ನವದೆಹಲಿ,ಏ.6- ಗ್ರಾಹಕರ ಸಂರಕ್ಷಣೆಯ ಪ್ರಮುಖ ಕ್ರಮವಾಗಿ, ಭಾರತ ಸರ್ಕಾರವು ಚಿನ್ನಾಭರಣಗಳ ಖರೀದಿಗೆ ವಿಶಿಷ್ಟ ಗುರುತಿನ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಶೀಘ್ರವೇ ಪ್ರತಿಯೊಂದು ಚಿನ್ನದ ಆಭರಣವು ಅಧಿಕೃತತೆ ಮತ್ತು ಪರಿಶುದ್ಧತೆಯ ದೃಢೀಕರಣಕ್ಕಾಗಿ ವಿಶಿಷ್ಟ ಹಾಲ್‌ಮಾರ್ಕ್ ಯೂನಿಕ್ ಐಡೆಂಟಿಫಿಕೇಷನ್ (ಹೆಚ್‌ಯುಐಡಿ) ಕೋಡ್ ಅನ್ನು ಹೊಂದಿರಲಿದೆ.
ನೂತನ ನಿಯಮಗಳ ಪ್ರಕಾರ ಪ್ರತಿಯೊಂದು ಚಿನ್ನದ ಆಭರಣ ವಸ್ತುವು 6 ಅಂಕಿಗಳ ಹೆಚ್‌ಯುಐಡಿ ಕೋಡ್ ಅನ್ನು ಹೊಂದಿರಬೇಕಾಗುತ್ತದೆ. ಇದರರ್ಥ ಪ್ರತಿಯೊಂದು ವಸ್ತುವೂ ತನ್ನದೇ ಆದ ಶಾಶ್ವತ ಗುರುತು ಹೊಂದಿರಲಿದೆ ಮತ್ತು ಚಿನ್ನ ಪೂರೈಕೆ ಸರಪಳಿಯಲ್ಲಿ ಮಹತ್ತರ ಪಾರದರ್ಶಕತೆಯನ್ನು ತರುತ್ತದೆ.
ಕೆಲವು ಜ್ಯೂಎಲ್ಲರ್‌ಗಳು ಅನೇಕ ಆಭರಣಗಳಿಗೆ ಹಾಲ್‌ಮಾರ್ಕ್ ಸಂಖ್ಯೆ ಹಾಕುತ್ತ ದುರುಪಯೋಗ ಮಾಡಿಕೊಳ್ಳುತ್ತಿದ್ದು ಗೊಂದಲ ಮತ್ತು ವಂಚನೆಗೆ ಎಡೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಸುಧಾರಣಾ ಕ್ರಮ ಕೈಗೊಳ್ಳಲಾಗಿಎ. ಈ ಸಮಸ್ಯೆಗಳ ನಿವಾರಣೆಗೆ ಸಕ್ರಾವು ಹಾಲ್‌ಮಾರ್ಕಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸುತ್ತಿದೆ.
ಪ್ರಸ್ತುತ ಹಾಲ್‌ಮಾರ್ಕಿಂಗ್ ವ್ಯವಸ್ಥೆ ಸುಮಾರು 400 ಜಿಲ್ಲೆಗಳಲ್ಲಿ ಮಾತ್ರ ಕಡ್ಡಾಯವಾಗಿದೆ. ಇದನ್ನು ದೇಶದಾದ್ಯಂತ ವಿಸ್ತರಿಸಲು ಸರ್ಕಾರ ಚಿಂತಿಸುತ್ತಿದೆ. ಈ ಪ್ರಕ್ರಿಯೆಯನ್ನು ಚಿನ್ನದ ಪರಿಶುದ್ಧತೆ ಮತ್ತು ಗುಣಮಟ್ಟ ಖಚಿತಪಡಿಸುವ ದಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌್ಸ (ಬಿಐಎಸ್) ನಿಯಂತ್ರಿಸುತ್ತದೆ. ಗ್ರಾಹಕರು ಬಿಐಎಸ್ ಕೇರ್ ಮೊಬೈಲ್ ಆ್ಯಪ್ ಬಳಸಿ ಹೆಚ್‌ಯುಐಡಿ ಕೋಡ್ ಅನ್ನು ಪರಶೀಲಿಸಬಹುದಾಗಿದೆ. ಇದು ಅವರು ನಕಲಿ ಅಥವಾ ಕಳಪೆ ಗುಣಮಟ್ಟದ ಚಿನ್ನ ಖರೀದಿಸುವುದನ್ನು ತಪ್ಪಿಸುತ್ತದೆ.
ನೂತನ ಖರೀದಿ ನಿಯಮಗಳು ಇಂತಿವೆ :
- 2 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಆಭರಣಗಳ ಖರೀದಿಗೆ ಪ್ಯಾನ್‌ಕಾರ್ಡ್ ಕಡ್ಡಾಯ.
- 10 ಲಕ್ಷ ರೂ.ಗೂ ಅಧಿಕ ಮೊತ್ತದ ಖರೀದಿಗೆ ಪ್ಯಾನ್ +ಆಧಾರ್+ಆದಾಯ ದೃಢೀಕರಣ ಅಗತ್ಯ.
2 ಲಕ್ಷ ರೂ.ಗಳಿಗೂ ಮೇಲ್ಪಟ್ಟ ನಗದು ವ್ಯವಹಾರಕ್ಕೆ ಅವಕಾಶವಿಲ್ಲ.
