Sunday, April 19, 2026
Homeಅಂತಾರಾಷ್ಟ್ರೀಯನಮ್ಮ ಮೂರು ಷರತ್ತು ಒಪ್ಪಿದರೆ ಯುದ್ಧ ನಿಲ್ಲಿಸುತ್ತೇವೆ ; ಇರಾನ್‌

ನಮ್ಮ ಮೂರು ಷರತ್ತು ಒಪ್ಪಿದರೆ ಯುದ್ಧ ನಿಲ್ಲಿಸುತ್ತೇವೆ ; ಇರಾನ್‌

Iran sets three conditions for talks with US as Middle East war rages on

ಟೆಹ್ರಾನ್‌, ಮಾ.12- ನಮ ಮೂರು ಷರತ್ತುಗಳನ್ನು ಒಪ್ಪಿಕೊಂಡರೆ ಮಧ್ಯಪ್ರಾಚ್ಯ ಯುದ್ಧಕ್ಕೆ ಅಂತ್ಯವಾಡುವುದಾಗಿ ಇರಾನ್‌ ಘೋಷಿಸಿದೆ.ಈ ಹೇಳಿಕೆಯೊಂದಿಗೆ ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ಮಧ್ಯೆ ನಡುವೆ ನಡೆಯುತ್ತಿರುವ ಯುದ್ಧ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸತೊಡಗಿವೆ.

ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌‍ ತಿಳಿಸಿದ್ದಾರೆ.

ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು. ಸಂಘರ್ಷದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು. ಭವಿಷ್ಯದಲ್ಲಿ ಆಕ್ರಮಣ ಮಾಡುವುದಿಲ್ಲ ಎಂದು ದೃಢವಾದ ಅಂತರರಾಷ್ಟ್ರೀಯ ಖಾತರಿಗಳನ್ನು ನೀಡಬೇಕು ಎಂದು ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಷ್ಯಾ ಮತ್ತು ಪಾಕಿಸ್ತಾನದ ನಾಯಕರ ಜೊತೆ ಮಾತನಾಡುವ ವೇಳೆ ನಾನು ಈ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ. ಈ ಪ್ರದೇಶದಲ್ಲಿ ಶಾಂತಿಗೆ ಇರಾನ್‌ನ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ. ಜಿಯೋನಿಸ್ಟ್‌ ಆಡಳಿತ ಮತ್ತು ಅಮೆರಿಕ ಹೊತ್ತಿಸಿದ ಈ ಯುದ್ಧವನ್ನು ಕೊನೆಗೊಳಿಸಲು ಇರುವ ಏಕೈಕ ಮಾರ್ಗ ಇದು ಎಂದು ಅವರು ಬರೆದಿದ್ದಾರೆ.

ಈ ಹಿಂದೆ ಡೊನಾಲ್‌್ಡ ಟ್ರಂಪ್‌ ಇರಾನ್‌ ಬೇಷರತ್ತಾಗಿ ಶರಣಾಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಮಸೌದ್‌ ಪೆಜೆಶ್ಕಿಯಾನ್‌ ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯಬೇಕಾದ ಕನಸು ಎಂದು ತಿರುಗೇಟು ನೀಡಿದ್ದರು.

RELATED ARTICLES

Latest News