Wednesday, April 15, 2026
Homeರಾಷ್ಟ್ರೀಯಕಾಫಿ ನಾಡು ಚಿಕ್ಕಮಗಳೂರಲ್ಲಿ ಮಹಿಳೆ ನಾಪತ್ತೆ ಪ್ರಕರಣಗಳ ಹೆಚ್ಚಳ

ಕಾಫಿ ನಾಡು ಚಿಕ್ಕಮಗಳೂರಲ್ಲಿ ಮಹಿಳೆ ನಾಪತ್ತೆ ಪ್ರಕರಣಗಳ ಹೆಚ್ಚಳ

Increase in cases of missing women in Chikkamagaluru

ಚಿಕ್ಕಮಗಳೂರು,ಏ.15-ಕೇರಳ ಮೂಲದ ಅಪ್ರಾಪ್ತ ಬಾಲಕಿಯ ಸಾವು ಪ್ರಕರಣದಿಂದ ಬೆಚ್ಚಿಬಿದ್ದಿರುವ ಕಾಫಿನಾಡಿನಲ್ಲಿ ಇದೀಗ ಕಾಣೆ ಪ್ರಕರಣಗಳು ಪ್ರತಿನಿತ್ಯ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗುತ್ತಿರುವುದು ಮತ್ತೊಂದು ಆಘಾತಕಾರಿ ಸತ್ಯಾಂಶ ಬಹಿರಂಗವಾಗಿದೆ.

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಆತಂಕ ಮನೆಮಾಡಿರುವ ಬೆನ್ನಲ್ಲೇ, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ನಾಪತ್ತೆಯಾಗಿರುವ ಮಹಿಳೆಯರು ಮತ್ತು ಬಾಲಕಿಯರ ಅಂಕಿಅಂಶಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

ಜಿಲ್ಲೆಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಒಟ್ಟು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂಬ ಭಯಾನಕ ಮಾಹಿತಿ ಲಭ್ಯವಾಗಿದೆ.
ಈ ಪೈಕಿ 50 ಮಂದಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸ್‌‍ ಇಲಾಖೆ ಈವರೆಗೂ ವಿಲವಾಗಿರುವುದು ಜಿಲ್ಲೆಯ ಜನರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸುವಂತೆ ಮಾಡಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗಿಂತ ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣಗಳೇ ಇಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ.

ಮೂರು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಒಟ್ಟು 823 ಮಹಿಳೆಯರು ನಾಪತ್ತೆಯಾಗಿದ್ದು, ಅದರಲ್ಲಿ 794 ಮಂದಿಯನ್ನು ಪತ್ತೆಹಚ್ಚಲಾಗಿದೆ. ಆದರೆ ಇನ್ನೂ 29 ಮಹಿಳೆಯರ ಸುಳಿವು ಸಿಕ್ಕಿಲ್ಲ.

ಅದೇ ರೀತಿ 188 ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದು, ಈ ಪೈಕಿ 167 ಪ್ರಕರಣಗಳನ್ನು ಭೇದಿಸಲಾಗಿದೆ. ಉಳಿದ 21 ಬಾಲಕಿಯರು ಇಂದಿಗೂ ಪತ್ತೆಯಾಗಿಲ್ಲ.ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕಾಫಿ ತೋಟಗಳಿಗೆ ಕೆಲಸಕ್ಕೆ ಬರುವ ಬಾಲಕಿಯರು ಪೋಷಕರೊಂದಿಗೆ ಇಲ್ಲಿನ ಕಾಫಿ ಲೈನ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದು ಹಲವು ಪ್ರಕರಣಗಳಲ್ಲಿಯೂ ಕೂಡ ಬಾಲಕಿಯರು ಕಾಣೆಯಾಗಿರುವುದು ಕಂಡುಬಂದಿದೆ .

RELATED ARTICLES

Latest News