Homeರಾಜ್ಯKPSC ಅಕ್ರಮ : ಸಿಬಿಐ ತನಿಖೆಗೆ ಒತ್ತಾಯ

KPSC ಅಕ್ರಮ : ಸಿಬಿಐ ತನಿಖೆಗೆ ಒತ್ತಾಯ

ಬೆಂಗಳೂರು,ಜು.27- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಇತ್ತೀಚೆಗೆ ನಡೆದಿರುವ ನೇಮಕಾತಿಯಲ್ಲಿ ಭಾರೀ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶುವೈದ್ಯಾಧಿಕಾರಿ ನೇಮಕಾತಿ ಸೇರಿದಂತೆ ಕೆಪಿಎಸ್ಸಿಯಲ್ಲಿ ನಡೆದಿರುವ ಪ್ರತಿಯೊಂದೂ ನೇಮಕಾತಿಯಲ್ಲಿ ದೊಡ್ಡ ಹಗರಣವೇ ನಡೆದಿದೆ. ಇದರ ಸತ್ಯಾಸತ್ಯತೆ ಹೊರಬೇಕೆಂದರೆ ಸಿಬಿಐ ತನಿಖೆಯೇ ಸೂಕ್ತ ಎಂದು ಒತ್ತಾಯಿಸಿದರು.

ಕೆಪಿಎಸ್ಸಿ ಹಗರಣ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಕಳೆದ ಬಾರಿ ನಾನೇ ವಿಧಾನಸಭೆಯಲ್ಲಿ ದಾಖಲೆಗಳ ಸಮೇತ ಇದರ ಬ್ರಹಾಂಡ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೆ. ಪಶು ಇಲಾಖೆಯಲ್ಲಿ 400 ಹುದ್ದೆಗಳಿಗೆ 80 ಲಕ್ಷ ಹಣವನ್ನು ಕೇಳಿದ್ದಾರೆ. ಒಂದೊಂದು ಪೋಸ್ಟ್ಗೆ ಒಂದೊಂದು ಕೋಟಿ ರೂ. ನಿಗದಿ ಪಡಿಸಿದ್ದಾರೆ ಎಂದು ಆರೋಪಿಸಿದರು.

ಐಎಎಸ್ ಅಧಿಕಾರಿ ಇದ್ದಾರೆ. ಅಲ್ಲಿ ಕೆಲಸ ಮಾಡಿಕೊಡುತ್ತಾರೆ ಎಂದು ಆಕಾಂಕ್ಷಿಗಳಿಗೆ ಮಧ್ಯವರ್ತಿಗಳು ಹೇಳಿದ್ದಾರೆ. ಇದು ಆಡಿಯೋದಲ್ಲಿ ಸಂಪೂರ್ಣವಾಗಿ ಬಹಿರಂಗವಾಗಿದೆ. ಹಾಗಾದರೆ ಐಎಎಸ್ ಅಧಿಕಾರಿ ಯಾರು? ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಇಬ್ಬರಿಗೆ ಕೆಲಸ ಕೊಡಿಸಿದ್ದೇನೆ ಎಂದು ಮಧ್ಯವರ್ತಿ ಹೇಳಿದ್ದಾರೆ. ಹೀಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ದೆಹಲಿಯಲ್ಲಿ ರಾಹುಲ್ಗಾಂಧಿ ನೀಟ್ ವಿರುದ್ಧ ಹೋರಾಟ ಮಾಡುತ್ತಾರೆ. ಅವರದೇ ಪಕ್ಷ ಆಡಳಿತವಿರುವ ಕರ್ನಾಟಕದಲ್ಲಿ ಇಷ್ಟೆಲ್ಲಾ ಕರ್ಮಕಾಂಡಗಳು ನಡೆದಿದ್ದರೂ ತುಟಿಯೇ ಬಿಚ್ಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

80 ಲಕ್ಷ ರೂ. ಕೊಟ್ಟರೆ ಹುದ್ದೆ ಕೊಡಿಸುವುದಾಗಿ ಆಡಿಯೋದಲ್ಲಿ ಬಹಿರಂಗಗೊಂಡಿದೆ. ನೀಟ್ ಬಗ್ಗೆ ಮಾತನಾಡುವ ರಾಹುಲ್ಗಾಂಧಿ ಕೆಪಿಎಸ್ಸಿ ಬಗ್ಗೆಯೂ ಮಾತನಾಡಬೇಕಲ್ಲವೇ?, ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರು ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಸಚಿವರು ಹೊಣೆ ಎನ್ನುತ್ತಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನೆಪತ್ರಿಕೆ ಸೋರಿಕೆಗೆ ಜಿಲ್ಲಾಧಿಕಾರಿಗಳು ಹೊಣೆ ಎನ್ನುತ್ತಾರೆ. ಈ ದ್ವಂದ್ವ ನೀತಿ ಏಕೆ? ಎಂದು ಪ್ರಶ್ನಿಸಿದರು.

ತಾವು ಹಾಗೂ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇಬ್ಬರೂ ಶೀಘ್ರದಲ್ಲೇ ಕೆಪಿಎಸ್ಸಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇವೆ.ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ: ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಈ ಹಗರಣವನ್ನು ಗಂಭೀರವಾಗಿ ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಸಮರ ಸಾರಿ ಚಳಿ ಬಿಡಿಸಲಾಗುವುದು ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ಅಧಿವೇಶನದಲ್ಲೇ ಕೆಪಿಎಸ್ಸಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನನ್ನ ಮಾತು ಸತ್ಯ ಎಂದಿದ್ದರು. ಆದರೂ, ಪಶುವೈದ್ಯರ 400 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ.ಹುದ್ದೆ ಕೊಡಿಸುವುದಾಗಿ ಹೇಳಿ ಏಜೆಂಟ್ ಒಬ್ಬ 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಆಡಿಯೋ ತನ್ನ ಬಳಿಯಿದೆ ಎಂದು ಅಶೋಕ್ ತಿಳಿಸಿದರು.

ಐಎಎಸ್ ಅಧಿಕಾರಿಯೊಬ್ಬರ ಮೂಲಕ ಕೆಲಸ ಮಾಡಿಸಿಕೊಡುವುದಾಗಿ ಹಾಗೂ ತನ್ನ ಮಕ್ಕಳಿಗೂ ಇದೇ ರೀತಿ ಕೆಲಸ ಕೊಡಿಸಿರುವುದಾಗಿ ಆ ವ್ಯಕ್ತಿ ಆಡಿಯೋದಲ್ಲಿ ಮಾತನಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದರು.

ವಸೂಲಿ ಮಾಡುವ ಈ ಕೋಟ್ಯಂತರ ಹಣ ಯಾವ ಯಾವ ಸಚಿವರಿಗೆ ತಲುಪುತ್ತಿದೆ? ಹಂಗಾಮಿ ಅಧ್ಯಕ್ಷರಿಂದ ಆಂತರಿಕ ತನಿಖೆ ನಡೆಸಿದರೆ ಸತ್ಯ ಹೊರಬರಲು ಸಾಧ್ಯವಿಲ್ಲ. ಇದರ ಹಿಂದೆ ಸರ್ಕಾರವೇ ಭಾಗಿಯಾಗಿರುವ ಅನುಮಾನವಿದೆ ಎಂದು ಅವರು ಕಿಡಿಕಾರಿದರು.

ರಾಷ್ಟ್ರಮಟ್ಟದಲ್ಲಿ ನೀಟ್ (ಘೆಉಉ) ಪರೀಕ್ಷೆ ಬಗ್ಗೆ ರಾಹುಲ್ ಗಾಂಧಿ ನಿರಂತರವಾಗಿ ಹೋರಾಟ ಮಾಡುತ್ತಾರೆ. ಆದರೆ ಈಗ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕೆಪಿಎಸ್ಸಿ ಹಗರಣದ ಬಗ್ಗೆ ಅವರು ಏಕೆ ಮೌನವಾಗಿದ್ದಾರೆ? ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಈ ವಿಷಯದಲ್ಲಿ ಬಾಯಿ ಬಿಡಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಯಾವುದೇ ಪರೀಕ್ಷೆಯಲ್ಲಿ ಅಕ್ರಮ ನಡೆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆದರೆ ಮಂತ್ರಿಗಳೇ ಹೊಣೆ ಎನ್ನುವ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಬಂದಾಗ ಮಾತ್ರ ಡಿಸಿಗಳ ಮೇಲೆ ಜವಾಬ್ದಾರಿ ಹಾಕಿ ನುಣುಚಿಕೊಳ್ಳುತ್ತಿದ್ದಾರೆ. ಇದು ಅವರ ೞಡಬಲ್ ಸ್ಟಾಂಡರ್ಡ್ೞ ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

RELATED ARTICLES

Latest News