Sunday, April 19, 2026
Homeರಾಜಕೀಯಮಹಿಳೆಯರ ಕನಸು ಭಗ್ನಗೊಳಿಸಿದ ಕಾಂಗ್ರೆಸ್‌‍ ಮಹಿಳಾ ವಿರೋಧಿ ಮನಃಸ್ಥಿತಿ : ಸಿ.ಟಿ ರವಿ

ಮಹಿಳೆಯರ ಕನಸು ಭಗ್ನಗೊಳಿಸಿದ ಕಾಂಗ್ರೆಸ್‌‍ ಮಹಿಳಾ ವಿರೋಧಿ ಮನಃಸ್ಥಿತಿ : ಸಿ.ಟಿ ರವಿ

Congress' anti-women mentality that shattered women's dreams: C.T Ravi

ಚಿಕ್ಕಮಗಳೂರು,ಏ.19- ಮಹಿಳೆಯರಿಗೆ ನ್ಯಾಯ ನೀಡಬೇಕು, ಮಹಿಳಾ ಮೀಸಲಾತಿಯ ಮೂಲಕ ಅವರಿಗೆ ರಾಜಕೀಯ ನಿರ್ಣಯ ಕೈಗೊಳ್ಳುವ ಸ್ಥಾನ ಕಲ್ಪಿಸಬೇಕು ಎನ್ನುವುದು ಕೇಂದ್ರ ಎನ್‌ಡಿಎ ಸರ್ಕಾರದ ಕನಸಾಗಿತ್ತು. ಆದರೆ, ಕಾಂಗ್ರೆಸ್‌‍, ಡಿಎಂಕೆ, ಆಪ್‌, ಟಿಎಂಸಿಯಂತಹ ವಿಪಕ್ಷಗಳು ಈ ಕನಸನ್ನು ಭಂಗಗೊಳಿಸುವ ಕೆಲಸ ಮಾಡಿವೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್‌ ಸದಸ್ಯಸಿ.ಟಿ ರವಿ ಟೀಕಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ ಆರ್‌ಅಂಬೇಡ್ಕರ್‌ ಮಹಿಳೆಯರಿಗೆ ರಾಜಕೀಯ ನ್ಯಾಯಕೊಡುವ ಕನಸು ಕಂಡಿದ್ದರು. ಹಿಂದೂ ಕೋಡ್‌ ಬಿಲ್‌ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಅವಕಾಶ ನೀಡುವ ಸಂದರ್ಭದಲ್ಲಿ, ಅಂದಿದ್ದ ಬಹುತೇಕ ಕಾಂಗ್ರೆಸ್‌‍ ಸದಸ್ಯರು ಹಿಂದೂಕೋಡ್‌ ಬಿಲ್‌ ವಿರುದ್ಧ ಮತ ಚಲಾಯಿಸಿ, ಅಂಬೇಡ್ಕರ್‌ಆಶಯವನ್ನು ವಿರೋಧಿಸಿದ್ದರು ಎಂದು ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು, ಈಗಲಾದರೂ ಮಹಿಳೆಯರಿಗೆ ನ್ಯಾಯ ಸಿಗಬಹುದು ಎಂದು ನಾವು ಭಾವಿಸಿದ್ದೆವು. ಅವರಿಗೆ ರಾಜಕೀಯ ನ್ಯಾಯ ನೀಡುವ ಪ್ರಧಾನಿ ಮೋದಿಯವರ ಪ್ರಯತ್ನಕ್ಕೆ ಕಾಂಗ್ರೆಸ್ ಮತ ಮತ್ತಿತರ ಪ್ರತಿಪಕ್ಷಗಳು ಅಡ್ಡಿಯಾಗಿದ್ದಾರೆ.

ಅವರು ಮಹಿಳಾ ವಿರೋಧಿಗಳು, ಸಂವಿಧಾನ ವಿರೋಧಿಗಳು, ಅಂಬೇಡ್ಕರ್‌ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಬಸವಣ್ಣನವರ ಸಮ ಸಮಾಜದ ಆಶಯಕ್ಕೆ ವಿಪಕ್ಷಗಳು ಈಗಲೂ ಅಡ್ಡಗಾಲು ಹಾಕಿವೆ ಎಂದರು. ಮೀಸಲಾತಿ ಇಲ್ಲದ ಕ್ಷೇತ್ರಗಳಲ್ಲಿ ಮಹಿಳೆಯರು ನಿಂತು ಗೆಲ್ಲುವುದು ಅಪರೂಪ. ಮಹಿಳಾ ಶಾಸಕರು ಮತ್ತು ಸಂಸದರ ಸಂಖ್ಯೆ ನಗಣ್ಯಎನ್ನುವಷ್ಟಿದೆ.

ಮೀಸಲಾತಿಯ ಮೂಲಕ ಅವರಿಗೆ ಶಕ್ತಿ ತುಂಬುವ ಪ್ರಯತ್ನವನ್ನೂ ವಿಪಕ್ಷಗಳು ಹಾಳು ಗೆಡವಿವೆ. ಮಹಿಳಾ ಸಂಸದರಾದರೂಆತ್ಮಸಾಕ್ಷಿಯಿಂದ ಮತ ಚಲಾಯಿಸಿ, ಮಸೂದೆಯನ್ನು ಬೆಂಬಲಿ ಸಬಹುದು ಎನ್ನುವ ವಿಶ್ವಾಸ ನಮಗಿತ್ತು. ಆದರೆ, ಅವರೂ ಮಸೂದೆಯ ವಿರುದ್ಧ ಮತ ಹಾಕಿರುವುದು ವಿಪರ್ಯಾಸ. ವಿಪಕ್ಷಗಳ ಈ ನಡೆಯನ್ನುದೇಶ ಕ್ಷಮಿಸುವು ದಿಲ್ಲ ಎಂದು ರವಿ ಎಚ್ಚರಿಸಿದ್ದಾರೆ.

RELATED ARTICLES

Latest News