸ್ಸು: ಸುತ್ತಮುತ್ತಲಿನ ಜನರೊಂದಿಗೆ ಹೆಚ್ಚು ಮಾತನಾಡದಿರುವುದು ಬಹಳ ಒಳ್ಳೆಯದು.
ಮಕರ: ಆರ್ಥಿಕವಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಮುಂಜಾಗ್ರತೆ ವಹಿಸಿ.
ಕುಂಭ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವ ವರು ಅ ಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಮೀನ: ನೀವು ಮಾಡುವ ಉತ್ತಮ ಕೆಲಸಗಳಿಗೆ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ.
