Homeರಾಷ್ಟ್ರೀಯಮದುವೆ ಪ್ರಸ್ತಾವ ತಿರಸ್ಕರಿಸಿದ್ದಕ್ಕೆ ಮಹಿಳೆ ಹಾಗೂ ಕುಟುಂಬದವರ ಮೇಲೆ ಆಸಿಡ್‌ ದಾಳಿ

ಮದುವೆ ಪ್ರಸ್ತಾವ ತಿರಸ್ಕರಿಸಿದ್ದಕ್ಕೆ ಮಹಿಳೆ ಹಾಗೂ ಕುಟುಂಬದವರ ಮೇಲೆ ಆಸಿಡ್‌ ದಾಳಿ

Man throws acid on woman, family after marriage proposal rejected in Uttar Pradesh's Bareilly

ಬರೇಲಿ,ಮೇ.17: ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಆಸಿಡ್‌‍ ಎರಚಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶೇರ್ಗಢ ಪ್ರದೇಶದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮಹಿಳೆ, ಅವರ ಪತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.ಪೊಲೀಸರ ಮಾಹಿತಿ ಪ್ರಕಾರ, ಕುಟುಂಬದವರು ಮನೆಯ ಮುಂಗಟ್ಟಿನಲ್ಲಿ ಮಲಗಿದ್ದ ವೇಳೆ ಆರೋಪಿ ಮನೆಯ ಮೇಲ್ಛಾವಣಿಯ ಮೂಲಕ ಒಳನುಗ್ಗಿ ಸೊಳ್ಳೆ ಪರದೆಯ ಮೂಲಕ ಅವರ ಮೇಲೆ ಆಸಿಡ್‌ ಎರಚಿದ್ದಾನೆ ಎನ್ನಲಾಗಿದೆ.

ಬೆಳಗ್ಗೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದ್ದು,ಮ್ರಾಥಮಿಕ ತನಿಖೆಯಲ್ಲಿ ಆರೋಪಿ ಉಮೇಶ್‌ ಕಶ್ಯಪ್‌ ಎಂಬಾತ ಈಗಾಗಲೇ ವಿವಾಹಿತನಾಗಿದ್ದರೂ, ಸಂಬಂಧಿತ ಮಹಿಳೆಯನ್ನು ಮದುವೆಯಾಗಲು ಬಯಸುತ್ತಿದ್ದ ನೆಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆ ಮದುವೆಗೆ ನಿರಾಕರಿಸಿದ ಬಳಿಕ ಆರೋಪಿ ಆಕೆಯ ಮೇಲೆ ಆಸಿಡ್‌ ಪದಾರ್ಥ ಎರಚಲು ಯತ್ನಿಸಿದ್ದ ಎನ್ನಲಾಗಿದೆ .

ಗಾಯಾಳುಗಳನ್ನು ಶೇರ್ಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಪ್ರಕರಣ ಸಂಬಂಧ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News