Homeರಾಜಕೀಯಸಂಪುಟದಲ್ಲಿ ಯುವಕರಿಗೆ ಅವಕಾಶ ನೀಡುವ ಆಸೆ ಇದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ ತೆಗೆದುಕೊಳ್ಳುತ್ತೆ :...

ಸಂಪುಟದಲ್ಲಿ ಯುವಕರಿಗೆ ಅವಕಾಶ ನೀಡುವ ಆಸೆ ಇದೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ ತೆಗೆದುಕೊಳ್ಳುತ್ತೆ : ಡಿಕೆಶಿ

DK Shivakumar

ಬೆಂಗಳೂರು, ಜು. 5- ಸಚಿವ ಸಂಪುಟ ವಿಸ್ತರಣೆಯಲ್ಲಿ ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂದು ತಮಗೂ ಆಸೆ ಇದೆ. ಆದರೆ ಕಾಂಗ್ರೆಸ್‌‍ ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹುನಗುಂದ ಕ್ಷೇತ್ರದಿಂದ ಆಗಮಿಸಿದ ಬೆಂಬಲಿಗರ ನಿಯೋಗದ ಜೊತೆ ಚರ್ಚೆ ನಡೆಸಿದ ಡಿ.ಕೆ.ಶಿವಕುಮಾರ್‌ ಅವರು, ಸಚಿವ ಸ್ಥಾನಕ್ಕಾಗಿ ಇನ್ನು ಮುಂದೆ ಯಾವ ನಿಯೋಗಗಳು ಬರಬಾರದು ಎಂದು ಹೇಳಿದರು.

ಸಂಪುಟ ವಿಸ್ತರಣೆಯ ಕುರಿತಂತೆ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಮೊದಲ ಬಾರಿ ಗೆದ್ದಿರುವ ಶಾಸಕರಿಂದ ಹಿಡಿದು, ಆರೇಳು ಬಾರಿ ಆಯ್ಕೆಯಾಗಿರುವ ಹಿರಿಯರನ್ನು ಒಳಗೊಂಡತೆ ಎಲ್ಲರಿಗೂ ಸಚಿವರಾಗಬೇಕೆಂಬ ಅಭಿಲಾಶೆಗಳಿರುತ್ತವೆ. ತಮಗೂ ಕೂಡ ಹೊಸಬರಿಗೆ ಅವಕಾಶ ನೀಡಬೇಕೆಂಬ ಆಸೆ ಇದೆ. ಆದರೆ ಸಂಪುಟದಲ್ಲಿ ಖಾಲಿಯಿರುವುದು 20 ಸ್ಥಾನಗಳು. ಹೈಕಮಾಂಡ್‌ ಜಾತಿ, ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವರನ್ನು ಆಯ್ಕೆ ಮಾಡುತ್ತದೆ ಎಂದು ಹೇಳಿದರು.

ಹುನಗುಂದ ಕ್ಷೇತ್ರಕ್ಕೆ ಬೃಹತ್‌ ನೀರಾವರಿ ಯೋಜನೆಯನ್ನು ಮಂಜೂರು ಮಾಡಲಾಗಿದೆ. ಮಧ್ಯಪ್ರದೇಶದ ಮಾದರಿಯಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಕ್ಷೇತ್ರದ ಕಾಂಗ್ರೆಸ್‌‍ ಮುಖಂಡರು ಮನವಿ ಮಾಡಿದ್ದಾರೆ. ಈ ಬಗ್ಗೆ ತಾವು ಪರಿಶೀಲಿಸುವುದಾಗಿ ಹೇಳಿದರು.

ವಿಜಯಾನಂದ ಕಾಶಪ್ಪನವರ್‌ ಅವರ ಜನಪ್ರಿಯತೆ, ಹೋರಾಟ, ಸಂಘಟನಾ ಸಾಮರ್ಥ್ಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಾಯಕತ್ವದ ಬಗ್ಗೆ ತಮಗೆ ಅರಿವಿದೆ ಎಂದರು.
ಕಾರ್ಯಕರ್ತರ ಭಾವನೆಗಳನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ. ಅದರೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನಕ್ಕಾಗಿ ಈ ರೀತಿಯ ನಿಯೋಗಗಳು ಬರುವುದು ಬೇಡ ಎಂದು ತಿಳಿಸಿದರು.

RELATED ARTICLES
spot_img

Latest News