Sunday, April 19, 2026
Homeರಾಷ್ಟ್ರೀಯಕೊಲ್ಕತ್ತಾ : ಹಿರಿಯ ಪೊಲೀಸ್‌‍ ಅಧಿಕಾರಿ, ವ್ಯಾಪಾರಿಗಳ ಮನೆ ಮೇಲೆ ಇಡಿ ದಾಳಿ

ಕೊಲ್ಕತ್ತಾ : ಹಿರಿಯ ಪೊಲೀಸ್‌‍ ಅಧಿಕಾರಿ, ವ್ಯಾಪಾರಿಗಳ ಮನೆ ಮೇಲೆ ಇಡಿ ದಾಳಿ

ED conducts raids at residences of senior cop, businessman in Kolkata over ‘money laundering’

ಕೊಲ್ಕತ್ತಾ,ಏ. 19- ಅಕ್ರಮ ಹಣ ವರ್ಗಾವಣೆ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ ಕೋಲ್ಕತ್ತಾದ ವಿವಿಧ ಭಾಗಗಳಲ್ಲಿ ಹಿರಿಯ ಪೊಲೀಸ್‌‍ ಅಧಿಕಾರಿ ಮತ್ತು ವ್ಯಾಪಾರಿಯ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಕೇಂದ್ರ ಭದ್ರತಾ ಪಡೆಗಳೊಂದಿಗೆ ಅಧಿಕಾರಿಗಳು ಕೊಲ್ಕತ್ತಾ ಪೊಲೀಸ್‌‍ ಉಪ ಆಯುಕ್ತ ಶಾಂತನು ಸಿನ್ಹಾ ಬಿಸ್ವಾಸ್‌‍ ಅವರ ಬಾಲಿಗಂಜ್‌ನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ನಿರ್ಮಾಣ ಕಂಪನಿ ಮತ್ತು ಪೊಲೀಸ್‌‍ ಅಧಿಕಾರಿಗೆ ಇರುವ ಸಂಬಂಧದ ಬಗ್ಗೆ ನಮಗೆ ಕೆಲವು ಪ್ರಶ್ನೆಗಳಿವೆ. ಈ ಹೊತ್ತಿಗೆ ಅವರು ಮನೆಯಲ್ಲಿ ಇಲ್ಲ, ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಇಡಿ ಅಧಿಕಾರಿಯವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದರ ಜೊತೆಗೆ, ಅಧಿಕಾರಿಗಳು ಬೆಹಾಲಾ ಪ್ರದೇಶದಲ್ಲಿರುವ ವ್ಯಾಪಾರಿ ಜೋಯ್‌ ಕಾಮ್ದಾರ್‌ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

Latest News