Friday, November 7, 2025
Home Blog Page 1892

ಗುತ್ತಿಗೆದಾರರ ಬಿಲ್ ಬಾಕಿಗೆ ಬಿಜೆಪಿಯೇ ಹೊಣೆ : ಸತೀಶ್ ಜಾರಕಿಹೊಳಿ

ಬೆಂಗಳೂರು, ಅ.13- ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ವಿಳಂಬವಾಗಲು ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಗಳ ಕುರಿತು ಸ್ಪಷ್ಟನೆ ನೀಡಿದರು.

ಗುತ್ತಿಗೆ ಬಾಕಿ ಬಿಲ್ ಬಿಡುಗಡೆ ಆಗಿಲ್ಲ ಅಂದರೆ ಅದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕಾರಣವೇ ಹೊರತು ನಾವಲ್ಲ. ಹಿಂದಿನ ಸರ್ಕಾರ ಅನುದಾನ ಬಿಟ್ಟು ಮೂರು ಪಟ್ಟು ಕಾಮಗಾರಿಗೆ ಹಣ ಖರ್ಚು ಮಾಡಿದ್ದಾರೆ. 1500 ಕೋಟಿ ಅನುದಾನ ಲಭ್ಯವಿದ್ದರೆ 5000 ಕೋಟಿ ವರೆಗೂ ಕಾಮಗಾರಿ ಮಂಜೂರಾತಿ ನೀಡಿದ್ದಾರೆ. ತಮ್ಮ ಲೋಕೋಪಯೋಗಿ ಇಲಾಖೆಯಲ್ಲೂ ಈ ರೀತಿ ನಡೆದಿದೆ. ಹಣ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು.

ಅನುದಾನ ಇರುವುದು 1500 ಕೋಟಿ, ಕೆಲಸ ನೀಡಿರುವುದು 6000 ಕೋಟಿ ರೂಪಾಯಿಗೆ. ಅದರಿಂದಾಗಿಯೇ ಬಾಕಿ ಬಿಲ್‍ಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಹಣವೆಲ್ಲಾ ಪಂಚಖಾತ್ರಿಗಳಿಗೆ ಹೋಗಿದೆ ಎಂದು ಆಧಾರ ರಹಿತವಾಗಿ ಆರೋಪ ಮಾಡಲಾಗುತ್ತಿದೆ ಎಂದರು.

ನಾವು ಯಾವ ರಾಜ್ಯಗಳಿಗೂ ಹಣ ಕಳಿಸಿಲ್ಲ : ಸಿಎಂ ಸಿದ್ದರಾಮಯ್ಯ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಾಕಿ ಬಿಲ್ ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಹಿಂದೆ ಅವರು ಮಾಡಿದ ಆರೋಪಕ್ಕೂ ಈಗಿನ ಬಿಲ್ ಬಾಕಿ ಬಿಡುಗಡೆ ಮಾಡಬೇಕೆಂದ ಒತ್ತಾಯಕ್ಕೂ ವ್ಯತ್ಯಾಸವಿದೆ ಎಂದರು. ಕಮಿಷನ್ ಬಗ್ಗೆ ವಿರೋಧ ಪಕ್ಷಗಳು ಆರೋಪ ಮಾಡಿದ್ದರೆ ಅದನ್ನು ಸಾಬೀತು ಮಾಡಲಿ. ನಮ್ಮ ಸರ್ಕಾರ ಬಾಕಿ ಬಿಲ್‍ಗಳ ಬಿಡುಗಡೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದೆ.

ಕೆಂಪಣ್ಣ ಅವರು ಒತ್ತಾಯಿಸಿರುವಂತೆ ಹೆಚ್ಚಿನ ಹಣ ಬಿಡುಗಡೆಗೆ ಹೆಚ್ಚುವರಿ ಹಣ ನೀಡುವಂತೆ ಮುಖ್ಯಮಂತ್ರಿಯವರ ಬಳಿ ಒತ್ತಾಯಿಸುವುದಾಗಿ ಹೇಳಿದರು. ಆರ್ಥಿಕ ಇಲಾಖೆಯಿಂದ 1500 ಕೋಟಿ ಮಾತ್ರ ಬಿಡುಗಡೆಯಾಗಲಿದೆ. ಉಳಿದ 3500 ಕೋಟಿ ಹಣಕಾಸು ಇಲಾಖೆ ಕೊಡುವುದಿಲ್ಲ. ಹೀಗಾಗಿ ವ್ಯತ್ಯಾಸವಾಗುತ್ತಿದೆ. ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು

ಆದಾಯ ತೆರಿಗೆ ದಾಳಿಗೂ ಕಾಂಗ್ರೆಸ್‍ಗೂ ಸಂಬಂಧ ಇಲ್ಲ:
ಆದಾಯ ದಾಳಿಗೂ, ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ 500 ದಾಳಿಗಳಾಗಿವೆ. ಅವುಗಳಿಗೂ ಕಾಂಗ್ರೆಸ್ ಸಂಬಂಧ ಇಲ್ಲ. ಬೆಂಗಳೂರಿನಲ್ಲಿ ದಾಳಿ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಬಹುಶಃ ದಾಳಿಗೆ ಒಳಗಾದವರು ಗುತ್ತಿಗೆದಾರರಿರಬಹುದು ಎಂದರು.

ಸಾಕಷ್ಟು ಜನ ಗುತ್ತಿಗೆದಾರರು ಎಲ್ಲರ ಜೊತೆ ಸ್ನೇಹದಿಂದ ಇರುತ್ತಾರೆ, ಎಲ್ಲಾ ಪಕ್ಷಗಳ ಜೊತೆಯೂ ಗುರುತಿಸಿಕೊಂಡಿರುತ್ತಾರೆ. ಹಾಗಾಗಿ ಬೆಂಗಳೂರಿನಲ್ಲಿ ದಾಳಿ ನಡೆದಿರವವರಿಗೂ ನಮಗೂ ಸಂಬಂಧ ಇಲ್ಲ. ಅದೇನಿದ್ದರೂ ಆದಾಯ ತೆರಿಗೆ ಮತ್ತು ದಾಳಿಗೆ ಒಳಗಾದವರ ನಡುವಿನ ವಿಚಾರ. ದಾಳಿ ನಡೆದಾಕ್ಷಣ ಅವರನ್ನು ಕಾಂಗ್ರೆಸ್‍ನವರು ಎಂದು ಸಂಪರ್ಕ ಕಲ್ಪಿಸುವುದು ಸರಿಯಲ್ಲ. ಎಲ್ಲದಕ್ಕೂ ರಾಜಕೀಯ ಸೇರಿಸುವುದು ಒಳ್ಳೆಯದಲ್ಲ. ಕೆಲವೊಮ್ಮೆ ಸ್ವಾಭಾವಿಕವಾಗಿಯೂ ದಾಳಿಗಳು ನಡೆಯುತ್ತವೆ ಎಂದರು.

ಬೆಂಗಳೂರಿಗೆ ಸುರಂಗ ಮಾರ್ಗ ಅಗತ್ಯವೇ.. ? ಯೋಜನೆ ಹಿಂದೆ ಹಲವು ಅನುಮಾನ

ಬೆಂಗಳೂರು,ಅ.13- ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಗ್ಗಿಸಲು ಪ್ರಸ್ತಾವಿತ ಸುರಂಗ ಮಾರ್ಗಗಳು ಆರ್ಥಿಕವಾಗಿ ಹಾಗೂ ಭೌತಿಕವಾಗಿ ಉತ್ತಮವಲ್ಲ. ಈ ಹಿಂದಿನ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಕಾರಿಡಾರ್‌ನ್ನು ಜೋಡಿಸುವ ಯೋಜನೆಯಂತೆಯೇ ಇದು ಕೂಡ ವೈಫಲ್ಯ ಕಾಣಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.

ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದರಲ್ಲಿ ಬೆಂಗಳೂರಿನ ವಾಯುಮಾಲಿನ್ಯ ಶಬ್ದ ಮಾಲಿನ್ಯ ತಡೆ ಮತ್ತು ಸಂಚಾರ ದಟ್ಟಣೆಯನ್ನು ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿವೆ.

ಸುಮಾರು 195 ಕಿ.ಮೀ ಉದ್ದ ಸುರಂಗ ಮಾರ್ಗ ನಿರ್ಮಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್, ಮೇಕ್ರಿವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯವೃತ್ತ, ಟ್ರಿನಿಟಿ ಸರ್ಕಲ್, ಸರ್ಜಾಜಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ, ಸಿರ್ಸಿ ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಗೊರಗುಂಟೆಪಾಳ್ಯ, ಕೆ.ಆರ್.ಪುರಂ, ಸಿಲ್ಕ್ ಬೋರ್ಡ್ ಒಳಗೊಂಡಂತೆ ಹೊರವರ್ತುಲ ರಸ್ತೆಯಲ್ಲಿ ಹೆಚ್ಚಿರುವ ಸಂಚಾರ ದಟ್ಟಣೆಯನ್ನು ತಗ್ಗಿಸಲು ಸುರಂಗ ಮಾರ್ಗ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ.

ಈ ಯೋಜನೆಗಳ ಕಾರ್ಯಾನುಷ್ಠಾನದ ಕುರಿತು ವಿಸ್ತೃತ ಯೋಜನಾ ವರದಿ ತಯಾರಿಸಲು 45 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ಮೇಲ್ನೋಟಕ್ಕೆ ಸುರಂಗ ಮಾರ್ಗ ಬೆಂಗಳೂರಿನಂತಹ ನಗರಕ್ಕೆ ಔಚಿತ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ.

ಮಹಾನಗರಿಯಲ್ಲಿ ಪ್ರತಿ ಅಡಿ ಜಾಗಕ್ಕೂ ಚಿನ್ನದ ಬೆಲೆಯಿದ್ದು, ಸುರಂಗ ಮಾರ್ಗ ಇಳಿಯುವ ಮತ್ತು ಅದು ಮೇಲ್ಭಾಗದಲ್ಲಿ ಹೊರಬರುವ ಜಾಗಗಳನ್ನು ಗುರುತಿಸಲು ಕಷ್ಟಸಾಧ್ಯವಾಗಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಂತೂ ಇದು ದುಸ್ತರ ಎಂದು ಖುದ್ದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಅದರ ಹೊರತಾಗಿಯೂ ಯೋಜನೆ ಜಾರಿಗೆ ಮುಂದಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು

ಸುರಂಗ ಮಾರ್ಗದ ಯೋಜನೆಗಳ ಕುರಿತು ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಾರಿಗೆ ವ್ಯವಸ್ಥೆಗಳ ಇಂಜಿನಿಯರಿಂಗ್ ಕೋಶ ಅಧ್ಯಯನ ನಡೆಸಿದೆ. 2020ರಿಂದ 2030ರ ಅವಯ ವಾಹನಗಳ ದಟ್ಟಣೆಯನ್ನು ಅಂದಾಜಿಸಿ, ಹೊಸದಾಗಿ ಪ್ರಸ್ತಾಪಿಸಲಾಗಿರುವ ಸುರಂಗ ರಸ್ತೆ ನಿರ್ಮಾಣ, ಸುರಂಗ ಹೊರತಾದ ರಸ್ತೆ ಹಾಗೂ ಮೆಟ್ರೋ ಸೇರಿ ಮೂರು ಮಾದರಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿದೆ.

3.5 ಮೀಟರ್ ಅಗಲದ ಸುರಂಗ ರಸ್ತೆಯ ಒಂದು ದಿಕ್ಕಿನಲ್ಲಿ 1200 ಪ್ರಯಾಣಿಕರು ಸಂಚರಿಸಬಹುದು. ಅಷ್ಟೇ ವಿಸ್ತೀರ್ಣದ ಮೆಟ್ರೋ ಮಾರ್ಗದಲ್ಲಿ 9 ಕಾರ್ ಕೋಚ್‍ಗಳ ಮೂಲಕ 69 ಸಾವಿರ ಮಂದಿ ಪ್ರಯಾಣಿಸಬಹುದಾಗಿದೆ. ಹೀಗಾಗಿ ಸುರಂಗ ಮಾರ್ಗಕ್ಕಿಂತಲೂ ಮೆಟ್ರೊ 40 ಪಟ್ಟು ಲಾಭದಾಯಕವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಶ್ಲೇಷಿಸಿದೆ.

ಮೆಟ್ರೊ ಸುರಂಗ ಮಾರ್ಗ ಕೊರೆಯಲು ಬಳಸಿದ ಬೋರಿಂಗ್ ಮಿಷನ್‍ನನ್ನೇ ಸುರಂಗ ಮಾರ್ಗ ರಸ್ತೆ ಯೋಜನೆಗೂ ಬಳಸಲಾಗುತ್ತದೆ. ಹೀಗಾಗಿ ಎರಡು ಮಾರ್ಗಗಳ ನಿರ್ಮಾಣ ವೆಚ್ಚ ಸರಿಸುಮಾರು ಒಂದೇ ಆಗಿದೆ. ಆದರೆ ಮೆಟ್ರೋದಲ್ಲಿ ಹೆಚ್ಚು ಜನ ಸುರಕ್ಷಿತ ಹಾಗೂ ಸುಲಭವಾಗಿ ಪ್ರಯಾಣಿಸಲು ಅವಕಾಶವಿದೆ ಇದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ಕೋಶದ ಸಂಚಾಲಕರಾದ ಪ್ರೊ.ಆಶೀಶ್ ವರ್ಮಾ ತಿಳಿಸಿದ್ದಾರೆ.

ಅಧ್ಯಯನ ವರದಿಯ ಪ್ರಕಾರ ಬಸ್ಸು, ದ್ವಿಚಕ್ರ ವಾಹನ ಕಾರುಗಳ ಸ್ಥಳ ಸ್ವಾೀಧಿನ ಪ್ರಮಾಣ ಹೆಚ್ಚಾಗಿದೆ. ಲಘು ರೈಲು ಸಂಚಾರ ವ್ಯವಸ್ಥೆಯ ಏಕಮುಖ ಮಾರ್ಗ ಒಂದು ಗಂಟೆಗೆ 30ರಿಂದ 40 ಸಾವಿರ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಲಿದೆ. ಇದು ಸುರಂಗ ಮಾರ್ಗಕ್ಕಿಂತಲೂ 22 ಪಟ್ಟು ಹೆಚ್ಚಾಗಲಿದೆ.

ಕಿಲೋಮೀಟರ್ ಅಂದಾಜಿನಲ್ಲಿ ವಾಹನಗಳ ಸಂಚಾರದ ಅವಲೋಕನವು ಸುರಂಗ ರಸ್ತೆಗಿಂತಲೂ ಮೆಟ್ರೋದಲ್ಲಿ ಹೆಚ್ಚು ಸುಗಮ. ಮೆಟ್ರೋದಿಂದ 5.3ರಷ್ಟು ವಾಹನ ದಟ್ಟಣೆ ತಗ್ಗಿದರೆ, ಸುರಂಗ ಮಾರ್ಗದಿಂದ ಕೇವಲ 2.7ರಷ್ಟು ಮಾತ್ರ ಕಡಿಮೆಯಾಗಲಿದೆ. ಮೆಟ್ರೋವನ್ನೇ ಬಳಸಿದರೆ 2031ರ ವೇಳೆಗೆ ಕಾರ್ಬನ್ ಡೈ ಆಕ್ಸೈಡ್ ಮಾಲಿನ್ಯದ ಪ್ರಮಾಣ ಶೇ.18.6 ಮತ್ತು ಶೇ.14.8ರಷ್ಟು ತಗ್ಗುವ ಸಾಧ್ಯತೆ ಇದೆ. ಕಾರ್ಬೋ ಮೊನಾಕ್ಸೈಡ್ ಶೇ.27.2 ಮತ್ತು ನೈಟ್ರೋ ಆಕ್ಸೈಡ್ ಪ್ರಮಾಣ ಶೇ.11.3ರಷ್ಟು ತಗ್ಗಲಿದೆ.

ರಾಜ್ಯದ 216 ತಾಲ್ಲೂಕುಗಳು ಬರಪೀಡಿತ ; ಸರ್ಕಾರ ಘೋಷಣೆ

ಇದಕ್ಕಿಂತಲೂ ಆತಂಕಕಾರಿ ಎಂದರೆ ಸುರಂಗ ರಸ್ತೆಯಿಂದ 2031ರ ವೇಳೆಗೆ ಸಾವಿನ ಪ್ರಮಾಣ ವರ್ಷಕ್ಕೆ 1069ರಷ್ಟು ಹೆಚ್ಚಾಗಲಿದೆ. ಮೆಟ್ರೊದಿಂದ ಈ ಪ್ರಮಾಣ 830ಕ್ಕೆ ಇಳಿಕೆಯಾಗಲಿದೆ ಎಂದು ತಜ್ಞರ ವರದಿ ಅಂಕಿಅಂಶಗಳ ಸಮೇತ ವಿಶ್ಲೇಷಿಸಿದೆ. ಇತ್ತೀಚೆಗೆ ನಡೆದ ಬ್ರಾಂಡ್ ಬೆಂಗಳೂರು ಕಾರ್ಯಾಗಾರದಲ್ಲಿ ಈ ವರದಿ ಸಲ್ಲಿಕೆಯಾಗಿದ್ದು, ಅದರ ಹೊರತಾಗಿಯೂ ಸುರಂಗ ಮಾರ್ಗದ ಪ್ರಸ್ತಾವಿತ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಅಂಬಿಕಾಪತಿ ಖಜಾನೆ ಲೆಕ್ಕ ಹಾಕಲು ನೋಟು ಎಣಿಸುವ ಮಿಷನ್‍, ಅಕ್ಕಸಾಲಿಗರ ಆಗಮನ

ಬೆಂಗಳೂರು,ಅ.13- ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ಸಿಕ್ಕ ನಗದನ್ನು ಲೆಕ್ಕ ಹಾಕಲು ಐಟಿ ಅಕಾರಿಗಳು ನೋಟು ಎಣಿಸುವ ಯಂತ್ರ(ಕೌಂಟಿಂಗ್ ಮಿಷನ್) ತರಿಸಿದ ಪ್ರಸಂಗವೂ ಜರುಗಿದೆ.

42 ಕೋಟಿ ನಗದು ಕಂಡು ಬೆಚ್ಚಿಬಿದ್ದ ಐಟಿ ಅಕಾರಿಗಳು ಅಷ್ಟು ದೊಡ್ಡ ಮೊತ್ತವನ್ನು ಲೆಕ್ಕ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿರುವ ಅವರ ಮನೆಗೆ ನಾಲ್ಕು ಕೌಂಟಿಂಗ್ ಮಿಷನ್‍ಗಳನ್ನು ತರಲಾಯಿತು.

ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು

ಬೆಂಗಳೂರಿನಲ್ಲಿರುವ ಐಟಿ ಕಚೇರಿಯ ಇನ್ನೊಂದು ತಂಡ ಎರಡು ಪ್ರತ್ಯೇಕ ಕಾರುಗಳಲ್ಲಿ ಕೌಂಟಿಂಗ್ ಮಿಷನ್ ತಂದು ಬೆಳಗ್ಗೆಯಿಂದಲೇ ನಗದಿನ ಮೊತ್ತವನ್ನು ಕಲೆ ಹಾಕಿದರು.

ಇದೇ ಸಂದರ್ಭದಲ್ಲಿ ಅಂಬಿಕಾಪತಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಬಂಗಾರವನ್ನು ಸಹ ಲೆಕ್ಕ ಹಾಕಲು ಅಕ್ಕಸಾಲಿಗರನ್ನು ಕರೆಸಿದರು. ಭಾರೀ ಪ್ರಮಾಣದಲ್ಲಿ ಬೆಲೆಬಾಳುವ ಆಭರಣಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಹೀಗಾಗಿ ಐಟಿ ತಂಡ ಅಕ್ಕಸಾಲಿಗರನ್ನು ಕರೆಸಿ ವಜ್ರಾಭರಣಗಳ ಮೌಲ್ಯದ ಒಟ್ಟು ಮೊತ್ತವನ್ನು ಕಲೆ ಹಾಕಿತು.

ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಅಂಬಿಕಾಪತಿಯ ಮಂಚದ ಖಜಾನೆ

ಬೆಂಗಳೂರು,ಅ.13- ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಸಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು 40% ಕಮೀಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಐಟಿ ಖೆಡ್ಡಾಕ್ಕೆ ಬಿದ್ದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಸರ್ಕಾರದಲ್ಲಿ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಸಚಿವರು ಮತ್ತು ಶಾಸಕರು 40% ಕಮೀಷನ್‍ಗೆ ಬೇಡಿಕೆ ಇಟ್ಟಿದ್ದಾರೆಂಬ ಗಂಭೀರ ಆರೋಪ ಮಾಡಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಅಂಬಿಕಾಪತಿ ಮಾಡಿದ್ದ ಈ ಆರೋಪ ಬಿಜೆಪಿ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸಿತ್ತು.

ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘ, ನಿಮ್ಮದೇ ಸರ್ಕಾರ ಇರುವ ಕರ್ನಾಟಕದಲ್ಲಿ ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿಗಳ ಹಣ ಬಿಡುಗಡೆಗೆ 40% ಕಮೀಷನ್ ಕೇಳುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದರು.

ಬಾಕಿ ಬಿಲ್ ಪಾವತಿಗೆ ಒಂದು ತಿಂಗಳು ಡೆಡ್‍ಲೈನ್ ನೀಡಿದ ಕೆಂಪಣ್ಣ

ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಅಲೋಲ್ಲ ಕಲ್ಲೋಲವನ್ನೇ ಸೃಷ್ಟಿಸಿ ಪ್ರತಿಪಕ್ಷ ಕಾಂಗ್ರೆಸ್ 40% ಕಮೀಷನ್ ಆರೋಪವನ್ನೇ ಚುನಾವಣಾ ಸಂದರ್ಭದಲ್ಲಿ ಪ್ರಮುಖ ಅಸ್ತ್ರ ಮಾಡಿಕೊಂಡಿತ್ತು. ಮಾಜಿ ಸಚಿವ ಮುನಿರತ್ನ ಅವರು ಇಂದು ಐಟಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಅಂಬಿಕಾಪತಿ ವಿರುದ್ಧ ಕಾವಲ್‍ಬೈರಸಂದ್ರ ಠಾಣೆಗೆ ದೂರು ನೀಡಿದ್ದರು.

ಇದೀಗ 42 ಕೋಟಿ ನಗದು ಸಮೇತ ಐಟಿ ಖೆಡ್ಡಾದಲ್ಲಿ ಬಿದ್ದಿರುವ ಅಂಬಿಕಾಪತಿ ಕುಟುಂಬಕ್ಕೆ ಬರುವ ದಿನಗಳಲ್ಲಿ ಕಾನೂನಿನ ಸಂಕಷ್ಟಗಳು ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸ್ವಾಭಿಮಾನಿ ಹೋರಾಟಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು ಅ.13- ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ.

ಈಕೆಯ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕಿತ್ತೂರು ಉತ್ಸವ ಮತ್ತು ಜಯಂತ್ಸೋವವನ್ನು ಆರಂಭಿಸಿದೆ ಎಂದು ವಿವರಿಸಿದರು.

ರಾಜ್ಯದ 216 ತಾಲ್ಲೂಕುಗಳು ಬರಪೀಡಿತ ; ಸರ್ಕಾರ ಘೋಷಣೆ

ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ ನಡೆಯುತ್ತಿದೆ. ಅದರ ಪ್ರಯುಕ್ತ ವಿಜಯ ಜ್ಯೋತಿ ಬೆಂಗಳೂರಿನ ವಿಧಾನಸೌಧದಿಂದ ಪ್ರಾರಂಭವಾಗುತ್ತಿದ್ದು, ರಾಜ್ಯದ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಅ.23ರಂದು ಕಿತ್ತೂರಿಗೆ ತಲುಪಲಿದೆ. ಆ ದಿನ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಮೊದಲ ಯುದ್ಧದಲ್ಲಿ ಜಯ ಗಳಿಸಿದ ದಿನವೇ ಅ.23 ಎಂದರು.

ಯುದ್ಧದ ವೇಳೆ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮರ ಬಲಗೈ ಬಂಟನಾಗಿದ್ದ. ಅನೇಕ ರಾಜರೂ ಬ್ರಿಟಿಷರಿಗೆ ಶರಣಾಗಿದ್ದ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶರಣಾಗಲಿಲ್ಲ. ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಬಲಾಢ್ಯರಾಗಿದ್ದ ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕಾದರೆ ಧೈರ್ಯ ಇರಬೇಕಿತ್ತು ಎಂದರು.

ಕಿತ್ತೂರು ರಾಣಿ ಕುರಿತು ಸಿನಿಮಾ ಒಂದು ಬಂದಿತ್ತು, ಅದರಲ್ಲಿ ಆಕೆಯ ಧೈರ್ಯ ಸಾಹಸ ಸ್ಪಷ್ಟವಾಗಿ ಕಾಣುತ್ತದೆ. ಹೊರಗಿನಿಂದ ಬಂದ ನಿಮಗೆ ಏಕೆ ಕಪ್ಪ ಕೊಡಬೇಕು ಎಂದು ಕಿತ್ತೂರು ರಾಣಿ ಪ್ರಶ್ನಿಸಿದರು. ನಾಡನ್ನು ಪ್ರತಿಯೊಬ್ಬರು ಪ್ರೀತಿಸಬೇಕು, ಸ್ವಾಭಿಮಾನ, ದೇಶ ಪ್ರೇಮ ಇದ್ದವರಿಗೆ ಮಾತ್ರ ದೇಶದ ಬಗ್ಗೆ ಪ್ರೀತಿ, ಗೌರವ ಇರುತ್ತದೆ. ಹತ್ತೊಂಬತ್ತನೆ ಶತಮಾನದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಅದನ್ನು ಸಾಬೀತು ಮಾಡಿದ್ದಾರೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ದೇಶದ ಆಸ್ತಿ. ತಾವು ಮುಖ್ಯಮಂತ್ರಿಯಾಗುವವರೆಗೂ ಯಾರು ಅವರ ಜಯಂತ್ಯೋತ್ಸವ ಆಚರಣೆ ಮಾಡಿರಲಿಲ್ಲ. ಅವರ ಬಗ್ಗೆ ಮಾತನಾಡುವುದರಿಂದ ದೇಶ ಪ್ರೇಮ ಹೆಚ್ಚಾಗುತ್ತದೆ. ನಾವು ನಮ್ಮ ತಾಯ್ನಾಡನ್ನು ಪ್ರೀತಿಸಲೇಬೇಕು ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್, ಧಾರವಾಡ ಗ್ರಾಮೀಣ ಶಾಸಕರಾದ ವಿನಯ್ ಕುಲಕರ್ಣಿ, ಬೈಲಹೊಂಗಲ ಶಾಸಕರಾದ ಮಹಂತೇಶ ಕೌಜಲಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿ ಕಲೆಕ್ಷನ್ ಹಣದ ಆದಿಪುರುಷ ಯಾರು.. ? : ಹೆಚ್ಡಿಕೆ ಪ್ರಶ್ನೆ

ಬೆಂಗಳೂರು: ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂಪಾಯಿ ಕಂತೆ ಕಂತೆ ಹಣದ ಮೂಲವನ್ನು ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇದು ಬೆಂಗಳೂರು ನಗದು ಅಭಿವೃದ್ಧಿ ಇಲಾಖೆಯ ಕೈ ಕರಾಮತ್ತು ಎಂದು ಕಾಂಗ್ರೆಸ್ ಪಕ್ಷಕ್ಕೆ ಕಾಲೆಳೆದಿದ್ದಾರೆ.

ಈ ಬಗ್ಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ಅವರು; ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ. ಅದೂ ಮಂಚದ ಕೆಳಗೆ ಐಟಿದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ಹೇಳಿದ್ದಾರೆ.

ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42 ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪರ್ಸಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

ಐಟಿ ದಾಳಿ ರಾಜಕೀಯ ಪ್ರೇರಿತ : ಡಿಸಿಎಂ ಡಿಕೆಶಿ

23 ಬಾಕ್ಸ್ ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್ ಗೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆಯ ಕೈ ಕರಾಮತ್ತು ಅಂತ ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪರ್ಸಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು? ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.

ಈಗ ಹೇಳಿ ಸಿದ್ದರಾಮಯ್ಯನವರೇ 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಈಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು.. ದಯಮಾಡಿ ಹೇಳಿ. ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ ಕೈ ಚಳಕ ಜೋರಾಗಿದೆ. ಪಂಚರಾಜ್ಯಗಳ ಪಾಲಿಕೆ ಕರ್ನಾಟಕ ಸಮೃದ್ಧ ಎಟಿಎಮ್ ಕಾವೇರಿ ನೀರು  ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆಲಕ್ಷ್ಮೀ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ ಎಂದು ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.

ಆದಿಯಿಂದಲೂ ಇದೇ ಕಥೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ

ಐಟಿ ದಾಳಿ ರಾಜಕೀಯ ಪ್ರೇರಿತ : ಡಿಸಿಎಂ ಡಿಕೆಶಿ

ಬೆಂಗಳೂರು, ಅ.13- ರಾಜಕಾರಣ ಇಲ್ಲದೆ ಆದಾಯ ತೆರಿಗೆಯವರು ದಾಳಿ ಮಾಡುವುದೇ ಇಲ್ಲ. ನಮಗೆ ಆ ಬಗ್ಗೆ ಸ್ಪಷ್ಟ ತಿಳುವಳಿಕೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿಯಲ್ಲಿ ರಾಜಕೀಯ ಇದ್ದೇ ಇದೆ. ಚತ್ತಿಸ್‍ಗಡ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಈ ರೀತಿಯ ದಾಳಿಗಳಾಗುತ್ತಿವೆ. ರಾಜಕೀಯ ಇಲ್ಲದೆ ಇದ್ದರೆ ಆದಾಯ ತೆರಿಗೆ ಅಧಿಕಾರಿಗಳು ಬರುವುದೇ ಇಲ್ಲ. ಇದರ ಬಗ್ಗೆ ನಮಗೆ ಗೋತ್ತಿದೆ ಎಂದರು.

ಪಂಚರಾಜ್ಯಗಳ ಚುನಾವಣೆಗೆ ರಾಜ್ಯದಿಂದ ಹಣ ಕಳುಹಿಸಲಾಗುತ್ತಿತ್ತು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆರೋಪಕ್ಕೆ ಉತ್ತರ ನೀಡಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು. ಕೆಲವು ರಾಜಕೀಯ ಇದ್ದಿದ್ದೆ, ಇವರಿಗೆಲ್ಲಾ ಉತ್ತರ ಕೊಡುವ ಅಗತ್ಯ ಇಲ್ಲ. ರಸ್ತೆಯಲ್ಲಿ, ಬೀದಿಗೆ ಮಾತನಾಡುವವರಿಗೆಲ್ಲಾ ಪ್ರತಿಕ್ರಿಯಿಸಲ್ಲ ಎಂದರು. ಬಿಬಿಎಂಪಿಯಲ್ಲಿ ಬಿಡುಗಡೆ ಮಾಡಿದ್ದ ಗುತ್ತಿಗೆ ಬಿಲ್‍ನ ಬಾಕಿಯಲ್ಲಿ ಕಮಿಷನ್ ಪಡೆದು ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು ಎಂಬ ಆರೋಪದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ರಾಜ್ಯದಲ್ಲಿನ ವಿದ್ಯುತ್ ಕೊರತೆ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ಸಭೆ ನಡೆಸಲಿದ್ದಾರೆ. ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ತಾವು ಇಂಧನ ಸಚಿವರಾಗಿದ್ದಾಗ ಎಷ್ಟು ವಿದ್ಯುತ್ ಹೆಚ್ಚುವರಿಯಾಗಿತ್ತು ಎಂಬ ಮಾಹಿತಿ ಇದೆ. ಮುಖ್ಯಮಂತ್ರಿಯವರ ನೇತೃತ್ವದ ಸಭೆ ಮುಗಿಯಲಿ, ನಂತರ ನಾನು ಮಾತನಾಡುತ್ತೇನೆ ಎಂದರು.

ಬಾಕಿ ಬಿಲ್ ಬಿಡುಗಡೆಗೆ ಸಂಬಂಸಿದಂತೆ ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವಿಚಾರಣೆ ಬಾಕಿ ಇದ್ದಾಗಲೂ ಬಹುತೇಕ ಶೇ.65-70ರಷ್ಟು ಬಾಕಿ ಬಿಲ್‍ಗಳನ್ನು ಬಿಡುಗಡೆ ಮಾಡಿದ್ದೇವೆ. ವಿಚಾರಣಾ ವರದಿ ಬರದೆ ಇದ್ದರೂ ಗುತ್ತಿಗೆದಾರರು, ಅದರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು ಎಂಬ ಕಾರಣಕ್ಕೆ ಆದ್ಯತೆ ಮೇರೆಗೆ ಹಣ ನೀಡಿದ್ದೇವೆ. ಕೆಂಪಣ್ಣ ಅವರು ಆತಂಕ ಪಡುವ ಅಗತ್ಯ ಇಲ್ಲ. ಯಾವುದಾದರೂ ಬಾಕಿ ಇದ್ದರೆ ಅದನ್ನು ಪರಿಶೀಲಿಸಿ ನ್ಯಾಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ನಾವು ಯಾವ ರಾಜ್ಯಗಳಿಗೂ ಹಣ ಕಳಿಸಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.13- ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ರವಾನೆಗುತ್ತಿದೆ ಎಂಬುದು ಆಧಾರ ರಹಿತವಾದ ಆರೋಪವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪ ಮಾಡಿದವರು ನಾವು ಹಣ ಕಳುಹಿಸಿದ್ದನ್ನು ನೋಡಿದ್ದಾರೆಯೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾವು ಯಾವ ರಾಜ್ಯಗಳಿಗೂ ಹಣ ಕಳುಹಿಸುವುದಿಲ್ಲ. ಅವರು ನಮ್ಮ ಬಳಿ ಕೇಳುವುದು ಇಲ್ಲ. ಬಿಜೆಪಿಯವರು ಆಧಾರ ರಹಿತವಾಗಿ ಆರೋಪ ಮಾಡುತ್ತಾರೆ ಎಂದು ಸಿಡಿಮಿಡಿಗೊಂಡರು. ಬೆಂಗಳೂರಿನಲ್ಲಿ ಆದಾಯ ತೆರಿಗೆ ದಾಳಿಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ನಿರಾಕರಿಸಿದರು. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಇದೇ ವೇಳೆಗೆ 900 ಮೆ.ವ್ಯಾಟ್ ಬಳಸಲಾಗುತ್ತಿತ್ತು. ಈ ಬಾರಿ 1500 ರಿಂದ 1600 ಮೆ.ವ್ಯಾಟ್ ಬೇಡಿಕೆ ಇರುವುದರಿಂದ ತೊಂದರೆಯಾಗಿದೆ. ವಿದ್ಯುತ್ ನ್ನು ಹೊರಗಿನಿಂದ ಹೇಗೆ ಖರೀದಿಸುವ ಕುರಿತು ಎಂದು ಚರ್ಚಿಸಲು ಇಂದು ಸಭೆ ಕರೆಯಲಾಗಿದೆ ಎಂದರು.

ರಾಜ್ಯವನ್ನು ಕತ್ತಲೆಗೆ ತಳ್ಳಿರುವುದು ನಾವಲ್ಲ : ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ಮಾರಾಟ ಮಾಡಬೇಕು, ಬೇರೆಲ್ಲಿಯೂ ಮಾರಬಾರದೆಂದು ಸೆಕ್ಷನ್ 11ರನ್ವಯ ನಿನ್ನೆ ಅದೇಶ ಹೊರಡಿಸಲಾಗಿದೆ. ಬಿಜೆಪಿಗೆ ವಸ್ತುಸ್ಥಿತಿ ತಿಳಿದಿಲ್ಲ. ರಾಜ್ಯದಲ್ಲಿ ಮಳೆ ಕಡಿಮೆಯಾಗುವುದರಿಂದ ಹಾಗೂ ಬೇಸಿಗೆ ರೀತಿಯಲ್ಲಿ ವಿದ್ಯುತ್‍ಗೆ ಬೇಡಿಕೆ ಹೆಚ್ಚಾಗಿರುವುದರಿಂದ ತೊಂದರೆಯಾಗಿದೆ ಎಂದರು.

ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಹೇಳಿದ್ದಕ್ಕೆಲ್ಲಾ ಉತ್ತರ ನೀಡಲು ಆಗುವುದಿಲ್ಲ. ಅವರು ರಾಜಕೀಯವಾಗಿ ಮಾತನಾಡುತ್ತಾರೆ. ವಸ್ತುಸ್ಥಿತಿ ಅವರಿಗೆ ತಿಳಿದಿದೆಯೇ. ಮಳೆ ಇಲ್ಲದೆ ಬರಗಾಲ ಬಂದು ತೊಂದರೆಯಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಮೂರು ಫೇಸ್ ನಲ್ಲಿ 7 ಗಂಟೆ ವಿದ್ಯುತ್ ನೀಡಬೇಕೆಂದಿರುವುದನ್ನು ಕೊಡಲು ಆಗುತ್ತಿಲ್ಲ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಬಾಕಿ ಬಿಲ್ ಪಾವತಿಗೆ ಒಂದು ತಿಂಗಳು ಡೆಡ್‍ಲೈನ್ ನೀಡಿದ ಕೆಂಪಣ್ಣ


ಬೆಂಗಳೂರು,ಅ.13- ಒಂದು ತಿಂಗಳೊಳಗೆ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದಕ್ಕಿಂತ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ.

ಈಗಾಗಲೇ ಹಲವು ವರ್ಷಗಳಿಂದ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ ಜಿಎಸ್‍ಟಿ ಗೊಂದಲ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಗುತ್ತಿಗೆದಾರರಿಗೂ ಬಾಕಿಗಳನ್ನು ಕರುಣಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದೇವು, ಆದರೆ ಹಳೆ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಎಂಜಿನಿಯರ್‍ಗಳು ಹೇಳುತ್ತಿದ್ದಾರೆ. ಕೆಲ ಗುತ್ತಿಗೆದಾರರು ಶಿಫಾರಸು ತಂದರೆ ಕಮಿಷನ್ ಪಡೆದು ರಾತ್ರೋರಾತ್ರಿ ಚೆಕ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇಸ್ರೇಲ್‍ನಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು

ಗುತ್ತಿಗೆದಾರರು ಸಾಲಸೋಲ ಮಾಡಿ ಕಾಮಗಾರಿ ಮಾಡಿದ್ದು, ಮಾಡಿರುವ ಸಾಲ ಕಟ್ಟಲಾಗದೆ ಕೆಲವರು ಊರು ಬಿಡುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಒಬ್ಬರು ವಿಷ ಸೇವಿಸಿದ್ದಾರೆ. ಪ್ರತಿ ಬಾರಿ ಸರ್ಕಾರಗಳು ಹಿಂದಿನ ಸರ್ಕಾರಗಳ ಮೇಲೆ ಬೆರಳು ಮಾಡುತ್ತಿವೆ. ನಾವು ಕಷ್ಟದಲ್ಲಿದ್ದೇವೆ, ನಮ್ಮ ಪರಿಸ್ಥಿತಿಯಂತೂ ಅಯೋಮಯವಾಗಿದೆ. ಜೀವನವೇ ಕಷ್ಟವಾಗಿದೆ. ಇನ್ನು ಜಿಎಸ್‍ಟಿ ಎಲ್ಲಿಂದ ಕಟ್ಟೋಣ. ಪಾಲಿಕೆಯ ಪರಿಸ್ಥಿತಿಯಂತೂ ಹೇಳುವುದಕ್ಕೇ ಆಗಲ್ಲ. ನಮ್ಮ ಅಕೌಂಟ್‍ಗಳು ಈಗಾಗಲೇ ಫ್ರೀಜ್ ಆಗಿವೆ.

ರಾಜ್ಯದ ಬಹುತೇಕ ಕೆಲಸಗಳನ್ನು ಆಂಧ್ರದವರು ಮಾಡುತ್ತಿದ್ದಾರೆ. ನಾವು ಅರ್ಹರಾಗಿದ್ದರೂ ಕೂಡ ಇಲ್ಲದಂತಾಗಿದ್ದೇವೆ ಎಂದರು.
ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಹಲವು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ಕೂಡ ತರಲಾಗಿತ್ತು. ವಿವಿಧ ಇಲಾಖೆಗಳಿಂದ ಸುಮಾರು 20 ಸಾವಿರ ಕೋಟಿ ರೂ.ಗಳಿಗಿಂತಲೂ ಅಕ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಒಂದೇ ಬಾರಿ ಅಲ್ಲದಿದ್ದರೂ, ಹಂತ-ಹಂತವಾಗಿ ಬಿಡುಗಡೆ ಮಾಡಿ ಸರ್ಕಾರ ಪ್ರಾಮಾಣಿಕತೆಯನ್ನು ತೋರಬೇಕಾಗಿತ್ತು, ಆದರೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ.


ಪ್ರಮುಖವಾಗಿ ಗುತ್ತಿಗೆದಾರರು ಕೆಲಸ ನಿರ್ವಹಿಸುವ ಜಲಸಂಪನ್ಮೂಲ, ಸಣ್ಣ ನೀರಾವರಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗಳಲ್ಲೂ ಸಹ ಹೊಸ ಸಮಸ್ಯೆಗಳು ಸೃಷ್ಠಿಯಾಗಿದೆ ಎಂದರು.ವಿವಿಧ ಕಾಮಗಾರಿಗಳನ್ನು ವರ್ಗಿಕರಿಸಿ ಅನುದಾನವನ್ನು ಬಿಡುಗಡೆ ಮಾಡುವ ಬಿಬಿಎಂಪಿ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದೆ. ಈ ಸಂಬಂಧ ಉಪಮುಖ್ಯಮಂತ್ರಿಗಳು, ಬಿಬಿಎಂಪಿ ಆಯುಕ್ತರು ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಲಿಲ್ಲ.

ಕೆಲವು ವರ್ಗಗಳಿಗೆ ಕಾಮಗಾರಿ ಮುಗಿದ ಕೂಡಲೇ ಅನುದಾನ ಲಭ್ಯವಾದರೆ ಇನ್ನೂ ಕೆಲವು ವರ್ಗಗಳಲ್ಲಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ತಾರತಮ್ಯಕ್ಕೆ ಕಾರಣವಾಗಿದೆ.ಪ್ರಭಾವಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿಯಮಗಳನ್ನು ರೂಪಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ತೀರ್ಪು ನೀಡುತ್ತದೆ. ಯಾವುದೇ ವರ್ಗವಾದರೂ, ಎಲ್ಲವೂ ಕಾಮಗಾರಿಗಳ ಪಟ್ಟಿಯ ಅಡಿಯಲ್ಲೇ ಬರುತ್ತದೆ. ಆದರೂ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಯನ್ನು ಏಕೆ ಜಾರಿಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.

ಇನ್ನೊಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಬಾಕಿ ಉಳಿಸಿಕೊಂಡಿರುವ ಶೇ. 50ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲೇಬೇಕು. ಯಾವುದೇ ಸಬೂಬು ಹೇಳದೆ ತನಿಖೆ ಆಯೋಗದ ಹೆಸರಿನಲ್ಲಿ ಮುಂದೂಡಬಾರದು, ಇಲ್ಲವಾದಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದ ಮೇಲೆ ಐಟಿ ದಾಳಿ ವಿಚಾರ ಕುರಿತಂತೆ ಮಾತನಾಡಿದ ಅವರು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕೃಷಿ, ಜಲ್ಲಿ ಕ್ರಷರ್ ಸೇರಿದಂತೆ ಹಲವು ವ್ಯಾಪಾರಗಳಿವೆ. ಈಗಾಗಲೇ ಕಂಟ್ರಾಕ್ಟರ್ ಕೆಲಸವನ್ನು ಸಹ ಬಿಟ್ಟಿದ್ದಾರೆ. ಐಟಿ ದಾಳಿ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಇದೆ, ಐಟಿ ಅಕಾರಿಗಳಿದ್ದಾರೆ, ಅವರು ತನಿಖೆ ಮಾಡಲಿದ್ದಾರೆ ಎಂದರು.

ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು

ಬೆಂಗಳೂರು,ಅ.13- ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ಮೂರನೇ ಆರೋಪಿ ಪರಮಶಿವಯ್ಯಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದೆ. ಚಿತ್ರದುರ್ಗದ ಮುರುಘಾಶ್ರೀ ಮಠದ ಕಾರ್ಯದರ್ಶಿಯಾಗಿದ್ದ ಪರಮಶಿವಯ್ಯ ಪರ ವಕೀಲ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿದ್ದು, ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಇವರು ಇದೇ 17ರಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿರುವ ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಎಸ್‍ಜೆಎಂ ವಿದ್ಯಾಪೀಠದ ಮಾಜಿ ಕಾರ್ಯದರ್ಶಿ ಪರಮಶಿವಯ್ಯ ಮೂರನೇ ಆರೋಪಿಯಾಗಿದ್ದು, ಇವರನ್ನು 2022ರ ಅಕ್ಟೋಬರ್ 28ರಂದು ಬಂಧಿಸಲಾಗಿತ್ತು.

ತೆರಿಗೆ ಪಾವತಿಸದೆ ಸಂಚಾರಿಸುತಿದ್ದ ಬಸ್‍ಗಳ ಜಪ್ತಿ

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರು ಆರೋಪಿಗಳ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆಗಸ್ಟ್ 28ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಪರಮಶಿವಯ್ಯ ಅವರನ್ನು ಎರಡು ತಿಂಗಳ ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.