ನಿತ್ಯ ನೀತಿ : ನಂಬಿಕೆ ಎಂಬುದು ಕನ್ನಡಿಯಂತೆ, ಜೋಪಾನವಾಗಿ ನೋಡಿಕೊಳ್ಳಬೇಕು.. ಒಂದು ವೇಳೆ ನಮ ಕೈಯಿಂದ ಅದು ಜಾರಿ ಬಿದ್ದರೆ ಪುನಃ ಸರಿ ಮಾಡಲು ಸಾಧ್ಯವಿಲ್ಲ..!!
ಪಂಚಾಂಗ : ಶುಕ್ರವಾರ, 24-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿಥಿ: ಅಷ್ಟಮಿ / ನಕ್ಷತ್ರ: ಪುಷ್ಯ / ಯೋಗ: ಶೂಲ / ಕರಣ: ವಿಷ್ಟಿ
ಸೂರ್ಯೋದಯ – 06.04
ಸೂರ್ಯಾಸ್ತ – 6.34
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಮಾಡಬೇಕೆಂದುಕೊಂಡಿರುವ ಒಳ್ಳೆಯ ಕೆಲಸ ವನ್ನು ಇಂದಿನಿಂದಲೇ ಆರಂಭಿಸುವುದು ಸೂಕ್ತ.
ವೃಷಭ: ನೆರೆಹೊರೆಯವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.
ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಕಟಕ: ನೌಕರರಿಗೆ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ. ಬಂಧುಗಳಿಂದ ಸಮಸ್ಯೆ ಬಗೆಹರಿಯಲಿದೆ.
ಕನ್ಯಾ: ಆಪ್ತರಿಂದಲೇ ಕೆಟ್ಟ ಮಾತು ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.
ತುಲಾ: ಆಸ್ತಿ ಸಂಬಂ ತ ತಗಾದೆಗಳಿಗೆ ನ್ಯಾಯವಾದಿಗಳ ಸಲಹೆ ಪಡೆಯಿರಿ.
ವೃಶ್ಚಿಕ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗುವುದು ಸರಿಯಲ್ಲ.
ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಧನಲಾಭವಿದೆ. ಸಮಾಧಾನದಿಂದ ವ್ಯವಹರಿಸಿ.
ಮಕರ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಮಟ್ಟಿನ ಲಾಭ ಸಿಗಲಿದೆ.
ಕುಂಭ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
ಮೀನ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.
