ನಿತ್ಯ ನೀತಿ : ಅಕ್ಷರ ಕಲಿಸಿ, ಬದುಕು ರೂಪಿಸಿ, ಉತ್ತಮ ಪ್ರಜೆಗಳನ್ನಾಗಿ ಮಾಡುವ ಗುರುಗಳು ಮಾರ್ಗದರ್ಶನವೇ ನಮ ಜೀವನದ ಅತಿ ದೊಡ್ಡ ಆಸ್ತಿ.
ಪಂಚಾಂಗ : ಮಂಗಳವಾರ, 25-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ಉ.ಷಾ. / ಯೋಗ: ಆಯುಷಾನ / ಕರಣ: ಕೌಲವ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.37
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ನೀವು ಮಾಡುವ ಪ್ರತಿಯೊಂದು ಕೆಲಸ ದಲ್ಲೂ ವ್ಯಕ್ತಿಯೊಬ್ಬರು ಅಡಚಣೆ ಮಾಡುವರು.
ವೃಷಭ: ಹಲ್ಲುಗಳಿಗೆ ಸಂಬಂ ಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ: ರಿಯಲ್ ಎಸ್ಟೇಟ್ಗೆ ಸಂಬಂ ಸಿದ ಕ್ಷೇತ್ರಗಳಲ್ಲಿ ಹೆಚ್ಚು ಲಾಭ ಗಳಿಸುವಿರಿ.
ಕಟಕ: ಸುತ್ತಮುತ್ತಲಿನ ಜನರೊಂದಿಗೆ ಜಗಳ ವಾಡದಿರುವುದು ಸೂಕ್ತ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಸಿಂಹ: ಹಿಂದೆ ಹೂಡಿಕೆ ಮಾಡಿದ ಹಣದಿಂದ ಉತ್ತಮ ಲಾಭ ಬರುವ ಸಾಧ್ಯತೆಗಳಿವೆ.
ಕನ್ಯಾ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.
ತುಲಾ: ಅತಿಯಾದ ಆತ್ಮವಿಶ್ವಾಸ ಬೇಡ. ನೀವು ಮಾಡುವ ಕೆಲಸಕ್ಕೆ ಹಿರಿಯರು ಅಥವಾ ಒಡಹುಟ್ಟಿದವರ ಸಹಾಯ ಬೇಕಾಗುತ್ತದೆ.
ವೃಶ್ಚಿಕ: ಸ್ನೇಹಿತರ ಸಹಾಯ ದಿಂದ ವೃತ್ತಿ ಕ್ಷೇತ್ರದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು.
ಧನುಸ್ಸು: ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಅನುಸರಿಸಿ.
ಮಕರ: ಯಾರೊಂದಿಗಾದರೂ ವೈರತ್ವ ಹೊಂದಿದ್ದರೆ ಅವರ ಬಗೆಗಿನ ಎಲ್ಲಾ ತಪ್ಪುಗ್ರಹಿಕೆಗಳು ದೂರವಾಗಲಿವೆ.
ಕುಂಭ: ಎಲ್ಲಾ ಕೆಲಸಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಮೀನ: ಯೋಗ, ಧ್ಯಾನ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.
