Thursday, April 16, 2026
Homeಅಂತಾರಾಷ್ಟ್ರೀಯಇರಾನ್‌ ಟಾಪ್‌ ಕಮಾಂಡರ್‌ಗಳನ್ನ ಹತ್ಯೆ ಮಾಡಿದ್ದೇವೆ ; ಟ್ರಂಪ್‌

ಇರಾನ್‌ ಟಾಪ್‌ ಕಮಾಂಡರ್‌ಗಳನ್ನ ಹತ್ಯೆ ಮಾಡಿದ್ದೇವೆ ; ಟ್ರಂಪ್‌

Trump claims Tehran strike killed top Iranian commanders amid jet loss

ವಾಷಿಂಗ್ಟನ್‌, ಏ.5-ನಮ್ಮ ಸೇನೆ ನಡೆಸಿದ ಬೃಹತ್‌ ದಾಳಿಯಲ್ಲಿ ಇರಾನಿನ ಮಿಲಿಟರಿ ಪಡೆಯ ಉನ್ನತ ಕಮಾಂಡರ್‌ಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೊಂಡಿದ್ದಾರೆ.

ಈ ಕುರಿತು ತಮ್ಮ ಟ್ರೂತ್‌ ಸೋಷಿಯಲ್‌ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿರುವ ಟ್ರಂಪ್‌, ಇರಾನ್‌ನ ಹಲವು ಉನ್ನತ ಕಮಾಂಡರ್‌ಗಳನ್ನ ನಿರ್ಮೂಲನೆ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ತನ್ನ ಪಡೆಗಳನ್ನು ಅವಿವೇಕತನದಿಂದ ಮತ್ತು ಕಳಪೆಯಾಗಿ ಮುನ್ನಡೆಸಿದ ಇರಾನ್‌ನ ಮಿಲಿಟರಿ ಪಡೆಯ ಉನ್ನತ ನಾಯಕರನ್ನ ನಿರ್ಮೂಲನೆ ಮಾಡಿದ್ದೇವೆ ಎಂದು ಬರೆಯುತ್ತಾ ವಿಡಿಯೋವೊಂದನ್ನ ಪೋಸ್ಟ್‌ ಮಾಡಿದ್ದಾರೆ. ಆ ವಿಡಿಯೋದಲ್ಲಿ ವಿಮಾನಗಳ ಭಾರೀ ಶಬ್ಧಗಳು ಮತ್ತು ಗಮನಾರ್ಹ ಸ್ಫೋಟಗಳು ಕಂಡುಬಂದಿವೆ.

ಆದರೆ, ಹತ್ಯೆಯಾದ ಟಾಪ್‌ ಕಮಾಂಡರ್‌ಗಳ ಪಟ್ಟಿಯನ್ನು ಶ್ವೇತಭವನ ಇನ್ನೂ ಬಿಡುಗಡೆ ಮಾಡಿಲ್ಲ. ಇರಾನ್‌ ಕೂಡ ತನ್ನ ಕಮಾಂಡರ್‌ಗಳ ಸಾವನ್ನ ದೃಢಪಡಿಸಿಲ್ಲ.ಹಾರ್ಮುಜ್‌ ಜಲಸಂಧಿ ತೆರೆಯಲು 48 ಗಂಟೆ ಡೆಡ್‌ಲೈನ್‌ಮಧ್ಯಪ್ರಾಚ್ಯದ ಭೀಕರ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದೆ. ಇದರ ಬೆನ್ನಲ್ಲೇ ಇರಾನ್‌ ಹಾರ್ಮುಜ್‌ ಜಲಸಂಧಿ ತೆರೆಯಲು 48 ಗಂಟೆಗಳ ಗಡುವು ನೀಡಿದ್ದಾರೆ.

RELATED ARTICLES

Latest News