ನಿತ್ಯ ನೀತಿ : ಜೀವನದ ಸಾರ್ಥಕತೆ ಇರುವುದು ನಾವು ಏನು ಗಳಿಸಿದ್ದೇವೆ ಎನ್ನುವುದರಲ್ಲಿ ಅಲ್ಲ , ನಾವು ಏನಾಗಿದ್ದೇವೆ ಎನ್ನುವುದರಲ್ಲಿದೆ.
ಪಂಚಾಂಗ : ಗುರುವಾರ, 26-11-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ಮೃಗಶಿರಾ / ಯೋಗ: ಸಿದ್ಧ / ಕರಣ: ವಣಿಜ
ಸೂರ್ಯೋದಯ – ಬೆ.6.24
ಸೂರ್ಯಾಸ್ತ – 05.53
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30
ರಾಶಿಭವಿಷ್ಯ :
ಮೇಷ: ಹಿರಿಯ ಅಧಿಕಾರಿಗಳು, ಕುಟುಂಬದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ವೃಷಭ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ಮಿಥುನ: ಅಧಿಕಾರಿಗಳೊಂದಿಗಿನ ವೈಮನಸ್ಯ ದೂರ ಮಾಡಿಕೊಂಡರೆ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅನುಕೂಲವಾಗಿರುತ್ತದೆ.
ಕಟಕ: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.
ಸಿಂಹ: ಕೆಲಸ-ಕಾರ್ಯಗಳು ಸಂಪೂರ್ಣವಾಗಿ ಕಾರ್ಯಗತ ಗೊಳ್ಳಬಹುದು ಮತ್ತು ಅವು ನಿಮಗೆ ಅನುಕೂಲಕರ ಫಲಿತಾಂಶ ತಂದು ಕೊಡಲಿವೆ.
ಕನ್ಯಾ: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.
ತುಲಾ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.
ಧನುಸ್ಸು: ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.
ಮಕರ: ಕಾರ್ಯಸಾಧನೆಗಾಗಿ ಪ್ರಯಾಣ ಮಾಡಬೇಕಾಗಬಹುದು. ಅಧಿಕ ಖರ್ಚಾಗಲಿದೆ.
ಕುಂಭ: ಆಸ್ತಿ, ಅಪಾರ್ಟ್ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ಮೀನ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.
