Homeರಾಷ್ಟ್ರೀಯಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ 3 ಗ್ಯಾರಂಟಿ ಯೋಜನೆಗಳಿಗೆ ಸಿಎಂ ವಿಜಯ್ ಸಹಿ

ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ 3 ಗ್ಯಾರಂಟಿ ಯೋಜನೆಗಳಿಗೆ ಸಿಎಂ ವಿಜಯ್ ಸಹಿ

Tamil Nadu CM Vijay signs 3 key welfare schemes on Day 1

ಚೆನ್ನೈ,ಮೇ10- ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಟ ವಿಜಯ್‌, ಮನೆಗಳಿಗೆ 200 ಯೂನಿಟ್‌ ಉಚಿತ ವಿದ್ಯುತ್‌, ಲಯನೆಸ್‌‍ ಟಾಸ್ಕ್‌ಫೋರ್ಸ್‌ ಮತ್ತು ಮಾದಕದ್ರವ್ಯ ವಿರೋಧಿ ದಳದ ರಚನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಸಹಿ ಹಾಕಿದರು.

ಪ್ರಮಾಣವಚನ ಸ್ವೀಕಾರದ ಬಳಿಕ, ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ.. ಎಂದು ಹೇಳುವ ಮೂಲಕ ರಾಜ್ಯದ ಜನತೆಯನ್ನುದ್ದೇಶಿಸಿ ಭಾವನಾತಕವಾಗಿ ಭಾಷಣ ಆರಂಭಿಸಿದರು. ಈ ಮಾತು ಕೇಳುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಅಭಿಮಾನಿಗಳು ಭಾರೀ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಬಳಿಕ ಮಾತು ಮುಂದುವರೆಸಿದ ವಿಜಯ್‌ ಅವರು, ಇದು ಕೇವಲ ವಿಜಯ್‌ ಅವರ ಸರ್ಕಾರವಲ್ಲ, ಇದು ತಮಿಳುನಾಡಿನ ಪ್ರತಿಯೊಬ್ಬ ನಾಗರಿಕನ ಸರ್ಕಾರ. ನಾವೆಲ್ಲರೂ ಸೇರಿ ಹೊಸ ತಮಿಳುನಾಡನ್ನು ನಿರ್ಮಿಸೋಣ ಎಂದು ಹೇಳಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ವಿಜಯ್‌ ಮಾಡಿದ ಅತ್ಯಂತ ಮಹತ್ವದ ಘೋಷಣೆಯು ಅವರ ರಾಜಕೀಯ ಪ್ರತಿಸ್ಪರ್ಧಿ ದ್ರಾವಿಡ ಮುನ್ನೇತ್ರ ಕಳಗಂ ( ಡಿಎಂಕೆ ) ವಿರುದ್ಧವಾಗಿತ್ತು. 2021-2026 ಅವಧಿಗೆ ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದ ಅವರು, ತಮ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಪ್ರತಿಯೊಂದು ಭರವಸೆಯನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡಿದರು. ನೀವು ನನಗೆ ಅವಕಾಶ ಮತ್ತು ಬೆಂಬಲ ನೀಡಿದರೆ ನನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ.

ಪಾರದರ್ಶಕವಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುಲಾಗುವುದು. ಶಿಕ್ಷಣ, ಆಹಾರ ಪೂರೈಕೆ, ಆರೋಗ್ಯ ರಕ್ಷಣೆ ಮತ್ತು ಮಹಿಳಾ ಸುರಕ್ಷತೆ ತಮ ಪ್ರಮುಖ ಗಮನ ಕ್ಷೇತ್ರಗಳಾಗಿ ಉಳಿಯುತ್ತವೆ. ಸರ್ಕಾರದ ಸ್ಥಿರತೆಯ ಬಗ್ಗೆ ಇರುವ ಕಳವಳಗಳನ್ನು ನಿವಾರಿಸಲು ಪ್ರಯತ್ನಿಸಿದರು. ಬಹು ಅಧಿಕಾರ ಕೇಂದ್ರಗಳು ಇರುವುದಿಲ್ಲ. ತಮಿಳುನಾಡಿನ ಅಭಿವೃದ್ಧಿ ಪ್ರಯಾಣದಲ್ಲಿ ತಮ ವಿರೋಧಿಗಳನ್ನು ಸಹ ಕರೆದೊಯ್ಯುವುದಾಗಿ ಭರವಸೆ ನೀಡಿದರು.

ನನ್ನನ್ನು ಟೀಕಿಸಿದವರು ಮತ್ತು ಅವಮಾನಿಸಿದವರು ಕೂಡ ನನ್ನ ಜನರು. ನೀನು ನನ್ನ ಜೀವ. ನನ್ನ ಚಿಕ್ಕ ನನ್ಬಾ ಮತ್ತು ನನ್ಬಿಗಳಿಗೆ , ವಿಜಯ್‌ ಮಾಮಾ ನಿಮಗಾಗಿ ಎಲ್ಲವನ್ನೂ ಒಳ್ಳೆಯದನ್ನು ಮಾಡುತ್ತಾರೆ. ವಿಜಯ್‌ ಅಭಿಮಾನಿಗಳನ್ನು ಸಾಮಾನ್ಯವಾಗಿ ನನ್ಬಾ (ಪುರುಷ ಸ್ನೇಹಿತ) ಮತ್ತು ನನ್ಬಿ (ಮಹಿಳಾ ಸ್ನೇಹಿತ) ಎಂದು ಕರೆಯಲಾಗುತ್ತದೆ. ನೀವು (ಕಾರ್ಯಕರ್ತರು) ಇಲ್ಲದೆ ನಾನು ಏನೂ ಆಗುತ್ತಿರಲಿಲ್ಲ. ನನ್ನ ಪ್ರೀತಿಯ ವರ್ಚುವಲ್‌ ಯೋಧರು ಮತ್ತು ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದರು.

ನಾನು ತಪ್ಪು ಮಾಡುವುದಿಲ್ಲ, ನನ್ನ ಸಚಿವ ಸಂಪುಟದ ಸದಸ್ಯರೂ ತಪ್ಪು ಮಾಡಲು ಅವಕಾಶ ನೀಡುವುದಿಲ್ಲ. ಅಧಿಕಾರಕ್ಕೆ ಬಂದಿದ್ದೇವೆ ಎಂಬ ಕಾರಣಕ್ಕೆ ಯಾರಾದರೂ ದುರುಪಯೋಗದ ಚಿಂತನೆ ಹೊಂದಿದ್ದರೆ, ಅದನ್ನು ಈಗಲೇ ಮನಸ್ಸಿನಿಂದ ತೆಗೆದುಹಾಕಿ ಎಂದು ಎಚ್ಚರಿಕೆ ನೀಡಿದರು.

RELATED ARTICLES

Latest News