Friday, April 17, 2026
Homeಅಂತಾರಾಷ್ಟ್ರೀಯಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ವಿರುದ್ಧ ಟ್ರಂಪ್ ಟ್ರಂಪ್‌ ಕಿಡಿ

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ವಿರುದ್ಧ ಟ್ರಂಪ್ ಟ್ರಂಪ್‌ ಕಿಡಿ

Trump lashes out at Supreme Court judges

ನ್ಯೂಯಾರ್ಕ್‌/ವಾಷಿಂಗ್ಟನ್‌,ಫೆ.21- ತಾವು ವಿವಿಧ ದೇಶಗಳಿಗೆ ವಿಧಿಸಿದ್ದ ಭಾರಿ ಸುಂಕಗಳ ವಿರುದ್ಧ ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ ತಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಮತ್ತೆ ಶೇ.10 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.

ಟ್ರಂಪ್‌ ಅವರ ಎರಡನೇ ಅವಧಿಯ ಪ್ರಮುಖ ಆರ್ಥಿಕ ಕಾರ್ಯಸೂಚಿಗೆ ಸುಪ್ರೀಂಕೋರ್ಟಿನ ತೀರ್ಪಿನಿಂದಾಗಿ ತೀವ್ರ ಹಿನ್ನಡೆಯಾಗಿತ್ತು. ಜಗತ್ತಿನಾದ್ಯಂತದ ದೇಶಗಳ ಮೇಲೆ ಟ್ರಂಪ್‌ ವಿಧಿಸಿದ್ದ ಸುಂಕ ಕಾನೂನುಬಾಹಿರ ಮತ್ತು ಟ್ರಂಪ್‌ ತಮ ಅಧಿಕಾರ ಮೀರಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್‌ 6-3ರ ಬಹುಮತದ ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್‌್ಸ ಸ್ವತಃ ತೀರ್ಪು ಬರೆದಿದ್ದಾರೆ.

ತಮ ವಿರುದ್ಧ ತೀರ್ಪು ಹೊರಬಂದ ಕೆಲವೇ ಹೊತ್ತಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಟ್ರಂಪ್‌ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನು ಮೂರ್ಖರು, ನಾಯಿಕುನ್ನಿಗಳು ಎಂದು ವಾಚಾಮಗೋಚರವಾಗಿ ನಿಂದಿಸಿದರು. ಸುಂಕಗಳ ಬಗ್ಗೆ ಸುಪ್ರೀಂಕೋರ್ಟಿನ ತೀರ್ಪು ತೀವ್ರ ನಿರಾಶಾದಾಯಕವಾಗಿದೆ. ನ್ಯಾಯಾಲಯದ ಕೆಲವು ಸದಸ್ಯರು ನಮ ದೇಶಕ್ಕೆ ಒಳಿತಾದುದನ್ನು ಮಾಡುವ ಧೈರ್ಯವಿಲ್ಲದವರಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ತಾವು ಭಾರತ-ಪಾಕಿಸ್ತಾನ ನಡುವಣ ಸಮರ ಸ್ಥಗಿತಗೊಳಿಸಿರುವುದಾಗಿ ಪುನರುಚ್ಚರಿಸಿದ ಟ್ರಂಪ್‌ ತಾವು ಮಾಡಿದ ಮನವಿ ಮೇರೆಗೆ, ಒಡ್ಡಿದ ಸುಂಕ ಬೆದರಿಕೆಗೆ ಮಣಿದ ಭಾರತವು ರಷ್ಯಾದಿಂದ ತೈಲ ಖರೀದಿಯಿಂದ ಹಿಂದೆ ಸರಿಯಿತು ಎಂದು ನುಡಿದರು.

ನ್ಯಾಯಾಲಯದ ತೀರ್ಪು ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದಂತೆ ಭಾರತ-ಅಮೆರಿಕ ನಡುವಣ ಏರ್ಪಡಲಿರುವ ವ್ಯಾಪಾರ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನನ್ನ ಮತ್ತು ನರೇಂದ್ರ ಮೋದಿಯವರ ಬಾಂಧವ್ಯ ಮಹತ್ತರವಾಗಿದೆ ಎಂದರು.

RELATED ARTICLES

Latest News