Friday, November 7, 2025
Home Blog Page 1887

ವಿಮಾನದಲ್ಲಿ ಪಾಸ್ತಾ ಮಷೀನ್‍ನಲ್ಲಿ ಚಿನ್ನ ಸಾಗಾಟ : ಪ್ರಯಾಣಿಕನ ಬಂಧನ

ಬೆಂಗಳೂರು,ಅ.15- ದುಬೈ ವಿಮಾನದ ಮೂಲಕ ಪಾಸ್ತಾ ಮಾಡುವ ಮಷೀನ್‍ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ನಗರಕ್ಕೆ ಬಂದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ 35.37 ಲಕ್ಷ ಮËಲ್ಯದ 598 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪಾಸ್ತಾ ಮಾಡುವ ಮಷೀನ್ ಪತ್ತೆಯಾಗಿದೆ. ಆ ಮಷೀನ್‍ನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿದಾಗ ಮಷೀನ್ ಮೂಲಕ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ತಿಳಿದು ಮಷೀನ್‍ಗೆ ಅಳವಡಿಸಿದ್ದ ಬೋಲ್ಟ್ ಮತ್ತು ಸ್ಕ್ರೂ ಕೂಲಂಕುಷವಾಗಿ ಪರಿಶೀಲಿಸಿದಾಗ ಚಿನ್ನದಲ್ಲಿ ಅವುಗಳನ್ನು ಮಾಡಿಸಿ ಸಿಲ್ವರ್ ಕೋಟ್ ಮಾಡಿರುವುದು ಕಂಡುಬಂದಿದೆ.

ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಕೂಡಲೆ ಆ ಮಷೀನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ತೆರೆದು ಬರೊಬ್ಬರಿ 35,37,768 ರು. ಮೌಲ್ಯದ 598 ಗ್ರಾಂ ಚಿನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಪ್ರಯಾಣಿಕನನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಹಾರ ತಜ್ಞ ಕೆ.ಸಿ.ರಘು ಅನಾರೋಗ್ಯದಿಂದ ನಿಧನ

ಬೆಂಗಳೂರು- ವಿಜ್ಞಾನ ಲೋಕ, ರಘು ಬುಕ್ಸ್ , ಜ್ಞಾನ, ತತ್ವಶಾಸ್ತ್ರ ಮತ್ತು ಧರ್ಮ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದ ನಾಡಿನ ಹೆಸರಾಂತ ಆಹಾರ ತಜ್ಞ, ಅಂಕಣಕಾರ ಕೆ.ಸಿ. ರಘು ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ಕೆ.ಸಿ. ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವಲ್ರ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆಗ್ರ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು.

ಶಾಹೀನ್ ಶಾ ಆಫ್ರಿದಿಗೆ ರವಿಶಾಸ್ತ್ರಿ ಹಿಗ್ಗಾಮುಗ್ಗಾ ಕ್ಲಾಸ್

ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು.ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆ ಇದಾಗಿತ್ತು. ಕೆ.ಸಿ.ರಘು, ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕೆ.ಸಿ. ರಘು, ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ಆಹಾರ ರಾಜಕೀಯ ಮತ್ತು ತುತ್ತು ತತ್ವ ಪುಸ್ತಕಗಳನ್ನು ಪ್ರಕಟಿಸಿದ್ದರು.

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ಮೈಸೂರು, ಅ.15- ದಸರಾ ಮಹೋತ್ಸವದ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ ರಾಜ ಮನೆತನದಿಂದ ಖಾಸಗಿ ದರ್ಬಾರ್ ನಡೆಯಿತು. ಮೈಸೂರು ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಬಹಳ ವಿಶೇಷವಾಗಿತ್ತು. ಇಂದು ಬೆಳಿಗ್ಗೆಯಿಂದಲೇ ಅರಮನೆ ಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.

ಆನಂತರ ಅರಮನೆಯ ದರ್ಬಾರ್ ಹಾಲಿನಲ್ಲಿ ಇರಿಸಲಾಗಿರುವ ಸಿಂಹಾಸನಕ್ಕೆ ಯದುವೀರ್ ಅವರು ಮೊದಲು ಪೂಜೆ ಸಲ್ಲಿಸಿದರು. ಆನಂತರ ಸಿಂಹಾಸನ ರೂಢರಾಗಿ ಖಾಸಗಿ ದರ್ಬಾರ್ ನಡೆಸಿದರು. ಇದಕ್ಕೂ ಮುನ್ನ ಗಣಪತಿ ಪೂಜೆ, ಕಳಸ ಪೂಜೆ ನೆರವೇರಿಸಲಾಯಿತು.

ಅ.21ರಂದು ಗಗನಯಾನ ಪರೀಕ್ಷಾ ಹಾರಾಟ

ಮಧುರೈ, ಅ.15- ಮನುಷ್ಯರನ್ನು ಬಾಹ್ಯಾಕಾಶಯಾನಕ್ಕೆ ರವಾನೆ ಮಾಡುವ ಗಗನಯಾನ ಯೋಜನೆಯ ಪೂರ್ವಭಾವಿ ವಾಹನಗಳ ಪರೀಕ್ಷಾ ಪ್ರಯೋಗ ಅಕ್ಟೋಬರ್ 21ರಂದು ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ಗಗನ ಯಾನ್ ಯೋಜನೆಯು ಮಾನವ ಸಿಬ್ಬಂದಿಯನ್ನು 400 ಕಿಮೀ ಕಕ್ಷೆಗೆ ಉಡಾವಣೆ ಮಾಡುವ ಮತ್ತು ವಾಪಾಸ್ ಮರಳಿದ ವೇಳೆ ಸಮುದ್ರದ ನೀರಿನಲ್ಲಿ ಇಳಿಸಿ ಸುರಕ್ಷಿತವಾಗಿ ಭೂಮಿಗೆ ತರುವ ಯೋಜನೆಯಾಗಿದೆ. ಇದಕ್ಕಾಗಿ ಮಾನವ ಬಾಹ್ಯಾಕಾಶ ಹಾರಾಟದ ಸಾಮಥ್ರ್ಯದ ಪ್ರದರ್ಶನ ಪರೀಕ್ಷೆಗೆ ಮೂರು ವಾಹನಗಳ ಪರೀಕ್ಷಾ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮುಂದಿನ ವರ್ಷದ ಕೊನೆಯಲ್ಲಿ ಮಾನವ ಬಾಹ್ಯಾಕಾಶ ಯಾನದ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಇರಿಸಲು ನಿಗದಿಪಡಿಸಲಾದ ಸಿಬ್ಬಂದಿ ಮಾಡ್ಯೂಲ್ ಅನ್ನು ಪರೀಕ್ಷಿಸಲು ಪರೀಕ್ಷಾ ವಾಹನ ಅಭಿವೃದ್ಧಿ ಹಾರಾಟವನ್ನು (ಟಿವಿ-ಡಿ1) ನಡೆಸಲಾಗುವುದು.

ಗಗನ್ಯಾನ್ ಮಿಷನ್‍ನ ಮೊದಲ ಪರೀಕ್ಷಾ ವಾಹನ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಾಗುವುದು. ಅದರ ನಂತರ ನಾವು ಇನ್ನೂ ಮೂರು ಪರೀಕ್ಷಾ ಕಾರ್ಯಾಚರಣೆಗಳು ನಡೆಯಲಿವೆ. ಡಿ 2, ಡಿ 3, ಡಿ 4. ನಾವು ಪರೀಕ್ಷಾ ಹಾರಾಟದ ಅನುಕ್ರಮದಲ್ಲಿ ಸಂಪೂರ್ಣ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಸೋಮನಾಥ್ ಹೇಳಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಟಿವಿ-ಡಿ1 ಸಿಬ್ಬಂದಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆಯಾದ ಬಳಿಕ ಮರಳಿ ಬಂಗಾಳ ಕೊಲ್ಲಿಯಲ್ಲಿ ಭೂಮಿಗೆ ಬರುತ್ತದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇಸ್ರೋದ ಬೆಂಗಳೂರಿನ ಪ್ರಧಾನ ಕಛೇರಿಯಲ್ಲಿ ಬಾಹ್ಯಾಕಾಶ ಸಂಸ್ಥೆಯು ಅಕ್ಟೋಬರ್ 21 ರಂದು ಶ್ರೀಹರಿಕೋಟಾದಲ್ಲಿ ಗಗನಯಾನ ಮೊದಲ ಮಿಷನ್‍ಗೆ ಮುಂಚಿತವಾಗಿ ಹಲವಾರು ಪರೀಕ್ಷಾ ಹಾರಾಟಗಳನ್ನು ನಡೆಸಲಿದೆ ಎಂದು ಹೇಳಿದರು.

ಇ¸ಶ್ರೋ ಕೈಗೊಂಡಿರುವ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಕಾರ್ಯಕ್ರಮದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸೋಮನಾಥ್, 2024 ರ ಜನವರಿ ಮಧ್ಯದಲ್ಲಿ ಬಾಹ್ಯಾಕಾಶ ನೌಕೆಯು ಲಗ್ರೇಂಜ್ ಪಾಯಿಂಟ್ (ಎಲ್ 1) ತಲುಪುತ್ತದೆ ಎಂದು ಹೇಳಿದ್ದಾರೆ. ನಾವು ಅದನ್ನು ಎಲ್ 1 ಪಾಯಿಂಟ್‍ನಲ್ಲಿ ಸೇರಿಸುತ್ತೇವೆ ಮತ್ತು ಆ ಹಂತದಿಂದ ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಎನ್‍ಸಿಪಿ ಮಾಜಿ ಸಂಸದನ 315 ಕೋಟಿ ಮೌಲ್ಯದ ಅಸ್ತಿ ಜಪ್ತಿ

ನವದೆಹಲಿ, ಅ.15- ಮಹಾರಾಷ್ಟ್ರದ ಎನ್‍ಸಿಪಿಯ ಮಾಜಿ ಸಂಸದರ ವಿರುದ್ಧ ನಡೆಸಿದ ಕಾರ್ಯಚರಣೆಯಲ್ಲಿ 315 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭೂಮಿ, ಕೈಗಾರಿಕೆಗಳು, ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಮಾಜಿ ರಾಜ್ಯಸಭಾ ಸದಸ್ಯ ಈಶ್ವರಲಾಲ್ ಶಂಕರಲಾಲ್ ಜೈನ್ ಲಾಲ್ವಾನಿ (77) ಅವರು, ರಾಜಮಲ್ ಲಖಿಚಂದ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್, ಆರ್.ಎಲ್.ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಮನರಾಜ್ ಜ್ಯುವೆಲ್ಲರ್ಸ್‍ನ ಪ್ರವರ್ತಕರಾಗಿದ್ದಾರೆ.

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಮಹರಾಷ್ಟ್ರದ ಜಲಗಾಂವ್, ಮುಂಬೈ, ಥಾಣೆ, ಸಿಲ್ಲೋಡ್, ಔರಂಗಾಬಾದ್‍ನಲ್ಲಿ ಮತ್ತು ಗುಜರಾತ್‍ನ ಕಚ್‍ನಲ್ಲಿ ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ 70 ಸ್ಥಿರ ಆಸ್ತಿಗಳನ್ನುಮನಿಲ್ಯಾಂಡರಿಂಗ್ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ರಾಜ್ಮಲ್ ಲಖಿಚಂದ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್‍ನ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕೆಲವು ವಿಂಡ್‍ಮಿಲ್‍ಗಳು, ಬೆಳ್ಳಿ ಮತ್ತು ವಜ್ರದ ಆಭರಣಗಳು, ಬೆಳ್ಳಿ ಮತ್ತು ಭಾರತೀಯ ಕರೆನ್ಸಿ ಸೇರಿ ಒಟ್ಟು 315.60 ಕೋಟಿ ರೂ. ಜಪ್ತಿ ಮಾಡಲಾಗಿದೆ.

ಪ್ರವರ್ತಕರಾದ ಈಶ್ವರಲಾಲ್ ಶಂಕರಲಾಲ್ ಜೈನ್ ಲಾಲ್ವಾನಿ, ಮನೀಶ್ ಈಶ್ವರಲಾಲ್ ಜೈನ್ ಲಾಲ್ವಾನಿ ಮತ್ತು ಇತರರು ಸಂಪಾದಿಸಿದ ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಕಂಪನಿಗಳು ಮತ್ತು ಅದರ ನಿರ್ದೇಶಕರು, ಪ್ರವರ್ತಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 352.49 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇಡಿ ಆಗಸ್ಟ್‍ನಲ್ಲಿ ದಾಳಿ ನಡೆಸಲಾಗಿತ್ತು.

ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಅಹಮದಾಬಾದ್, ಅ.15- ಸಂಪ್ರದಾಯಿಕ ವೈರಿ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಸೋಲು ಕಂಡಿರುವ ಪಾಕಿಸ್ತಾನದ ಆಟಗಾರರನ್ನು ಮಾಜಿ ನಾಯಕ ರಮೀಜ್ ರಾಜಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 1992ರಿಂದ ಇಂಡೋ- ಪಾಕ್ ನಡುವೆ ವಿಶ್ವಕಪ್ ಕದನ ಆರಂಭವಾಗಿದ್ದು, ಅಹಮದಾಬಾದ್‍ನ ಪಂದ್ಯಕ್ಕೂ ಮುನ್ನ ಪಾಕ್ 7-0 ಹಿನ್ನೆಡೆ ಅನುಭವಿಸಿತ್ತು. ಆದರೆ 2023ನೇ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದ್ದ ಬಾಬರ್ ಆಝಮ್ ಪಡೆಯು ಈ ಬಾರಿ ಟೀಮ್ ಇಂಡಿಯಾವನ್ನು ಮಣಿಸಿ ಅಂತರವನ್ನು 7-1ಕ್ಕೆ ತಗ್ಗಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು.

ಆದರೆ ಪಂದ್ಯದ ಯಾವುದೇ ಹಂತದಲ್ಲಿ ಹೋರಾಟದ ಪ್ರವೃತ್ತಿ ತೋರದೆ ಸೋಲಿನ ಹಂತವನ್ನು 8-0ಕ್ಕೆ ಹೆಚ್ಚಿಸಿಕೊಂಡ ಬೆನ್ನಲ್ಲೇ ಪಾಕ್‍ನ ಮಾಜಿ ಆಟಗಾರರಾದ ಶೋಯೆಬ್ ಅಖ್ತರ್, ವಾಸಿಮ್ ಅಕ್ರಮ್ ಸೇರಿದಂತೆ ಕೆಲವು ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಛೇಡಿಸಿದ್ದರು. ಈಗ ಈ ಸಾಲಿಗೆ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಕೂಡ ಸೇರ್ಪಡೆಗೊಂಡಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

`ನೀವು ಟೀಮ್ ಇಂಡಿಯಾ ವಿರುದ್ಧ ಆಡುವಾಗ ನಿಸ್ಸಂಶಯವಾಗಿ, ಇದು ಶೇಕಡಾ 99ರಷ್ಟು ಭಾರತದ ಅಭಿಮಾನಿಗಳು ಮತ್ತು ಜನಸ್ತೋಮದಿಂದ ಕೂಡಿರುವಂತಹ ವಾತಾವರಣವಾಗಿರುತ್ತದೆ. ನೀವು ಅದರಲ್ಲಿ ಮುಳುಗಿದ್ದೀರಿ. ನನಗೆ ಇದೆಲ್ಲವೂ ಅರ್ಥವಾಗುತ್ತದೆ. ಆದರೆ ಬಾಬರ್ ಆಝಮ್ ಈ ತಂಡವನ್ನು 4-5 ವರ್ಷಗಳಿಂದ ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಹೀಗಾಗಿ ಅವರು ಸಂದರ್ಭಕ್ಕೆ ತಕ್ಕಂತೆ ಆಡಬೇಕಾಗಿದೆ. ನೀವು ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಹೋರಾಟ ನೀಡಿ, ಪಾಕಿಸ್ತಾನಕ್ಕೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ’ ಎಂದು ರಮೀಜ್ ರಾಜಾ ಕಿಡಿಕಾರಿದರು.

ಶಾಹೀನ್ ಶಾ ಆಫ್ರಿದಿಗೆ ರವಿಶಾಸ್ತ್ರಿ ಹಿಗ್ಗಾಮುಗ್ಗಾ ಕ್ಲಾಸ್

ಅಹಮದಾಬಾದ್, ಅ.15- 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯ ಟೀಮ್ ಇಂಡಿಯಾದ ಪಂದ್ಯದಲ್ಲಿ 6 ಓವರ್‍ಗಳಲ್ಲಿ 36 ರನ್ ಕೊಟ್ಟು 2 ವಿಕೆಟ್ ಪಡೆದಿದ್ದ ಪಾಕಿಸ್ತಾನದ ವೇಗಿ ಶಾಹಿನ್ ಶಾ ಆಫ್ರಿದಿ ಬೌಲಿಂಗ್ ಅನ್ನು ಮಾಜಿ ನಾಯಕ ರವಿಶಾಸ್ತ್ರಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿ0ದ್ದಾರೆ.

ನಸೀಮ್ ಶಾ ಅನುಪಸ್ಥಿತಿಯಲ್ಲಿ ಪಾಕಿಸ್ತಾನದ ತಂಡದ ವೇಗ ಬೌಲಿಂಗ್ ಹೊಣೆಯನ್ನು ಸಂಪೂರ್ಣವಾಗಿ ವಹಿಸಿಕೊಂಡಿರುವ ಶಾಹಿನ್ ಶಾ ಆಫ್ರಿದಿ ಅವರು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ 2ನೇ ಓವರ್‍ನಲ್ಲೇ ಶುಭಮನ್ ಗಿಲ್ ಅವರ ವಿಕೆಟ್ ಪಡೆದು ಗಮನ ಸೆಳೆದರು.

ಆದರೆ 192 ರನ್‍ಗಳ ಗುರಿಯನ್ನು ಹಿಂಬಾಲಿಸಿದ್ದ ಟೀಮ್ ಇಂಡಿಯಾ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ರೋಹಿತ್ ಶರ್ಮಾ ಶತಕದ ಅಂಚಿನತ್ತ ಸಾಗುತ್ತಿದ್ದಾಗಲೇ ಅಫ್ರಿದಿ ಹಿಟ್‍ಮ್ಯಾನ್‍ನ ವಿಕೆಟ್ ಪಡೆದು ಗಮನ ಸೆಳೆದರು..

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಆದರೆ ಗಾಯದ ಸಮಸ್ಯೆಗೆ ಪದೇ ಪದೇ ಒಳಗಾಗುತ್ತಿರುವ ಪಾಕ್ ವೇಗಿ ಶಾಹಿನ್ ಶಾ ಅಫ್ರಿದಿ ಅವರು ಎಂದೆಂದಿಗೂ ವಿಶ್ವಕಪ್ ವಿಜೇತ ಬೌಲರ್ ವಾಸಿಮ್ ಅಕ್ರಮ್ ಅವರ ಸಾಧನೆಯ ಸಮೀಪಕ್ಕೂ ತಲುಪಲಾರರು ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

`ಶಾಹಿನ್ ಶಾ ಅಫ್ರಿದಿ ಅವರು ಉತ್ತಮ ಬೌಲರ್ ಆಗಿದ್ದು, ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯಬಲ್ಲರು. ಆದರೆ ನೀವು ಅದನ್ನು ಒಪ್ಪಿಕೊಳ್ಳಲೇಬೇಕು, ನಸೀಮ್ ಶಾ ಆಡುತ್ತಿಲ್ಲ ಮತ್ತು ಪಾಕಿಸ್ತಾನದ ಸ್ಪಿನ್ ಬೌಲಿಂಗ್‍ನ ಗುಣಮಟ್ಟ ಹೀಗಿದ್ದರೆ, ಶಾಹೀನ್ ವಾಸೀಮ್ ಅಕ್ರಮ್ ಅಲ್ಲ. ಅವರು ಉತ್ತಮ ಬೌಲರ್, ಆದರೆ ನಾವು ಅವರನ್ನು ಹೆಚ್ಚು ಪ್ರಚಾರ ಮಾಡುವ ಅಗತ್ಯವಿಲ್ಲ. ಒಬ್ಬ ಆಟಗಾರನು ಕೇವಲ ಉತ್ತಮ ಆಟಗಾರನಾಗಿದ್ದರೆ, ಅವನು ಉತ್ತಮ ಆಟಗಾರ ಎಂದು ಹೇಳುವುದಕ್ಕೆ ನಾವು ನಮ್ಮ ಹೊಗಳಿಕೆಯನ್ನು ನಿರ್ಬಂಧಿಸಬೇಕು. ಅವರು ಶ್ರೇಷ್ಠ ಆಟಗಾರನಲ್ಲ, ನಾವು ಅದನ್ನು ಒಪ್ಪಿಕೊಳ್ಳಬೇಕು’ ಎಂದು 1983 ರ ವಿಶ್ವಕಪ್ ವಿಜೇತ ಆಟಗಾರ ಹೇಳಿದ್ದಾರೆ.

ರೋಹಿತ್ ಶರ್ಮಾ ಒನ್ ಮ್ಯಾನ್ ಆರ್ಮಿ : ಅಖ್ತರ್ ಬಣ್ಣನೆ

ಅಹಮದಾಬಾದ್, ಅ.15- ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಒನ್ ಮ್ಯಾನ್ ಆರ್ಮಿಯಂತೆ ಪಾಕಿಸ್ತಾನ ಬೌಲರ್‌ಗಳ ಬಲವನ್ನು ಧ್ವಂಸಗೊಳಿಸಿದ್ದಾರೆ ಎಂದು ರಾವಲ್ಪಿಂಡಿ ಎಕ್ಸ್‍ಪ್ರೆಸ್ ಶೋಯೆಬ್ ಅಖ್ತರ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಟೀಮ್ ಇಂಡಿಯಾದ 7 ವಿಕೆಟ್‍ಗಳ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹಿಟ್ ಮ್ಯಾನ್, 63 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ನೆರವಿನಿಂದ 86 ರನ್ ಬಾರಿಸಿದ್ದರು. ಒಡಿಐ ಸ್ವರೂಪದಲ್ಲಿ 300 ಸಿಕ್ಸರ್ ಪೂರೈಸಿದ ರೋಹಿತ್ ಶರ್ಮಾ, 2023ನೇ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ 217 ರನ್ ಗಳಿಸುವ ಮೂಲಕ ಗರಿಷ್ಠ 3ನೇ ಸ್ಕೋರರ್ ಆಗಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಬೌಲರ್‌ಗಳ ಪ್ರದರ್ಶನವು ತುಂಬಾ ಬೇಸರ ತರಿಸಿದೆ. ಭಾರತ ತಂಡವು ಪಾಕಿಸ್ತಾನ ವಿರುದ್ಧ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತ್ತು. ರೋಹಿತ್ ಶರ್ಮಾ ಅವರು ಒನ್ ಮ್ಯಾನ್ ಆರ್ಮಿ ರೀತಿ ಕಂಗೊಳಿಸಿದರು. ಕಳೆದ ಕೆಲವು ವರ್ಷಗಳಿಂದ ರೋಹಿತ್ ಶರ್ಮಾ ಅವರು ತಮ್ಮ ಬ್ಯಾಟಿಂಗ್ ಸಾಮಥ್ರ್ಯವನ್ನು ಎಲ್ಲಿ ಅಡಗಿಸಿಟ್ಟಿದ್ದರು. ಆತ ನಿಜಕ್ಕೂ ವಿಶ್ವಶ್ರೇಷ್ಠ ಆಟಗಾರ, ಕ್ರೀಡಾಂಗಣದ ಎಲ್ಲ ಮೂಲೆಗೂ ಚೆಂಡನ್ನು ಅಟ್ಟುವ ಸಾಮಥ್ರ್ಯ ಹೊಂದಿದ್ದಾರೆ. ಅವನೊಬ್ಬ ಸಂಪೂರ್ಣ ಆಟಗಾರನಾಗಿದ್ದು, ಒಂದು ಸದೃಢ ತಂಡವಾಗಿದೆ' ಎಂದು ಅಖ್ತರ್ ಗುಣಗಾಣ ಮಾಡಿದ್ದಾರೆ.

ರೋಹಿತ್ ಶರ್ಮಾ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‍ನಿಂದ ಪಾಕಿಸ್ತಾನದ ಬೌಲಿಂಗ್ ಪಡೆಯನ್ನು ಧ್ವಂಸಗೊಳಿಸಿದ್ದಾರೆ. ಹಿಟ್‍ಮ್ಯಾನ್ ಮತ್ತೆ ಸ್ಪೋಟಕ ಲಯಕ್ಕೆ ಮರಳಿರುವುದನ್ನು ನೋಡಲು ತುಂಬಾ ಸಂತಸವಾಗುತ್ತಿದೆ. ಅವನು ಬೌಲರ್‍ಗಳನ್ನು ದಂಡಿಸುವ ಶಕ್ತಿಯನ್ನು ಹೊಂದಿದ್ದಾನೆ. ಆಟವನ್ನು ತಮ್ಮದೇ ಆದ ಶೈಲಿಯಲ್ಲಿ ಮುಗಿಸುತ್ತಾರೆ. ಅದರಲ್ಲೂ ಪಂದ್ಯದ ಕೊನೆಯ ಓವರ್‍ಗಳಲ್ಲಿ ಬೌಲರ್‍ಗಳನ್ನು ಅವಮಾನಿಸುವ ರೀತಿಯಲ್ಲಿ ಬ್ಯಾಟ್ ಬೀಸುತ್ತಾರೆ’ ಎಂದು ಅಖ್ತರ್ ತಿಳಿಸಿದ್ದಾರೆ.

ಏಷ್ಯನ್ ಹಾಕಿ ಪಂದ್ಯಾವಳಿಗೆ ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರ

ಹೊಸದಿಲ್ಲಿ, ಅ.15- ಬೆಂಗಳೂರಿನ ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‍ಎಐ)ದಲ್ಲಿ ನಾಳೆಯಿಂದ ನಡೆಯಲಿರುವ ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕಾಗಿ ಹಾಕಿ ಇಂಡಿಯಾ 34 ಸದಸ್ಯರ ಪ್ರಮುಖ ಸಂಭಾವ್ಯ ಪಟ್ಟಿಯನ್ನು ಇಂದು ಪ್ರಕಟಿಸಿದೆ.

ರಾಷ್ಟ್ರೀಯ ಶಿಬಿರ ಅಕ್ಟೋಬರ್ 22 ರಂದು ಮುಕ್ತಾಯಗೊಳ್ಳಲಿದ್ದು, ಪ್ರತಿಷ್ಠಿತ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಅಕ್ಟೋಬರ್ 27 ರಿಂದ ರಾಂಚಿಯಲ್ಲಿ ಆರಂಭವಾಗಲಿದೆ. ಮೊದಲ ಬಾರಿಗೆ ಭಾರತದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ಇದರಲ್ಲಿ ಹಾಲಿ ಚಾಂಪಿಯನ್ ಚೀನಾ, ಜಪಾನ್, ಕೊರಿಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಭಾಗವಹಿಸಲಿವೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಭಾರತ ಥಾಯ್ಲೆಂಡ್‍ನೊಂದಿಗೆ ಪಂದ್ಯದ ಮೂಲಕ ತನ್ನ ಕ್ರೀಡಾ ಅಭಿಯಾನವನ್ನು ಆರಂಭಿಸಲಿದೆ. ಭಾರತದ ಮುಖ್ಯ ಕೋಚ್ ಜನ್ನೆಕೆ ಸ್ಕೋಪ್‍ಮನ್ ಮಾತನಾಡಿ, ಒಂದು ವಾರದ ಶಿಬಿರವು ಮೌಲ್ಯಮಾಪನ ಮತ್ತು ಸುಧಾರಣೆಯ ಅಗತ್ಯವಿರುವ ವಿಷಯಗಳ ಮೇಲೆ ಗಮನ ಹರಿಸಲಿದೆ. ಈಗಿನಿಂದ ಒಲಿಂಪಿಕ್ ಅರ್ಹತಾ ಪಂದ್ಯಗಳವರೆಗೆ ನಾವು ಆಡುವ ಪ್ರತಿಯೊಂದು ಪಂದ್ಯಾವಳಿಯು ನಮಗೆ ಪ್ರಮುಖವಾಗಿರುತ್ತದೆ, ತಂಡವಾಗಿ ಸುಧಾರಿಸಲು ನಮಗೆ ಉತ್ತಮ ಅವಕಾಶ ನೀಡಿದೆ. ನಾವು ರಾಂಚಿಗೆ ತೆರಳುವ ಮೊದಲು ಇದು ಬೆಂಗಳೂರಿನಲ್ಲಿ ನ ಅಭ್ಯಾಸ ಬಹಳ ಮುಖ್ಯವಾಗಿದೆ ಎಂದಿದ್ದಾರೆ.

ಏಷ್ಯನ್ ಗೇಮ್ಸ್‍ನಲ್ಲಿ ನಮ್ಮ ಪ್ರದರ್ಶ ಸಾಮಥ್ರ್ಯ ಕುರಿತು ಮೌಲ್ಯಮಾಪನ ನಡೆಯುತ್ತಿದೆ. ಸ್ವಲ್ಪ ವಿರಾಮದ ನಂತರ ಆಟಕ್ಕೆ ಮರಳುತ್ತಿರುವ ಆಟಗಾರರು ಮುಂಬರುವ ಸವಾಲನ್ನು ತೆಗೆದುಕೊಳ್ಳಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದು ಸ್ಕೋಪ್‍ಮನ್ ಹೇಳಿದ್ದಾರೆ.

ಸಂಭವನೀಯರು: ಗೋಲ್‍ಕೀಪರ್‍ಗಳು ಸವಿತಾ, ರಜನಿ ಎಟಿಮಾರ್ಪು, ಬಿಚ್ಚು ದೇವಿ, ಬನ್ಸಾರಿ ಸೋಲಂಕಿ.
ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಅಕ್ಷತಾ ಧೇಕಲೆ, ಜ್ಯೋತಿ ಛಾತ್ರಿ, ಮಹಿಮಾ ಚೌಧರಿ.

ಮಿಡ್‍ಫೀಲ್ಡರ್‍ಗಳು: ನಿಶಾ, ಸಲಿಮಾ ಟೆಟೆ, ಸುಶೀಲಾ ಚಾನು, ಜ್ಯೋತಿ, ನವಜೋತ್ ಕೌರ್, ಮೋನಿಕಾ, ಮರೀನಾ ಕುಜೂರ್, ಸೋನಿಕಾ, ನೇಹಾ, ಬಲ್ಜೀತ್ ಕೌರ್, ರೀನಾ ಖೋಖರ್, ವೈಷ್ಣವಿ ಫಾಲ್ಕೆ, ಅಜ್ಮಿನಾ ಕುಜೂರ್.

ಫಾರ್ವರ್ಡ್‍ಗಳು: ಲಾಲ್ರೆಮ್ಸಿಯಾಮಿ, ನವನೀತ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಜ್ ಖಾನ್, ಸುನೆಲಿತಾ ಟೊಪ್ಪೋ, ಬ್ಯೂಟಿ ಡಂಗ್‍ಡಂಗ್ ಅವರು ಸಂಭ್ಯವನೀಯ ಪಟ್ಟಿಯಲ್ಲಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ದಸರಾಗೂ ಕಳಂಕ : ಸಿ.ಟಿ.ರವಿ

ಬೆಂಗಳೂರು, ಅ.15- ಹಿರಿಯ ಕಲಾವಿದರ ಬಳಿಯೇ ಕಮಿಷನ್ ಕೇಳುತ್ತಿರುವ ಕಾಂಗ್ರೆಸ್ ಶೇ.60ರಷ್ಟು ಸರ್ಕಾರವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಗುತ್ತಿಗೆದಾರರ ಬಳಿ ಕೋಟಿ ಕೋಟಿ ಹಣ ಪತ್ತೆಯಾಗುತ್ತಿರುವ ಪ್ರಕರಣವನ್ನು ಸಿಬಿಐ ತನಿಖಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಡಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ಈ ಸರಕಾರದ ಹಗರಣಗಳು, ಭ್ರಷ್ಟಾಚಾರದ ಅಸ್ಥಿಪಂಜರಗಳು ಪ್ರತಿನಿತ್ಯ ಹೊರಕ್ಕೆ ಬರುತ್ತಿವೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ, ಪದ್ಮಶ್ರೀ ಪುರಸ್ಕøತ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಆಯೋಜಿಸಲು 5 ಲಕ್ಷ ಕಾರ್ಯಕ್ರಮದ ಆಯೋಜನೆಗೆ 3 ಲಕ್ಷ ಲಂಚ ಎಂದಾದರೆ, ಶೇ.60 ಲಂಚ ಕೇಳಿದಂತಾಗಿದೆ. ಹಿರಿಯ ಕಲಾವಿದರ ಬಳಿಯೇ ಶೇ.60 ಲಂಚ ಕೇಳುವುದಾದರೆ ನಾಡಹಬ್ಬಕ್ಕೆ ಇದಕ್ಕಿಂತ ಕಳಂಕ ಬೇರೊಂದಿಲ್ಲ. ಇಷ್ಟು ಮಾತ್ರವಲ್ಲ; ಈ ಸರಕಾರ ಕಲಾವಿದರನ್ನೂ ಬಿಡುತ್ತಿಲ್ಲ; ಇನ್ನು ಬೇರೆಯವರನ್ನು ಬಿಡುವರೇ ಎಂದು ಪ್ರಶ್ನಿಸಿದರು.

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಕಾಂಗ್ರೆಸ್ ಸರಕಾರದ ಕಮಿಷನ್ ದಂಧೆ ಕೇವಲ ಗುತ್ತಿಗೆದಾರರಿಗೆ, ಸರಕಾರಿ ಯೋಜನೆಗಳಿಗೆ ಸೀಮಿತವಾಗಿಲ್ಲ. ಅದು ಕಲಾವಿದರ ಗೌರವಧನದ ವರೆಗೂ ಕೈಚಾಚಿಬಿಟ್ಟಿದೆ. ಇದು ದುರಂತದ ಸಂಗತಿ ಮಾತ್ರವಲ್ಲ. ಸಾಂಸ್ಕøತಿಕ ಅಧಃಪತನದತ್ತ ಇವರು ರಾಜ್ಯವನ್ನು ಒಯ್ಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿಗಳು ನಮ್ಮದು ಭ್ರಷ್ಟಾಚಾರರಹಿತ ಆಡಳಿತ ಎನ್ನುತ್ತಾರೆ. ಅಬ್ಬರಿಸಿ ಬೊಬ್ಬಿರಿವ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಅವರ ಮೂಗಿನ ಕೆಳಗೇ ಇದು ನಡೆಯುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಇನ್ನು ಪರಿಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಒತ್ತಡದ ಮೂಲಕ ಪ್ರಕರಣ ಮುಚ್ಚಿಹಾಕಲು ಮುಂದಾದುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ ಎಂದರು.

ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ. ಹಿಂದೆ ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರು. ಈಗ ಗುತ್ತಿಗೆದಾರ ಅಂಬಿಕಾಪತಿ ಕರೋಡ್‍ಪತಿಯಾಗಿದ್ದಾರೆ. ಅವರ ಮನೆಯಲ್ಲಿ 42 ಕೋಟಿ, ಇನ್ನೊಬ್ಬ ಬಿಲ್ಡರ್ ಕೇತಮಾರನಹಳ್ಳಿ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ 40 ಕೋಟಿ, ಹೀಗೆ ಕೋಟಿ ಕೋಟಿ ಹೊರಕ್ಕೆ ಬರುತ್ತಿದೆ. ಇವರಿಬ್ಬರೂ ರಾಜ್ಯದ ನಂಬರ್ 1, ನಂಬರ್ 2 ಅವರ ಬೇನಾಮಿಗಳು ಎಂಬ ಮಾಹಿತಿ ನಮಗಿದೆ ಎಂದು ವಿವರ ನೀಡಿದರು. ಇದರ ಸಿಬಿಐ ತನಿಖೆ ಮಾಡಿ ಎಂದು ಆಗ್ರಹಿಸಿದರು.

ನಂಬರ್ 1, ನಂಬರ್ 2 ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನೂರಾರು ಬೇನಾಮಿಗಳನ್ನು ನೇಮಿಸಿದ್ದಾರೆ. ಇಬ್ಬರು ಬೇನಾಮಿಗಳು ಮಾತ್ರ ಸಿಕ್ಕಿದ್ದಾರೆ. ಈ ಹಣವೇ ಬೇನಾಮಿಗಳ ನೇಮಕಕ್ಕೆ ಸಾಕ್ಷಿ. ಕರ್ನಾಟಕವನ್ನು ಇವರು ಎಟಿಎಂ ಮಾಡಿಕೊಂಡಿದ್ದಾರೆ. ಹಿಂದೆ ಗೋವಿಂದರಾಜು ಅವರ ಡೈರಿ ಇದಕ್ಕೆ ಸಾಕ್ಷಿ ಆಗಿತ್ತು. ಆರ್‍ಜಿ ಯಾರು, ಎಸ್‍ಜಿ ಯಾರು, ಎಷ್ಟೆಷ್ಟು ಕೊಟ್ಟಿದ್ದಾಗಿ ಡೈರಿ ಸಾಕ್ಷಿ ಕೊಟ್ಟಿತ್ತು ಎಂದು ಅವರು ತಿಳಿಸಿದರು.

ಸಿಎಂ ಕುರ್ಚಿಗೆ ಟವೆಲ್ ಹಾಕಿದವರೊಬ್ಬರು ಚುನಾವಣೆ ಖರ್ಚಿಗೆ 2 ಸಾವಿರ ಕೋಟಿ ಕೊಡುವುದಾಗಿ ಹೇಳಿದ ಮಾಹಿತಿ ಇದೆ. ಹಾಲಿ ಮುಖ್ಯಮಂತ್ರಿಗಳು ಕಷ್ಟಪಟ್ಟು ಅದರ ಅರ್ಧ ವ್ಯವಸ್ಥೆ ಮಾಡುವುದಾಗಿ ಹೇಳಿದ ಮಾಹಿತಿ ಸಿಕ್ಕಿದೆ. ಇದು ಒಳಗಿನ ಸುದ್ದಿ. ಸತ್ಯವನ್ನು ಅವರೇ ಹೇಳಬೇಕು. ಇದನ್ನು ನೋಡಿದರೆ ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು ಎಂದು ಅರ್ಥವಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಮತ್ತೊಂದು ಐಟಿ ದಾಳಿ, ಮತ್ತೆ 45 ಕೋಟಿ ರೂ. ಪತ್ತೆ!

ತನಿಖೆ ಆದರೆ ಸಂಗ್ರಹಿತ ಮೊತ್ತ, ನಂಬರ್ 1ರಿಂದ ಆದ ಸಂಗ್ರಹ, ನಂಬರ್ 2 ಸಂಗ್ರಹಿಸಿದ ಮೊತ್ತದ ವಿವರ ಹೊರಬರುತ್ತದೆ. ಅಂತರರಾಜ್ಯ ವಿಷಯವಾದ ಕಾರಣ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ಅವರು ಪ್ರಶ್ನೆಗಳಿಗೆ ಉತ್ತರ ನೀಡಿದರು.

ಐಟಿ ದಾಳಿ ಹಿಂದೆ ರಾಜಕೀಯ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರೆ, ಎಲ್ಲ ಖಾತೆ ತಮ್ಮ ಕೈಯಲ್ಲಿ ಇರುವಂತೆ ವರ್ತಿಸುವ ಪ್ರಿಯಾಂಕ್ ಖರ್ಗೆಯವರು ದಾಳಿ ವಿರುದ್ಧ ಅಣಿಮುತ್ತು ಉದುರಿಸುತ್ತಾರೆ ಎಂದು ಟೀಕಿಸಿದರು. ಏಕ್ ತರಫ್ ಸೆ ಆಲೂ ಡಾಲ್‍ನ, ದೂಸ್‍ರಾ ತರಫ್ ಸೆ ಸೋನಾ ನಿಕಾಲ್‍ನ ಎಂಬಂತೆ ದುಡ್ಡು ತೆಗೆದಿದ್ದಾರಾ ಎಂದು ವ್ಯಂಗ್ಯವಾಡಿದರು.

ಅಬಕಾರಿ ಸುಂಕ, ವಿದ್ಯುತ್ ದರ, ಸ್ಟ್ಯಾಂಪ್ ಶುಲ್ಕ ಹೀಗೆ ಎಲ್ಲ ಬೆಲೆ ಏರಿಸಿದ ಬಳಿಕ ಬಾಕಿ ಬಿಲ್ ನೀಡಲು ನೀವು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದೀರಿ. ಬಹುಶಃ ಪಂಜಾಬ್ ಬಳಿಕ ಕರ್ನಾಟಕದ ಸಿಎಂ ಕೂಡ ತನ್ನ ರಾಜ್ಯ ದಿವಾಳಿ ಆಗುತ್ತಿದೆ ಎಂದು ಮುನ್ಸೂಚನೆ ಕೊಟ್ಟಿದ್ದಾರೆ. ಇಷ್ಟಾದರೂ ಇವರು ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಡುವುದನ್ನು ನಿಲ್ಲಿಸಿಲ್ಲ ಎಂದು ಟೀಕಿಸಿದರು.

ಈ ಸರಕಾರ ವಸೂಲಿ ಸರಕಾರ ಎಂದು ಟ್ಯಾಗ್‍ಲೈನ್ ಕೊಟ್ಟರೆ ತಪ್ಪಾಗದು. ಹಾಗಾಗಿ ವಸೂಲಿಗೆ ಸಂಬಂಸಿ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದರು. ದೇಶ ಮತ್ತು ನಾಡಿನ ಜನತೆಗೆ ಅವರು ನಾಡಹಬ್ಬ ದಸರಾ ಶುಭಾಶಯ ಕೋರಿದರು. ವಿಧಾನ ಪರಿಷತ್ ಸದಸ್ಯ ಮತ್ತು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡ ಭಾಸ್ಕರ ರಾವ್ ಉಪಸ್ಥಿತರಿದ್ದರು.