Wednesday, April 15, 2026
Homeರಾಷ್ಟ್ರೀಯಗುಜರಾತ್‌ : ಯಾತ್ರಿಕರ ಮೇಲೆ ಟ್ರಕ್‌ ಹರಿದು 7 ಭಕ್ತರ ಸಾವು

ಗುಜರಾತ್‌ : ಯಾತ್ರಿಕರ ಮೇಲೆ ಟ್ರಕ್‌ ಹರಿದು 7 ಭಕ್ತರ ಸಾವು

Seven killed as speeding truck mows down pilgrims in Gujarat's Surendranagar

ಸುರೇಂದ್ರನಗರ, ಏ. 13 (ಪಿಟಿಐ)- ವೇಗವಾಗಿ ಬಂದ ಟ್ರಕ್‌ ಯಾತ್ರಿಕರ ಮೇಲೆ ಹರಿದ ಪರಿಣಾಮ ಏಳು ಭಕ್ತರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಗುಜರಾತ್‌ನಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ರಸ್ತೆಬದಿಯಲ್ಲಿ ವೇಗವಾಗಿ ಬಂದ ಟ್ರಕ್‌ ಹರಿದು ಏಳು ಜನರು ಸಾವನ್ನಪ್ಪಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಖ್ತಾರ್‌-ವಿರಮ್‌ಗಮ್‌‍ ಹೆದ್ದಾರಿಯಲ್ಲಿ ಬೆಳಗಿನ ಜಾವ 1.30 ರ ಸುಮಾರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾತ್ರಿಕರ ಗುಂಪು ರಾಜ್‌ಕೋಟ್‌ನಿಂದ ಬಹುಚರಾಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಲಖ್ತಾರ್‌ ಪೊಲೀಸ್‌‍ ಇನ್‌್ಸಪೆಕ್ಟರ್‌ ಯೋಗೇಶ್‌ ಪಟೇಲ್‌ ತಿಳಿಸಿದ್ದಾರೆ.

ಜಿಲ್ಲೆಯ ಲಖ್ತಾರ್‌ ತಾಲ್ಲೂಕಿನ ಭಾಸ್ಕರ್‌ಪಾರ ಗ್ರಾಮದ ಹೊರವಲಯದಲ್ಲಿ ಅಜಾಗರೂಕತೆ ಯಿಂದ ನಡೆಸಲಾದ ಟ್ರಕ್‌ ಭಕ್ತರ ಮೇಲೆ ಹರಿದಿದೆ.ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಆರು ಯಾತ್ರಿಕರು ಮತ್ತು ಡಂಪರ್‌ನ ಚಾಲಕ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಮೃತರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ಗಾಯಗೊಂಡವರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.ಅಪಘಾತ ಸಂಭವಿಸಿದಾಗ ಯಾತ್ರಿಕರು ನಡೆದುಕೊಂಡು ಹೋಗುತ್ತಿ ದ್ದರು.

ಬಹುಚರಾಜಿಯಲ್ಲಿರುವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಕಾಲ್ನಡಿಗೆಯಲ್ಲಿ ಹೊರಟಿದ್ದಾಗ ಹಿಂದಿನಿಂದ ಪೂರ್ಣ ವೇಗದಲ್ಲಿ ಬಂದ ಟ್ರಕ್‌ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News