Friday, May 3, 2024
Homeರಾಜ್ಯವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಕತಾರ್‌ನಲ್ಲಿ ಚೈತ್ರಾ ಹೆಬ್ಬಾರ್ ಪತ್ತೆ

ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಕತಾರ್‌ನಲ್ಲಿ ಚೈತ್ರಾ ಹೆಬ್ಬಾರ್ ಪತ್ತೆ

ಮಂಗಳೂರು,ಮಾ.3- ನಾಪತ್ತೆಯಾಗಿದ್ದ ಪಿಎಚ್‍ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಪ್ರವಾಸಿ ವೀಸಾದ ಮೂಲಕ ಕತಾರ್‍ಗೆ ತೆರಳಿರುವುದು ಗೊತ್ತಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನಿಸಿರುವ ಚೈತ್ರಾ ಹೆಬ್ಬಾರ್ ನನಗೆ ಪ್ರೀತಿಸೋ ಹಕ್ಕಿಲ್ಕವೇ, ಅಲ್ಲದೆ, ನನ್ನ ಇಚ್ಛೆಯಂತೆ ನಾನು ಬಂದಿದ್ದೇನೆ, ನನಗೆ ಬದುಕೋ ಹಕ್ಕಿಲ್ಲವೇ? ಎಂದು ಪ್ರಶ್ನಿಸಿದ್ದಾಳೆ.

ಕಳೆದ ಫೆಬ್ರವರಿ 17 ರಂದು ಪಿಜಿಯಿಂದ ಬೆಳಗ್ಗೆ 9 ಗಂಟೆಗೆ ಸ್ಕೂಟಿಯಲ್ಲಿ ತೆರಳಿದ ಆಕೆ ನಾಪತ್ತೆಯಾಗಿದ್ದಳು. ಆಕೆಯ ದೊಡ್ಡಪ್ಪ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ವೇಳೆ ಚೈತ್ರಾಳ ಸ್ಕೂಟಿ ಸುರತ್ಕಲ್ ಬಳಿ ಪತ್ತೆಯಾಗಿತ್ತು. ಸುರತ್ಕಲ್‍ನಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಿರುವುದು ಗೊತ್ತಾಗಿತ್ತು. ಪಿಜಿ ಬಳಿ ಬರುತ್ತಿದ್ದ ಪುತ್ತೂರಿನ ಶಾರೂಖ್ ಮೇಲೆ ದೂರು ದಾಖಲಾಗಿತ್ತು ಆತನ ಪತ್ತೆಗೆ ಮುಂದಾದ ಪೊಲೀಸರರಿಗೆ ಆತ ಹಿಮಾಚಲ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ ವಿಚಾರಣೆ ವೇಳೆ ಚೈತ್ರಾ- ಶಾರೂಖ್ ನಡುವಿನ ಪ್ರೀತಿ ವಿಚಾರ ಪೊಲೀಸರಿಗೆ ತಿಳಿದುಬಂದಿದೆ.

ಮಂಗಳೂರಿನಿಂದ ಬೆಂಗಳೂರು ನಂತರ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಚೈತ್ರಾ, ಅಲ್ಲಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕತಾರ್ ದೇಶಕ್ಕೆ ಪ್ರಯಾಣ ಮಾಡಿದ್ದಾಳೆ. ಆ ದೇಶಕ್ಕೆ ಹೋಗಲು ಶಾರೂಖ್ ಎಲ್ಲಾ ವ್ಯವಸ್ಥೆ ಮಾಡಿದ್ದನು ಎಂದು ತಿಳಿದುಬಂದಿದೆ. ಈ ಹಿಂದೆ ಕತಾರ್‍ನಲ್ಲೇ ಕೆಲಸ ಮಾಡಿಕೊಂಡಿದ್ದ ಶಾರೂಖ್, ಪ್ರಕರಣವೊಂದರಲ್ಲಿ ಜೈಲು ಸೇರಿ ಕಾರಣ ಆತ ಯುಐಇ ಪ್ರವೇಶ ನಿರ್ಬಂಧಿಸಲಾಗಿದ್ದ ಕಾರಣ ಆತ ಇಲ್ಲೇ ಉಳಿದಿದ್ದ.

ಸದ್ಯ ಚೈತ್ರಾ ಕತಾರ್‍ನ ಭಾರತೀಯ ರಾಯಭಾರಿ ಕಚೇರಿ ಮೂಲಕ ಇಮೇಲ್ ಸಂದೇಶ ರವಾನಿಸಿದ್ದು, ಮೂರು ತಿಂಗಳು ಕಳೆದು ಊರಿಗೆ ಬರೋದಾಗಿ ಹೇಳಿದ್ದಾಳೆ. ಹೀಗಾಗಿ ಶಾರೂಖ್‍ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇಬ್ಬರೂ ಪ್ರಬುದ್ದರಾಗಿರುವ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ. ಡ್ರಗ್ಸ್ ನ ಆಸೆ ಆಮೀಷ ತೋರಿಸಿ ಬ್ರೈನ್ ವಾಶ್ ಮಾಡಿದ್ದಾನೆ. ಇದು ಲವ್ ಜಿಹಾದ್ ದೊಡ್ಡ ಷಡ್ಯಂತ್ರ ಎಂದು ಬಜರಂಗದಳ ಆರೋಪಿಸಿದೆ.

RELATED ARTICLES

Latest News