Wednesday, April 29, 2026
Homeರಾಷ್ಟ್ರೀಯಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಟ್ರಾಕ್ಟರ್‌ಗೆ ಎಸ್‌‍ಯುವಿ ಅಪ್ಪಳಿಸಿ ಐವರ ದುರ್ಮರಣ

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಟ್ರಾಕ್ಟರ್‌ಗೆ ಎಸ್‌‍ಯುವಿ ಅಪ್ಪಳಿಸಿ ಐವರ ದುರ್ಮರಣ

5 killed, 7 injured as SUV crashes into tractor in MP's Narmadapuram

ನರ್ಮದಾಪುರಂ, ಏ. 27 (ಪಿಟಿಐ) ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಮದುವೆ ತಂಡದ ಭಾಗವಾಗಿದ್ದ ಎಸ್‌‍ಯುವಿ ವಾಹನವೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಹೋರ್‌ ಜಿಲ್ಲೆಯ ಬುಧ್ನಿ ತಹಸಿಲ್‌ನ ಮಾನಾ ಗ್ರಾಮದಿಂದ ಬಲಿಯಾದವರು ಹಿಂತಿರುಗುತ್ತಿದ್ದಾಗ ಬೆಳಗಿನ ಜಾವ 1.30 ರ ಸುಮಾರಿಗೆ ತವಾ ನದಿ ಸೇತುವೆಯ ಮೇಲೆ ಅಂಚಲ್‌ಖೇಡ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಪೋರ್ಟ್‌್ಸ ಯುಟಿಲಿಟಿ ವೆಹಿಕಲ್‌ (ಎಸ್‌‍ಯುವಿ) ಸೋಯಾಬೀನ್‌ ತುಂಬಿದ ಟ್ರ್ಯಾಕ್ಟರ್‌ ಟ್ರಾಲಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಮಖಾನ್‌ ನಗರ ಪೊಲೀಸ್‌‍ ಠಾಣೆಯ ಉಸ್ತುವಾರಿ ಅನುಪ್‌ ಕುಮಾರ್‌ ಉಯ್ಕೆ ಪಿಟಿಐಗೆ ತಿಳಿಸಿದ್ದಾರೆ.

ಮೃತರನ್ನು ಸಾಹಿಲ್‌ ಯಾದವ್‌ (19), ಹರಿ ಸಿಂಗ್‌ ಯಾದವ್‌ (57), ವಿನೀತ್‌ ಯಾದವ್‌ (22), ಶುಭಮ್‌ ಮೊರಪ್ಪ (18) ಮತ್ತು ಸಂತೋಷ್‌ ಪ್ರಜಾಪತಿ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡವರನ್ನು ಮಖಾನ್‌ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News