Homeರಾಷ್ಟ್ರೀಯಮೋದಿಜಿ, ಇಷ್ಟೊಂದು ನಿಂದನೆ ಹೇಗೆ ಸಹಿಸಿಕೊಳ್ಳುತ್ತೀರಿ..? : ಕಣ್ಣೀರಿಟ್ಟ ಯುವತಿ

ಮೋದಿಜಿ, ಇಷ್ಟೊಂದು ನಿಂದನೆ ಹೇಗೆ ಸಹಿಸಿಕೊಳ್ಳುತ್ತೀರಿ..? : ಕಣ್ಣೀರಿಟ್ಟ ಯುವತಿ

Modiji, how can you tolerate so much abuse?: A tearful young woman

ನವದೆಹಲಿ,ಜು.27- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಯುವತಿಯೊಬ್ಬರು ಮಾಡಿರುವ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಿಜೆಪಿ ಪ್ರತಿಭಟನೆಯ ವೇಳೆ ನಡೆದ ಕೆಲವು ಘಟನೆಗಳು ಹಾಗೂ ವ್ಯಕ್ತಿಗಳ ಹೇಳಿಕೆಗಳಿಂದ ತಾನು ನೋವು ಅನುಭವಿಸಿದ್ದೇನೆ ಎಂದು ಹೇಳಿರುವ ಯುವತಿ, ಈ ಸಂದೇಶವನ್ನು ಯಾವುದೇ ರಾಜಕೀಯ ಪಕ್ಷದ ಪರವಾಗಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ತಾನು ಇದುವರೆಗೆ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಎಂದು ಹೇಳಿಕೊಂಡಿರುವ ಯುವತಿ, ಮೋದಿ ಅವರನ್ನು ರಾಜಕೀಯ ನಾಯಕನಾಗಿ ಮಾತ್ರವಲ್ಲದೆ ಕುಟುಂಬದ ಹಿರಿಯರಂತೆ ಕಾಣುತ್ತೇನೆ ಎಂದು ಭಾವನಾತಕವಾಗಿ ವಿವರಿಸಿದ್ದಾಳೆ. ನಮಗೆ ತಂದೆ ಅಥವಾ ತಾತನಂತೆ ಕಾಣುವ ವ್ಯಕ್ತಿಯ ಬಗ್ಗೆ ಕೆಟ್ಟ ಮಾತುಗಳನ್ನು ಕೇಳುವುದು ನೋವುಂಟುಮಾಡುತ್ತದೆ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಾಳೆ.

ಕಳೆದ ಎರಡು ದಿನಗಳಿಂದ ಹಲವು ವಿಡಿಯೋಗಳು, ಫೋಟೋಗಳು ಮತ್ತು ಪೋಸ್ಟರ್ಗಳನ್ನು ನೋಡಿ ಮನಸ್ಸಿಗೆ ಬೇಸರವಾಗಿತ್ತು ಎಂದು ಹೇಳಿದ ಯುವತಿ, ಸಾರ್ವಜನಿಕ ಟೀಕೆಗಳ ನಡುವೆಯೂ ಮೋದಿ ಅವರು ಶಾಂತವಾಗಿ ಇರುವುದರಿಂದ ತಾನು ಹಲವು ವಿಷಯಗಳನ್ನು ಕಲಿತಿದ್ದೇನೆ ಎಂದು ತಿಳಿಸಿದ್ದಾಳೆ.

ದೇಶದ ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸುವಲ್ಲಿ ಮೋದಿ ಅವರ ಪಾತ್ರವಿದೆ ಎಂದು ಯುವತಿ ಅಭಿಪ್ರಾಯಪಟ್ಟಿದ್ದಾಳೆ. ಪ್ರತಿಭಟನೆ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದ್ದರೂ, ಯಾವುದೇ ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಭಾಷೆ ಬಳಕೆ ಮಾಡುವುದು ಸರಿಯಲ್ಲ ಎಂದು ಆಕೆ ಹೇಳಿದ್ದಾಳೆ.

ದೇಶದ ಜನರ ಸೇವೆಯನ್ನು ತಮ ಕುಟುಂಬದ ಜವಾಬ್ದಾರಿಯಂತೆ ನೋಡಿಕೊಂಡಿದ್ದಾರೆ ಎಂದು ಮೋದಿ ಅವರನ್ನು ಹೊಗಳಿದ ಯುವತಿ, ತಮ ಭಾವನೆಗಳನ್ನು ವ್ಯಕ್ತಪಡಿಸುವ ವೇಳೆ ಕಣ್ಣೀರು ಹಾಕಿದ್ದಾಳೆ.

ಕೊನೆಯಲ್ಲಿ ನಾವು ನಿಮನ್ನು ತುಂಬಾ ಪ್ರೀತಿಸುತ್ತೇವೆ ಎಂದು ಹೇಳಿ ಜೈ ಶ್ರೀ ರಾಮ್, ಜೈ ಹಿಂದ್ ಮತ್ತು ಜೈ ಭಾರತ್ ಎಂಬ ಘೋಷಣೆಗಳೊಂದಿಗೆ ವಿಡಿಯೋವನ್ನು ಮುಕ್ತಾಯಗೊಳಿಸಿದ್ದಾಳೆ.
ಈ ವಿಡಿಯೋದಲ್ಲಿನ ಹೇಳಿಕೆಗಳು ಯುವತಿಯ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಇದರ ರಾಜಕೀಯ ಹಿನ್ನೆಲೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

RELATED ARTICLES

Latest News