Thursday, April 16, 2026
Homeರಾಷ್ಟ್ರೀಯಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ

ಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ

Gold and silver prices rise again after falling

ಬೆಂಗಳೂರು, ಫೆ.19-ಕಳೆದ ನಾಲ್ಕೈದು ದಿನಗಳಿಂದ ಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಚೇತರಿಕೆ ಕಂಡಿವೆ. ಐದು ದಿನಗಳಲ್ಲಿ ಒಂದು ಕೆ.ಜಿ.ಗೆ 40 ಸಾವಿರ ರೂ.ನಷ್ಟು ಇಳಿಕೆಯಾಗಿದ್ದ ಬೆಳ್ಳಿ ಇಂದು ಒಂದು ಕೆ.ಜಿ.ಗೆ 15 ಸಾವಿರ ರೂ.ನಷ್ಟು ಏರಿಕೆಯಾಗಿದೆ.

ಪ್ರತಿ ಗ್ರಾಂಗೆ 24 ಕ್ಯಾರೆಟ್‌ ಚಿನ್ನ 229 ರೂ., 22 ಕ್ಯಾರೆಟ್‌ ಚಿನ್ನ 210ರೂ. ಹಾಗೂ 18 ಕ್ಯಾರೆಟ್‌ ಚಿನ್ನ 172 ರೂ.ನಷ್ಟು ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ದರಗಳ ಕುಸಿತದಿಂದ ಸಮಾಧಾನಗೊಂಡಿದ್ದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟತೊಡಗಿದೆ. ನಿನ್ನೆ ಸ್ಥಿರವಾಗಿದ್ದ ಚಿನ್ನದ ದರವು ಇಂದು ಬೆಳಿಗ್ಗೆಯೇ ಏರಿಕೆಯಾಗಿದೆ.

ಫೆ. 15ರ ನಂತರ ಇಂದು ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ 24 ಕ್ಯಾರೆಟ್‌ ಚಿನ್ನ 15,649 ರೂ., 22 ಕ್ಯಾರೆಟ್‌ ಚಿನ್ನ 14, 345ರೂ. ಹಾಗೂ 18 ಕ್ಯಾರೆಟ್‌ ಚಿನ್ನ 11,732 ರೂ.ಗೆ ತಲುಪಿದೆೆ. ಅದೇ ರೀತಿ ಬೆಳ್ಳಿಯು ಫೆ.13ರಿಂದ ನಿನ್ನೆಯವರೆಗೆ ಇಳಿಮುಖವಾಗಿತ್ತು. ನಿನ್ನೆ ಪ್ರತಿ ಕೆ.ಜಿ.ಬೆಳ್ಳಿ ಐದು ಸಾವಿರ ರೂ. ನಷ್ಟು ಕುಸಿತವಾಗಿತ್ತು. ಆದರೆ. ಇಂದು 15 ಸಾವಿರ ರೂ.ನಷ್ಟು ಏರಿಕೆಯಾಗಿದ್ದು, ಪ್ರತಿ ಕೆ.ಜಿ. ಬೆಳ್ಳಿ ದರವು 2.55 ಲಕ್ಷ ರೂ.ನಿಂದ 2.70 ಲಕ್ಷ ರೂ.ಗೆ ಹೆಚ್ಚಳವಾಗಿದೆ.

ಚಿನಿವಾರ ಪೇಟೆಯಲ್ಲಿ ಗರಿಷ್ಠ ಧಾರಣೆ ದಾಖಲಿಸಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಅನಂತರ ಇಳಿಮುಖವಾಗಿ ಸಮಾಧಾನ ಪಡುವಂತಾಗಿತ್ತು. ಆದರೆ, ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಹೂಡಿಕೆದಾರರಿಗೆ ಅನುಕೂಲವಾದರೆ, ಮದುವೆ ಮೊದಲಾದ ಶುಭ ಕಾರ್ಯಗಳಿಗೆ ಆಭರಣ ಖರೀದಿಸುವವರಿಗೆ ದುಬಾರಿಯಾಗಿದೆ.

RELATED ARTICLES

Latest News